ಹೊಸ ವರ್ಷಾಗಮನ ಹಿನ್ನೆಲೆ ಕವಿತೆ ರಚಿಸಿದ ಚರ್ಮರೋಗ ಖ್ಯಾತ ವೈದ್ಯ ಡಾ. ಅರುಣ ಇನಾಮದಾರ

ವಿಜಯಪುರ: ವಿಜಯಪುರ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಮತ್ತು ಚಿಕಿತ್ಸೆಯ ಮೂಲಕ ಎಲ್ಲೆಡೆ ಹೆರಾಗಿರುವ ಚರ್ಮರೋಗ ತಜ್ಞ ಡಾ. ಅರುಣ ಇನಾಮದಾರ ಉತ್ತಮ ಬರಹಗಾರರು, ಅನುವಾದಕರು ಎಂಬುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ.

ಅವರು ಈಗಾಗಲೇ ಶರಣ ಅಲ್ಲಮಪ್ರಭುವಿನ ಕ್ಲಿಷ್ಟಕರಚಾದ ವಚನಗಳನ್ನು ಆಂಗ್ಲ ಭಾಷೆಗೆ ಅನುವಾದಿಸುವ ಮೂಲಕ ಗಮನ ಸೆಳೆದಿದ್ದಾರೆ.

ಈಗ 2022ಕ್ಕೆ ಶುಭ ಕೋರಲು ಡಾ. ಅರುಣ ಇನಾಮದಾರ ಕವನವೊಂದನ್ನು ರಚಿಸಿದ್ದಾರೆ.

ಆ ಕವನ ಇಲ್ಲಿದೆ.

ಡಾ. ಅರಣ ಇನಾಮದಾರ
ಖ್ಯಾತ ಚರ್ಮ ವೈದ್ಯ

ಬಾ ಹೊಸ ವರುಷ..

ಕಳೆಯುತಿದಿದೆ ಕೋರೊನಾ ವರ್ಷ

ಹೋಯಿತು ಕರಾಳ ವರುಷದ ದಿನ

ಕನಸುಗಳು ಚೂರಾದವು

ಮನಸುಗಳು ದೂರಾದವು

ಸಾಮಾಜಿಕ ಅಂತರದಿಂದ ಅನಂತ ದೂರಾದೆವು ಸಮಾಜದಿಂದ

ಮುಖಕವಚ ಧರಿಸಿ ನಾವು ಉಳಿದೆವು

ಮುಖ, ಮನಸ್ಸಿನ ಭಾವನಗಳನ್ನು ಕಳೆದು ಕೊಂಡೆವು

ಸಾವು ನೋವುಗಳಲ್ಲಿ ಪಾಲ್ಗೊಳ್ಳದೆ

ಕಲ್ಲು ಮನಸ್ಕರಾಗಿ ದಿನಗಳೆದೆವು

ಸಂಬಂಧಗಳು ಅಸಂಬಂಧಗಳಾದವು

ನಮ್ಮ ನಾವನ್ನು ಅರಿಯಲು ಹೆಣಗಾಡಿದೆವು

ಮುಂದಿನ ವರ್ಷ ಹರುಷ ತಂದಿತೇ?

ಈ ಪ್ರಶ್ನೆಗೆ… ಕೊರೊನಾ ತಳಿಗಳೆ ಉತ್ತರಿಸಬೇಕು…

ಕಾಲಾಯ ತಸ್ಮಯೇ ನಮಹಃ

ಹೊಸ ವರುಷ ಬರಲಿ… ಹರುಷ ತರಲಿ…

ಕೊರೊನಾದಂಥ ಬೆದರಿಕಿಗೆ ಬಗ್ಗದೆ ತಗ್ಗದೆ

ಹೊಸ ವರುಷವನು ಸಂಭ್ರಮಿಸೋಣ.

Leave a Reply

ಹೊಸ ಪೋಸ್ಟ್‌