ಕೊರೊನಾ ಮಹಾತಂಕ ಹಿನ್ನೆಲೆ- ವಿಜಯಪುರ ಗಡಿಯಲ್ಲಿ 11 ಚೆಕ್ ಪೋಸ್ಟ್ ತೆರೆಯಲಾಗಿದೆ- ರಾಜ್ಯದಲ್ಲಿ ನೈಟ್ ಕರ್ಫ್ಯೂ ಬಗ್ಗೆ ಚರ್ಚಿಸಿ ಕ್ರಮ- ಬಸವರಾಜ ಬೊಮ್ಮಾಯಿ

ಬೆಳಗಾವಿ: ಕಳೆದ ಒಂದು ವಾರದಲ್ಲಿ ಕರೋನಾ ಒಮಿಕ್ರಾನ್ ಕೇಸ್ ಹೆಚ್ಚಾಗಿವೆ.  ಮಹಾರಾಷ್ಟ್ರ ಅದರಲ್ಲಿಯೂ ಮುಂಬೈಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.  ಮುಂಬೈ ಮತ್ತು ಕರ್ನಾಟಕದ ವಹಿವಾಟು ಜಾಸ್ತಿಯಿರುವ ಕಾರಣ ಗಡಿಜಿಲ್ಲೆಗಳಲ್ಲಿ ಹೆಚ್ಚಿನ ಕಟ್ಟೆಚ್ಚರವನ್ನು ವಹಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.   ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎರಡು ಡೋಸ್ ಕೊರೊನಾ ಲಸಿಕೆ ಕಡ್ಡಾಯ ಹಾಗೂ ಆರ್ ಟಿಪಿಸಿಆರ್ ಪರೀಕ್ಷೆಯ ಪ್ರಮಾಣಪತ್ರ ಕಡ್ಡಾಯವಾಗಿ ಹೊಂದಿದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ […]

ಎಳ್ಳ ಅಮವಾಸ್ಯೆ ಚರಗಾ ಚೆಲ್ಲುವ ಹಬ್ಬದ ಸಂಭ್ರಮ- ಬಸವ ನಾಡಿನಲ್ಲಿ ಕಳೆತಂದ ಆಚರಣೆ

ವಿಜಯಪುರ: ಇಂಗ್ಲಿಷ್ ಕ್ಯಾಲೆಂಡರ್ ಹೊಸ ವರ್ಷದಲ್ಲಿ ಹಿಂದೂಗಳ ಪಾಲಿಗೆ ಚರಗಾ ಚೆಲ್ಲುವ ಹಬ್ಬಎಂದೇ ಖ್ಯಾತಿಯಾಗಿರುವ ಎಳ್ಳಮವಾಸ್ಯೆಯನ್ನು ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ರೈತರು ಮತ್ತು ಸಾರ್ವಜನಿಕರು ಭೂತಾಯಿಯೊಂದಿಗೆ ಅನನ್ಯ ಸಂಬಂಧ ಹೊಂದಿರುವ ಮತ್ತು ಭೂತಾಯಿ ಹಾಗೂ ಬೆಳೆಯನ್ನು ಪೂಜಿಸುವ ಈ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ರೈತರು ತಂತಮ್ಮ ಹೊಲಗಳಲ್ಲಿ ಸಿಹಿಯಾದ ತರಹೇವಾರಿ ಖಾದ್ಯಗಳನ್ನು ತೆಗೆದುಕೊಂಡು ಹೋಗಿ ಭೂತಾಯಿ ಮತ್ತು ಬೆಳೆಗೆ […]

ಆಹಾರ ಪದಾರ್ಥಗಳ ಕಸದಿಂದ ಗೊಬ್ಬರ ತಯಾರಿಸುವ ಯಂತ್ರ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಆಹಾರ ಮತ್ತು ತಿನ್ನುವ ಪದಾರ್ಥಗಳಿಂದ ಉಂಟಾಗುವ ಕಸದಿಂದ ಗೊಬ್ಬರ ತಯಾರು ಮಾಡುವ ಯಂತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಉದ್ಘಾಟಿಸಿದರು. ಪ್ರತಿ ಸಲ 100 ರಿಂದ 150 ಕೆಜಿ ತ್ಯಾಜ್ಯ ಆಹಾರ ಪದಾರ್ಥಗಳಿಂದ ಈ ಯಂತ್ರದಲ್ಲಿ ಗೊಬ್ಬರ ತಯಾರಿಸಬಹುದಾಗಿದೆ. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಶಾಸಕ ಸತೀಶ ರೆಡ್ಡಿ ಮತ್ತು ಇತರರು ಉಪಸ್ಥಿತರಿದ್ದರು  

ವಿಜಯಪುರ ಜಿಲ್ಲಾ ಪಂಚಾಯಿತಿಯ ಗ್ರಾಮ ವಾಣಿ ಮಾಸಿಕ ಪತ್ರಿಕೆ ಬಿಡುಗಡೆ

ವಿಜಯಪುರ: ವಿಜಯಪುರ ಜಿಲ್ಲಾ ಪಂಚಾಯಿತಿಯ ಗ್ರಾಮ ವಾಣಿ ಮಾಸಿಕ ಪತ್ರಿಕೆ ಬಿಡುಗಡೆ ಸಮಾರಂಭ ವಿಜಯಪುರ ಜಿ. ಪಂ. ಕಾರ್ಯಾಲಯದಲ್ಲಿ ನಡೆಯಿತು. ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಮಾಸ ಪತ್ರಿಕೆ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ಅಭಿವೃದ್ಧಿಗೊಸ್ಕರ ಜಿ. ಪಂ, ತಾ. ಪಂ, ಹಾಗೂ ಗ್ರಾ, ಪಂ, ಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಗಲಿರುಳು ದುಡಿಯುತ್ತಿದ್ದಾರೆ.  ಅವರು ಕೈಗೊಂಡಿರುವ ಕಾಮಗಾರಿಗಳಲ್ಲಿ ಯಶಸ್ವಿಯಾದ ಪ್ರಮುಖ ಕೆಲ ಕಾಮಗಾರಿಗಳ ಮಾಹಿತಿಯನ್ನು ಒಳಗೊಂಡಿರುವ […]

ಸಂಜಯ ಪಾಟೀಲ ಕನಮಡಿ ಕೇಂದ್ರ ಭಾರತೀಯ ಕೃಷಿ ವಿಜ್ಞಾನ ಪರಿಷತ್ತಿಗೆ ನಾಮನಿರ್ದೇಶನ

ವಿಜಯಪುರ: ಬಿಜೆಪಿ ಯುವ ಮುಖಂಡ ಸಂಜಯ ಪಾಟೀಲ ಕನಮಡಿ ಅವರನ್ನು ಕೇಂದ್ರ ಸರಕಾರದ ಭಾರತೀಯ ಕೃಷಿ ವಿಜ್ಞಾನ ಪರಿಷತ್ತಿಗೆ(ಐಸಿಎಆರ್) ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ ಗ್ರಾಮದವರಾಗಿರುವ ಸಂಜಯ ಪಾಟೀಲ ಕನಮಡಿ ಅವರನ್ನು ಪುಣೆಯಲ್ಲಿರುವ ಐ ಸಿ ಎ ಆರ್-ಎನ್ ಆರ್‌ ಸಿ ದ್ರಾಕ್ಷಿ ವಿಭಾಗಕ್ಕೆ ಅಧಿಕಾರೇತರ ಸದಸ್ಯರನ್ನಾಗಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ ಎಂದು ವಿಜಯಪುರ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. […]

ಕಲಾವಿದ ಮುಸ್ತಾಕ ತಿಕೋಟಾ ಅವರ ಏಕವ್ಯಕ್ತಿ ಕಲಾ ಪ್ರದರ್ಶನ- ಡಾ. ಮಹಾಂತೇಶ ಬಿರಾದಾರ ಉದ್ಘಾಟನೆ

ವಿಜಯಪುರ: ವಿಜಯಪುರ ನಗರದ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಧನ ಸಹಾಯದಲ್ಲಿ ಕಲಾವಿದ ಮುಸ್ತಾಕ ತಿಕೋಟಾ ಅವರ ಏಕವ್ಯಕ್ತಿ ಕಲಾ ಪ್ರದರ್ಶನ ನಡೆಯಿತು. ಕಲಾ ಪ್ರದರ್ಶನವನ್ನು ಡಾ.ಮಹಾಂತೇಶ ಬಿರಾದಾರ ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು, ಕಲಾವಿದರಿಗೆ ಯಾವ ಚೌಕಟ್ಟು ಇರಬಾರದು,  ಆದರೆ ಇತ್ತೀಚಿಗೆ ಸೆನ್ಸಾರ್ ನೆಪದಲ್ಲಿ ಕಲಾವಿದರಿಗೆ ಚೌಕಟ್ಟು ಹಾಕುವ ಕಾರ್ಯ ನಡೆಯುತ್ತಿರುವುದು ನೋವಿನ ಸಂಗತಿ,  ಕಲಾವಿದರಿಗೆ ಮುಕ್ತವಾದ ಚೌಕಟ್ಟು, ನೆಲೆಗಟ್ಟು ಇದೆ.  ಇದನ್ನು ಹತ್ತಿಕ್ಕುವ ಕೆಲಸ ಆಗಬಾರದು ಎಂದು ಹೇಳಿದರು. ಕಲಾವಿದನ ವೈಚಾರಿಕ […]

ಡಾ. ಬಿದರಿ ಅಶ್ವಿನಿ ಆಸ್ಪತ್ರೆ ವತಿಯಿಂದ ಕೂಡಗಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ- ಸುಮಾರು 300 ಜನರ ಆರೋಗ್ಯ ತಪಾಸಣೆ

ವಿಜಯಪುರ: ವಿಜಯಪುರದ ಪ್ರತಿಷ್ಠಿತ ಡಾ. ಬಿದರಿಯವರ ಅಶ್ವಿನಿ ಆಸ್ಪತ್ರೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ವಿಜಯಪುರ ಶಾಖೆ, ಅಶ್ವಿನಿ ಸ್ಕೂಲ್ ಆಫ್ ನರ್ಸಿಂಗ್ ಸೈನ್ಸಸ್ ವಿಜಯಪುರ, ಬಿ ಎಲ್ ಡಿ ಇ ಸಂಸ್ಥೆಯ ಎ. ಎಸ್. ಪಾಟೀಲ ಕಾಲೇಜ್ ಆಫ್ ಕಾಮರ್ಸ, ಹಾಗೂ ಕೂಡಗಿ ಪವರ್‍ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ 400 ಕೆವಿ ಉಪಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ವಿಜಯಪುರ ಜಿಲ್ಲೆಯ ಕೂಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.  ಆಜಾದಿ ಕಾ ಅಮೃತ ಮಹೋತ್ಸವದ […]