ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ 16 ಜನೇವರಿ 2021 ರಿಂದ ಈಗಾಗಲೇ ಕೊರೊನಾ ಲಸಿಕೆಯನ್ನು ನೀಡಲಾಗುತ್ತಿದ್ದು. ಈಗಾಗಲೇ ಶೇ. 100ಕ್ಕೂ ಹೆಚ್ಚು ಗುರಿ ಸಾಧಿಸಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ 1634000 ಫಲಾನುಭವಿಗಳಿಗೆ ಕೊರೊನಾ ಲಸಿಕೆ ನೀಡುವ ಗುರಿ ಇತ್ತು. ಆದರೆ, ಈಗಾಗಲೇ ನಿಗದಿತ ಗುರಿ ಮೀರಿ ಲಸಿಕೆಯನ್ನು 1661047 ಫಲಾನುಭವಿಗಳು ನೀಡು ಮೂಲಕ ಶೇ. 100ಕ್ಕಿಂತಲೂ ಹೆಚ್ಚಿನ ಗುರಿ ಸಾಧಿಸಲಾಗಿದೆ. ಅದರಂತೆ 1336713 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದ್ದು, ಶೇ. 81.81 ಗುರಿ ಸಾಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅದರಂತೆ 15 ರಿಂದ 18 ವರ್ಷದೊಳಿಗೆ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಮೊದಲನೇ ದಿನ ಉತ್ತಮ ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ 123438 ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಗುರಿ ಇದ್ದು, ಮೊದಲ ದಿನ ಜಿಲ್ಲೆಯಲ್ಲಿ 20 ಸಾವಿರ ಗುರಿಯ ಪೈಕಿ 193 ಪದವಿ ಪೂರ್ವ ಕಾಲೇಜುಗಳಲ್ಲಿ 18626 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ. 93.13 ಸಾಧನೆಯನ್ನು ಮಾಡಲಾಗಿದೆ. ಕೋವ್ಯಾಕ್ಸಿನ್ ಲಸಿಕೆ ಪಡೆದ ಮಕ್ಕಳಿಕೆ 28 ದಿನಗಳ ನಂತರ ಮತ್ತು ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡ ಮಕ್ಕಳಿಗೆ 84 ದಿನಗಳ ನಂತರ ಎರಡನೇ ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಫಲಾನುಭವಿಗಳು ನೋಂದಣಿಯನ್ನು ಖಚಿತ ಪಡೆಸಿಕೊಂಡು ತಕ್ಷಣ ಲಸಿಕೆಯನ್ನು ಪಡೆಯಬೇಕು. ಲಸಿಕೆಯಿಂದ ಯಾರು ಕೂಡ ವಂಚಿತರಾಗಬಾರದು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.