ಡಾ. ಬಿದರಿ ಅಶ್ವಿನಿ ಆಸ್ಪತ್ರೆ ವತಿಯಿಂದ ಕೂಡಗಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ- ಸುಮಾರು 300 ಜನರ ಆರೋಗ್ಯ ತಪಾಸಣೆ

ವಿಜಯಪುರ: ವಿಜಯಪುರದ ಪ್ರತಿಷ್ಠಿತ ಡಾ. ಬಿದರಿಯವರ ಅಶ್ವಿನಿ ಆಸ್ಪತ್ರೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ವಿಜಯಪುರ ಶಾಖೆ, ಅಶ್ವಿನಿ ಸ್ಕೂಲ್ ಆಫ್ ನರ್ಸಿಂಗ್ ಸೈನ್ಸಸ್ ವಿಜಯಪುರ, ಬಿ ಎಲ್ ಡಿ ಇ ಸಂಸ್ಥೆಯ ಎ. ಎಸ್. ಪಾಟೀಲ ಕಾಲೇಜ್ ಆಫ್ ಕಾಮರ್ಸ, ಹಾಗೂ ಕೂಡಗಿ ಪವರ್‍ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ 400 ಕೆವಿ ಉಪಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ವಿಜಯಪುರ ಜಿಲ್ಲೆಯ ಕೂಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. 

ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಹಾಗೂ ಪವರ್‍ಗ್ರಿಡ್‍ನ ವಾರ್ಷಿಕೋತ್ಸವದ ಅಂಗವಾಗಿ ನಡೆದ ಈ ಆರೋಗ್ಯ ತಪಾಸಣಾ ಶಿಬಿರವನ್ನು ಪವರಗ್ರಿಡ್‍ನ ಜನರಲ್ ಮ್ಯಾನೇಜರ್ ಪಿ. ವೆಂಕಟಪತಿ ಉದ್ಘಾಟಿಸಿದರು.

ವಿಜಯಪುರ ನಗರದ ಚಿಕ್ಕಮಕ್ಕಳ ಖ್ಯಾತ ತಜ್ಞ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಚೇರಮನ್ ಡಾ, ಎಲ್. ಎಚ್. ಬಿದರಿ ಮಾತನಾಡಿ, ಈ ಶಿಬಿರದಲ್ಲಿ ತಪಾಸಣೆಗೊಳಗಾದ ರೋಗಿಗಳಿಗೆ ಅಶ್ವಿನಿ ಆಸ್ಪತ್ರೆಯಲ್ಲಿ ಹೊರರೋಗಿ ತಪಾಸಣೆಯನ್ನು ಉಚಿತವಾಗಿ ಮಾಡಲಾಗುವುದು.  ಉಳಿದ ವೈದ್ಯಕೀಯ ಪರೀಕ್ಷೆಗಳನ್ನು ರಿಯಾಯತಿ ದರದಲ್ಲಿ ಮಾಡಲಾಗುವುದು ಎಂದು ತಿಳಿಸಿದರು.

ವಿಜಯಪುರ ನಗರದ ಡಾ. ಬಿದರಿಯವರ ಅಶ್ವಿನಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಅಮೃತಾ, ಫಿಜಿಶಿಯನ್ ಡಾ. ಸುಷ್ಮಿತಾ ಮನಗೂಳಿ, ಶಸ್ತ್ರಚಿಕಿತ್ಸಕರಾದ ಡಾ. ಜಸ್ಪಾಲಸಿಂಗ್, ಡಾ. ಅಭಿಜಿತ ದೇವಗಿರಕರ, ಎಲುವು ಮತ್ತು ಕೀಲು ತಜ್ಞರಾದ ಡಾ. ಸಂದೀಪ ನಾಯಕ, ಡಾ. ಪ್ರಶಾಂತ, ಸ್ತ್ರೀರೋಗ ತಜ್ಞರಾದ ಡಾ.  ಮನಪ್ರೀತಸಿಂಗ್, ನೇತ್ರ ತಜ್ಞರಾದ ಡಾ. ರಶ್ಮಿ ಚಿತ್ತವಾಡಗಿ ಅವರು ಈ ಶಿಬಿರದಲ್ಲಿ ಕೂಡಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುಮಾರು 300 ಕ್ಕೂ ಅಧಿಕ ರೋಗಿಗಳನ್ನು ತಪಾಸಣೆ ನಡೆಸಿ ಎಲ್ಲರಿಗೂ ಉಚಿತ ಔಷಧಿಗಳನ್ನು ನೀಡಿದರು. ಈ ಶಿಬಿರದಲ್ಲಿ ಮೆಡಿಕಲ್ ಆಫೀಸರ್ ಡಾ. ಗೋವಿಂದರಾಜ, ಕೂಡಗಿ ಗ್ರಾ. ಪಂ. ಅಧ್ಯಕ್ಷರು, ಅಶ್ವಿನಿ ಆಸ್ಪತ್ರೆಯ ಆಡಳಿತಾಧಿಕಾರಿ ಪ್ರಕಾಶ ಮಠ, ಲಕ್ಷ್ಮಣ ಲಗಳಿ, ಎ. ಎಸ್. ಪಾಟೀಲ, ಕಾಮರ್ಸ ಕಾಲೇಜಿನ ಪ್ರಾಂಶುಪಾಲರು, ರೆಡ್ ಕ್ರಾಸ್ ವೈಸ್ ಚೇರಮನ್ ಶರದ ರೊಡಗಿ, ಅಶ್ವಿನಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪವರ್‍ಗ್ರಿಡ್‍ನ ಸಿಬ್ಬಂದಿ ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌