ವಿಜಯಪುರ: ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜು ಪ್ರಾಧ್ಯಾಪಕಿ ಕವಿತಾ ಕೆ. ಅವರು ಬರೆದ ಎ ಕಾಂಪ್ರಹೆನ್ಸಿವ್ ಮ್ಯಾನ್ಯುಯಲ್ ಆಫ್ ಪೀಡಿಯಾಟ್ರಿಕ್ ನರ್ಸಿಂಗ್ ಪ್ರೊಸೀಜರ್ಸ್ 2 ನೇ ಆವೃತ್ತಿಯ ಪುಸ್ತಕವನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ರಾಘವೇಂದ್ರ ಕುಲಕರ್ಣಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಶೋಧನಾ ಕಾರ್ಯದಲ್ಲಿ ತೊಡಗಿದಾಗ ಸೃಜನಶೀಲತೆಯಿಂದ ಪುಸ್ತಕಗಳ ರಚನೆ ಸಾಧ್ಯವಾಗುತ್ತದೆ. ನಿಮ್ಮಿಂದ ಇನ್ನೂ ಹೆಚ್ಚಿನ ಪುಸ್ತಕ ಬರಲಿ ಎಂದು ಶುಭ ಹಾರೈಸಿದರು.
ಲೇಖಕಿ ಕವಿತಾ ಕೆ. ಮಾತನಾಡಿ, 2015ರಲ್ಲಿ ಮೊದಲನೇ ಆವೃತ್ತಿ ಪುಸ್ತಕ ಹೊರತಂದಿದ್ದೆ. ಇದಾದ ಐದು ವರ್ಷಗಳ ಬಳಿಕ ತಮ್ಮ 2ನೇ ಆವೃತ್ತಿ ಪುಸ್ತಕ ಬಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಪ್ರೊ. ಶಾಲ್ಮೊನ್.ಎಸ್. ಚೋಪಡೆ, ಉಪಪ್ರಾಚಾರ್ಯ ಸುಚಿತ್ರಾ ಎ. ರಾಟಿ, ಪ್ರಾಧ್ಯಾಪಕರಾದ ಡಾ. ಬಶೀರ ಅಹಮದ್.ಜೆ. ಸಿಕಂದರ, ಸಂತೋಷ ಇಂಡಿ ಮುಂತಾದವರು ಉಪಸ್ಥಿತರಿದ್ದರು.