ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಸಮೃದ್ಧಿಯಾಗುತ್ತದೆ- ಶ್ರೀ ಸಿದ್ಧೇಶ್ವರ ಸ್ವಾಮೀಜಿ

ವಿಜಯಪುರ: ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಸಮೃದ್ಧಿಯಾಗುತ್ತದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸುಕ್ಷೇತ್ರ ಉಪ್ಪಲದಿನ್ನಿಯಲ್ಲಿ ಉಪ್ಪಲಗಿರಿ ಸಂಗಮನಾಥ ದೇವಸ್ಥಾನದ ಆವರಣದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಗಳು, ಭೂಮಿತಾಯಿ ನಾವೆಲ್ಲರೂ ಸಂತೋಷದಿಂದ ಇರಲು ಬಾಳೆ,  ಕಬ್ಬು, .ಮಾವು, ಲಿಂಬೆ, ಸೇಬು,  ದ್ರಾಕ್ಷಿ, ಬಿಳಿಜೋಳ, ಗೋದಿ,  ತೊಗರಿ, ಹೆಸರು, ಸಜ್ಜೆ, ಕುಸಿಬಿ, ಸೂರ್ಯಪಾನ, ತಿನ್ನುವ ಎಣ್ಣೆಯ ಕಾಳುಗಳು ಹಾಗೂ ನಾನಾ ಧಾನ್ಯಗಳನ್ನು ಭೂಮಿತಾಯಿ ಕೊಡುತ್ತಾಳೆ.  ಹಗಲು-ರಾತ್ರಿಯೆನ್ನದೆ ಅನ್ನ ಬೆಳೆಯುವ ರೈತ ಈ ದೇಶದ ಎಲ್ಲ ಜನತೆಗೆ ಊಟ ಉಣಬಡಿಸುತ್ತಾರೆ.  ಆದರೆ, ವಜ್ರ, ವೈಢೂರ್ಯಗಳನ್ನು ತಿನ್ನಲು ಆಗುವುದಿಲ್ಲ.  ಒಂದು ಬೊಗಸೆ ಅನ್ನ ಇರದಿದ್ದರೆ ತೊಂದರೆಯಾಗುತ್ತದೆ.  ನೀವು ಬೆಳೆದ ಅನ್ನವನ್ನು ದೇವರೆಂದು ಕಾಣಬೇಕು ಎಂದು ಹೇಳಿದರು.

ಸಹಕಾರಿ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ವಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಮತ್ತು ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಎಸ್. ಪಾಟೀಲ ಮಾತನಾಡಿ, ಸಹಕಾರಿ ರಂಗದಲ್ಲಿ ರೈತರಿಗೆ ಅನೇಕ ಯೋಜನೆಗಳಿವೆ.  ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.  ಬ್ಯಾಂಕುಗಳ ಅಭಿವೃದ್ಧಿಗೆ ಎಲ್ಲ ರೈತರ ಸರಕಾರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಉದ್ಘಾಟಿಸಿದ ಮಾಜಿ ಡಿಸಿಎಂ ಲಕ್ಷ್ಮಣ ಸಂಗಪ್ಪ ಸವದಿ ಮಾತನಾಡಿ, ಬ್ಯಾಂಕುಗಳಿಂದ ಹಾಗೂ ಸಂಘಗಳಿಂದ ಸರಿಯಾದ ಸಮಯಕ್ಕೆ ಹಣವನ್ನು ತುಂಬಿದರೆ ಬಡ್ಡಿ ರಹಿತವಾಗಿ ರೈತರಿಗೆ ಹಣ ಕೊಡಬೇಕು.  ಅಂದಾಗ ಮಾತ್ರ ನಮ್ಮ ದೇಶದಲ್ಲಿ ಅನ್ನದಾತನ ಸೇವೆ ಸಲ್ಲಿಸದಂತಾಗುತ್ತದೆ.  ಶ್ರೀ ಸಂಗಮನಾಥನ ಕ್ಷೇತ್ರ ಯಾವುದೇ ಕಾರ್ಯಕ್ಕೂ ಈ ಭಾಗದ ಜನತೆ ರೈತರು ಹೆಚ್ಚು ಸಮಯವನ್ನು ಕೊಡುತ್ತಾರೆ  ಅಚ್ಚುಕಟ್ಟುತನವಾಗಿ ಕ್ಷೇತ್ರದ ಅಭಿವೃದ್ಧಿಗೆ ಈ ನಾಡಿನ ಒಳಿತಿಗಾಗಿ ದುಡಿಯುತ್ತಾರೆ ಎಂದು ಹೇಳಿದರು.

ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ ಮಾತನಾಡಿ, ಕೊರ್ತಿ- ಕೋಲ್ಹಾರ ಸೇತುವೆ ಹುಬ್ಬಳ್ಳಿಯಿಂದ- ವಿಜಯಪುರ ರಾಷ್ಟ್ರೀಯ ಹೆದ್ದಾರಿ, ಬಹು ಹಳ್ಳಿಗಳ ಕುಡಿಯುವ ನೀರಿನ ಯೋಜನೆ, ವಿದ್ಯುತ್ ಉತ್ಪಾದನೆ ಆಗುತ್ತಿರುವ ಕೂಡಗಿ ಮತ್ತು ಜಿಲ್ಲೆಯ ಎಲ್ಲ ತಾಲೂಕುಗಳು ಜನತೆ, ಪೂಜ್ಯರು ಮತ್ತು ಜನಪ್ರತಿನಿಧಿಗಳಿಂದ ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಜಯಪುರ ವನಶ್ರೀ ಸಂಸ್ಥಾನಮಠದ ಡಾ. ಜಯಬಸವ ಕುಮಾರ ಮಹಾಸ್ವಾಮಿಗಳು, ಭೈರವಾಡಗಿ ಶ್ರೀ ಗುರುಪಾದ ಸ್ವಾಮಿಗಳು, ಮಮದಾಪುರ ಶ್ರೀ ಅಭಿನವ ಮುರುಗೇಂದ್ರ ಮಹಾಸ್ವಾಮಿಗಳು, ಉಪ್ಪಲದಿನ್ನಿ ಶ್ರೀ ಸಿದ್ದಲಿಂಗಯ್ಯ ಹಿರೇಮಠ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯುವ ಪ್ರಮಾಣ ಸಂಸ್ಥೆ ಬೆಂಗಳೂರು ಅಧ್ಯಕ್ಷ ವಿಜುಗೌಡ ಎಸ್. ಪಾಟೀಲ, ಮಮದಾಪುರ ಗ್ರಾ. ಪಂ. ಅಧ್ಯಕ್ಷೆ ಗಂಗೂಬಾಯಿ ಸಿಂಧೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಗಂಗೂರ, ಗುರುಲಿಂಗಪ್ಪ ಅಂಗಡಿ, ಸಂಗು ಸಜ್ಜನ, ರವಿ ಲೋಣಿ, ಸಿದ್ದಪ್ಪ ಬೀಳಗಿ, ಅಶೋತಗೌಡ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಕೃಷ್ಣಾ ಜಿ. ಕುಲಕರ್ಣಿ, ಶಿವನಗೌಡ ಬಿರಾದಾರ, ಗೌಡಪ್ಪಗೌಡ ಪಾಟೀಲ, ಅಶೋಕ ಗುಡದಿನ್ನಿ, ಬಿ. ಜಿ. ಮೆಂಡೆಗಾರ, ಸಿ. ಬಿ. ಚಿಕ್ಕಾಡಿ, ಸಿ. ಬಿ.  ನಿಂಬಾಳ, ಎಸ್. ಡಿ. ಬಿರಾದಾರ, ಸತೀಶ ಪಾಟೀಲ, ಮಲ್ಲಪ್ಪ ಗಾಣಿಗೇರ, ಸಂಘದ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ, ಉಪಾಧ್ಯಕ್ಷರಾದ ಮಲ್ಲಪ್ಪ ಕುರುಬರ ಹಾಗೂ ಸರ್ವ ನಿರ್ದೇಶಕರು ಸಿಬ್ಬಂದಿ ವರ್ಗ ಮತ್ತು ಸುತ್ತಮುತ್ತಲಿನ ನಾನಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ರೈತರು ಉಪಸ್ಥಿತರಿದ್ದರು.

ಡಾ. ಗಿರೀಶ ಹೂಗಾರ ಸ್ವಾಗತಿಸಿದರು.  ಎಚ್. ವೈ. ಹಳಂಗಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಎಂ. ಎಂ. ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.  ಎ. ಎಸ್. ಪಾಟೀಲ ವಂದಿಸಿದರು.  ಡಿ. ಎಸ್. .ಕೂಲಕಾರ ನಿರೂಪಿಸಿದರು.

 

Leave a Reply

ಹೊಸ ಪೋಸ್ಟ್‌