ಮತ್ತೆ ಹೊಸ ಬಾಂಬ್ ಹಾಕಿದ ಯತ್ನಾಳ- ರಾಜ್ಯ ರಾಜಕಾರಣದ ಬಿಜೆಪಿ ಫೈರ್ ಬ್ರ್ಯಾಂಡ್ ಹೇಳಿದ್ದೇನು ಗೊತ್ತಾ?

ವಿಜಯಪುರ: ಸದಾ ಒಂದಿಲ್ಲೋಂದು ಹೇಳಿಕೆ ನೀಡುತ್ತ ಸ್ವಪಕ್ಷೀಯರಿಂದಲೂ ಟೀಕೆಗೊಳಗಾದರೂ ರಾಜ್ಯ ರಾಜಕೀಯದ ಸರಿಯಾದ ಭವಿಷ್ಯವನ್ನೇ ನುಡಿಯುತ್ತಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಗ ಮ್ತತ್ತೋಂದು ಹೊಸ ಬಾಂಬ್ ಹಾಕಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಸಂಕ್ರಾಂತಿಯ ಬಳಿಕ ರಾಜ್ಯ ಸರಕಾರ ಮತ್ತು ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಸಂಕ್ರಾಂತಿಯ ಬಳಿಕ ರಾಜ್ಯ ಸಚಿವ ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದೆ,  ಬಿಜೆಪಿ ಸಂಘಟನೆಯಲ್ಲಿ ಬದಲಾವಣೆಯಾಗಲಿದೆ,  ವಿಧಾನ ಸಭೆ ಚುನಾವಣೆಗೆ ಪಕ್ಷವನ್ನ ಬಲ ಪಡೆಸಲು ಈ ಬದಲಾವಣೆಯಾಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿನ ಎಲ್ಲ ವಿದ್ಯಮಾನಗಳನ್ನು ಪ್ರಧಾನಿಗಳ ಗುಪ್ತಚರ ಇಲಾಖೆ ಎಲ್ಲವನ್ನೂ ನೋಡುತ್ತಿದೆ,  ಕಚೇರಿಗೆ ಹೋಗದ ಸಚಿವರು ಯಾರು? ಸೇರಿದಂತೆ ಎಲ್ಲ ಬೆಳವಣಿಗೆಗಳನ್ನು ಪ್ರಧಾನಿ ನರೇಂದ್ರ ಮೋದಿ ಗಮನಿಸುತ್ತಿದ್ದಾರೆ,  ಸಂಕ್ರಾಂತಿ ಬಳಿಕ ಮೋದಿ ದೊಡ್ಡ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.  ಬಿಜೆಪಿಯಲ್ಲಿ ಮತ್ತು ಸರಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೋದಿ ಬದಲಾವಣೆ ಮಾಡಲಿದ್ದಾರೆ.  ಕಳೆದ ಸಂಕ್ರಾಂತಿಗೆ ಹೇಳಿದ್ದೆ.  ಆಗ ಒಂದು ವಿಕೆಟ್ ಹಾರಿತ್ತು ಎಂದು ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ ಘಟನೆಯನ್ನು ನೆನಪಿಸಿದ ಯತ್ನಾಳ, ಈ ಬಾರಿಯು ಸಂಕ್ರಾಂತಿಯ ವರೆಗೆ ತಡೆಯಿರಿ ಎಂದು ಯತ್ನಾಳ ಹೇಳಿದರು.

ಸಿಎಂ ಫಾರಿನ್ ಟೂರ್ ವದಂತಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅವರ ವೀಸಾ ಬಂದಿದ್ದರೇ ನನಗೆ ತೋರಿಸಿ.  ಸಿಎಂ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದರೆ ಗೊತ್ತಾಗುತ್ತಿತ್ತು.  ಸಿಎಂ ಪ್ರವಾಸ ಚಲನವಲನ ಸಾರ್ವಜನಿಕವಾಗಿರುತ್ತೆ.  ನಾನು ಸಿಎಂ ಬದಲಾವಣೆ ಬೇಡ ಅನ್ನೋದು ಇಲ್ಲ.  ಬೇಕು ಅನ್ನೋದು ಇಲ್ಲ.  ಸಿಎಂ ಬದಲಾವಣೆ ಹೈಕಮಾಂಡಿಗೆ ಬಿಟ್ಟ ವಿಚಾರ ಎಂದು ಯತ್ನಾಳ ತಿಳಿಸಿದರು.

ಮತ್ತೆ ಸಚಿವ ಸ್ಥಾನದ ಆಸೆ ಹೊರಹಾಕಿದ ಅವರು, ಗಟ್ಸ್ ಇರೋರು ಗೃಹ ಸಚಿವರಾಗಬೇಕು.  ನಮ್ಮಂಥವರ ಕೈಯ್ಯಲ್ಲಿ ಹ ಇಲಾಖೆ ಕೊಟ್ಟರೆ ಬರೊಬ್ಬರಿ ಮಾಡುತ್ತೇವೆ.  ದೇಶವಿರೋಧಿ ಚಟುವಟಿಕೆ ಮಾಡುವವರನ್ನು, ಉಪಾದ್ಯಾಪಿಗಳಿಗೆ ಸರಿಯಾಗಿ ಮಾಡ್ತೀವಿ.  ಈಗಿನ ಗೃಹ ಮಂತ್ರಿ ಒಳ್ಳೆಯರು.  ಪ್ರಾಮಾಣಿಕರು,  ಅರಗ ಜ್ಞಾನೇಂದ್ರ ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೂಕ್ತರಾಗಿದ್ದಾರೆ ಎಂದು ತಿಳಿಸಿದರು.

ಜ. 14ರ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ.  ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಬದಲಾಗಲಿದ್ದಾರೆ. ಸಂಪುಟ ಪುನಾರಚನೆಯ ಬಗ್ಗೆ ಸಿಎಂ ಸುಳಿವು ಕೊಟ್ಟಿದ್ದಾರೆ.  ಎಲ್ಲ ಜಿಲ್ಲೆಗಳಿಗೂ ಸೂಕ್ತ ಪ್ರಾತಿನಿಧ್ಯ ಸಿಗಲಿದೆ.  ಸೂಕ್ತವಾದವರು ಉಸ್ತುವಾರಿ ಸಚಿವರಾಗುತ್ತಾರೆ.  ನನಗೆ ಪಕ್ಷ ಸಿಹಿ ಸುದ್ದಿ ಕೊಡಲಿದೆ ಎಂದು ಯತ್ನಾಳ ತಿಳಿಸಿದರು.

ಎಂ ಇ ಎಸ್ ಪುಂಡಾಟಿಕೆ ಖಂಡಿಸಿ, ಬ್ಯಾನ್ ಮಾಡುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳಿಂದ ಶುಕ್ರವಾರ ಕರ್ನಾಟಕ ಬಂದ್ ಮಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ಈಗಾಗಲೇ ಸಿಎಂ ಅವರು ಕನ್ನಡಪರ ಸಂಘಟನೆಗಳಿಗೆ ವಿನಂತಿ ಮಾಡಿದ್ದಾರೆ.  ಬಂದ್ ಮಾಡುವುದರಿಂದ ಏನು ಲಾಭ್? ಆ ಘಟನೆ ಆಗಿದ್ದು ಮಹಾರಾಷ್ಟ್ರದಲ್ಲಿ,  ಹಾಗಾಗಿ ಕರ್ನಾಟಕ ಬಂದ್ ಮಾಡುವುದರಿಂದ ಕರ್ನಾಟಕದ ವ್ಯಾಪಾರಸ್ಥರಿಗೆ, ಜನರಿಗೆ ಸಮಸ್ಯೆ ಆಗಲಿದೆ.  ಮೊದಲೇ ಕರೋನಾದಿಂದ ತಿಂಗಳಾನುಗಟ್ಟಲೇ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರಿಂದ ಇಡೀ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗಿದೆ.

ಪದೇ ಪದೇ ಈ ರೀತಿ ಬಂದ್ ಮಾಡುವುದರಿಂದ ಒಂದು ರೀತಿಯ ದಿವಾಳಿಯತ್ತ ನಾವೇ ಒಯ್ದಂಗಾಗುತ್ತೆ..  ಈಗಾಗಲೇ ವಿಧಾನ ಸಭೆಯಲ್ಲಿ ನಾವೆಲ್ಲ ಸೇರಿ ಎಂಇಎಸ್ ಪುಂಡರ ವಿರುದ್ಧ ಠಾರಾವು ಮಾಡಲಾಗಿದೆ.  ಎಲ್ಲ ಪಕ್ಷದವರು ಸೇರಿ ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ.  ಮಹಾರಾಷ್ಟ್ರ ಸರ್ಕಾರಕ್ಕೂ ಸಹ ಕರ್ನಾಟಕದ ಡಿಜಿ, ಐಜಿಪಿ, ಹೋಂ ಸೆಕ್ರೆಟರಿ ಅವರು ಮಾತನಾಡಿ, ಕರ್ನಾಟಕದ ಧ್ವಜ ಸುಟ್ಟು ಕನ್ನಡಕ್ಕೆ ಅವಮಾನಿಸುವುದು ಸರಿಯಲ್ಲ ಎಂದಿದ್ದಾರೆ.  ಮರಾಠಿ, ಕನ್ನಡ, ಹಿಂದಿ ನಮ್ಮ ದೇಶದ ಭಾಷೆಗಳಾಗಿವೆ, ಎಲ್ಲದಕ್ಕೂ ಗೌರವ ಕೊಡುವಂತದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.  ಆದ್ರೆ ಮರಾಠಿ ಮತ್ತು ಕನ್ನಡ ಎಂದು ಜಗಳ ಹಚ್ಚಿ, ರಾಜಕೀಯ ಲಾಭಕ್ಕಾಗಿ ಒಂದು ರಾಷ್ಟ್ರೀಯ ಪಕ್ಷದ ಸಂಚಿನಿಂದ ಧ್ವಜ ಸುಡಲಾಗಿದೆ.  ಯಾರಾರು ಪುಂಡಾಟಿಕೆ ಮಾಡಿದ್ದಾರೋ ಅವರ ಬಗ್ಗೆ ಸರಕಾರ ಗಂಭೀರವಾಗಿ ತೆಗೆದುಕೊಂಡಿದೆ.  ಅವರ ವಿರುದ್ಧ ಗೂಂಡಾ ಆಕ್ಟ್ ತೆರೆಯೋಲೂ ಮುಂದಾಗಿದೆ.  ಸರಕಾರ ಇಷ್ಟೆಲ್ಲ ಭರವಸೆ ಕೊಟ್ಟ ಮೇಲೆ, ಹೋರಾಟ ಮಾಡುವುದರಿಂದ ಜನಸಾಮಾನ್ಯರಿಗೆ ತಪ್ಪು ಸಂದೇಶ ರವಾನೆಯಾಗಲಿದೆ.  ಎಲ್ಲರೂ ಶಾಂತ ರೀತಿಯಿಂದ ಪ್ರತಿಭಟನೆ ಮಾಡಿ ಮನವಿ ಕೊಡಿ.  ಕರ್ನಾಟಕ ಬಂದ್ ಮಾಡುವ ಅವಶ್ಯಕತೆ ಇಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Leave a Reply

ಹೊಸ ಪೋಸ್ಟ್‌