ಮಾದಕ ವಸ್ತು ವ್ಯಸನ ತ್ಯಜಿಸಿ ಜೀವನ ಜಯಿಸಿ- ಡಾ. ರವಿ ಕೋಟೆಣ್ಣವರ

ಬಾಗಲಕೋಟೆ: ಬಾಗಲಕೋಟೆ ನಗರದ ಬಿವಿವಿಎಸ್ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಕೇಂದ್ರ ನಾಕೋ೯ಟಿಕ ಬ್ಯೂರೋ ಆಫ್ ಇಂಡಿಯಾ ಅಡಿಯಲ್ಲಿ ಮಾದಕ ವಸ್ತುಗಳನ್ನು ತ್ಯಜಿಸುವ ಕುರಿತು ಕಾರ್ಯಕ್ರಮ ನಡೆಯಿತು. ಪ್ರಾಧ್ಯಾಪಕ ಡಾ. ರವಿ ಕೋಟೆಣ್ಣವರ ಮಾತನಾಡಿ, ಮಾದಕ ವ್ಯಸನ ತ್ಯಜಿಸಿ ಜೀವನ ಜಯಿಸಿ ಎಂದು ಕರೆ ನೀಡಿದರು ಈ ಕಾರ್ಯಕ್ರಮದಲ್ಲಿ ಪಿ ಎಸ್ ಐ ಸಂತೋಷ ಜಾದವ ಮಾದಕ ವ್ಯಸನಗಳ ಕುರಿತು ಉಪನ್ಯಾಸ ನೀಡಿದರು.  ವೈದ್ಯ ವಿದ್ಯಾಥಿ೯ಗಳು ಮಾದಕ ವ್ಯಸನಗಳಿಂದ ಮುಕ್ತರಾಗಬೇಕು.  ಇತರರನ್ನು ಮಾದಕ ವಸ್ತುಗಳನ್ನು ತ್ಯಜಿಸಲು […]

ವಿಜಯಪುರದ ಸಂಗನ ಬಸವ ಶಿಶುನಿಕೇತನ ಶಾಲೆಯಲ್ಲಿ 75 ಕೋಟಿ ಸೂರ್ಯ ನಮಸ್ಕಾರ ಕಾರ್ಯಕ್ರಮ

ವಿಜಯಪುರ: 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ 75 ಕೋಟಿ ಸೂರ್ಯ ನಮಸ್ಕಾರ ಕಾರ್ಯಕ್ರಮ ವಿಜಯಪುರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಸಂಗನ ಬಸವ ಶಿಶುನಿಕೇತನ ಶಾಲೆಯಲ್ಲಿ ನಡೆಯಿತು. ಶಾಲೆಯ ಪ್ರಾಂಶುಪಾಲರಾದ ವಿಜಯಲಕ್ಷ್ಮಿ ಪಟ್ಟೇದ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಎಚ್. ವೆಂಕಟೇಶ, ಯೋಗ ಶಿಕ್ಷಕ ಚನ್ನಬಸು ಎಸ್. ಬಣಜಿಗೇರ, ಪ್ರವೀಣ ಕುಮಾರ, ಶಂಕರ, ಅರುಣಾ ಇವರ ನೇತೃತ್ವದಲ್ಲಿ 1825 ಮಕ್ಕಳು ಹಾಗೂ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಈ […]

ಎಂ ಎಲ್ ಸಿ ಸುನೀಲಗೌಡ ಪಾಟೀಲ ಬೇಡಿಕೆಗೆ ಸರಕಾರ ಸ್ಪಂದನೆ- ಹೊಸದಾಗಿ 5 ಲಕ್ಷ ಮನೆ ನಿರ್ಮಿಸಲು ಆದೇಶ- ಸರಕಾರಕ್ಕೆ ಶಾಸಕರ ಕೃತಜ್ಞತೆ

ವಿಜಯಪುರ: ಕಳೆದ ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ನಾನಾ ಆಶ್ರಯ ಯೋಜನೆಗಳಡು ಮನೆಗಳ ನಿರ್ಮಾಣ ಕುರಿತು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ರಾಜ್ಯ ಸರಕಾರದ ಗಮನ ಸೆಳೆದಿದ್ದರು. ಅಲ್ಲದೇ, ಸೂರು ವಂಚಿತರಿಗೆ ಮನೆಗಳ ನಿರ್ಮಾಣದ ಅವಶ್ಯಕತೆ ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕನಿಷ್ಠ 50 ಮನೆಗಳನ್ನಾದರೂ ಪ್ರತಿವರ್ಷ ನಿರ್ಮಿಸುವಂತೆ ಅಧಿವೇಶನದಲ್ಲಿಯೂ ಒತ್ತಾಯಿಸಿದ್ದರು.  ಅಲ್ಲದೇ, ವಿಧಾನ ಪರಿಷತ ಚುನಾವಣೆ ಸಂದರ್ಭದಲ್ಲಿಯೂ ಈ ವಿಷಯ ಪ್ರಸ್ತಾಪಿಸಿ ಸರಕಾರ ಗಮನ ಹರಿಸುವಂತೆ ಆಗ್ರಹಿಸಿದ್ದರು. ಇದೀಗ ರಾಜ್ಯ ಸರಕಾರ ಶಾಸಕರ ಬೇಡಿಕೆಗೆ ಸ್ಪಂದಿಸಿದ್ದು, […]

ಪಂಜಾಬಿನಲ್ಲಿ ಪ್ರಧಾನಿಗೆ ಭದ್ರತೆ ಒದಗಿಸಲು ವೈಫಲ್ಯ ವಿಚಾರ: ಪಂಜಾಬ ಸರಕಾರ ವಜಾ ಮಾಡಬೇಕು- ಸಿಎಂ ಬಸವರಾಜ ಬೊಮ್ಮಾಯಿ

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಾಗದ ಪಂಜಾಬ್ ಸರಕಾರಕ್ಕೆ ಆಡಳಿತ ನಡೆಸುವ ಯೋಗ್ಯತೆ ಇಲ್ಲ.  ಹೀಗಾಗಿ ಪಂಜಾಬ ಸರಕಾರವನ್ನು ಕೂಡಲೇ ಬರಖಾಸ್ತು ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಂಜಾಬಿನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಅವರಿಗೆ ರಕ್ಷಣೆ ನೀಡುವಲ್ಲಿ ಭದ್ರತಾ ಲೋಪವಾಗಿರುವ ಕುರಿತು  ಸುದ್ದಿದಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಪಂಜಾಬ ಗಡಿಯಲ್ಲಿ ಅಲ್ಲಿನ ಸರಕಾರ ಪ್ರಧಾನ […]

ಜ್ಞಾನ ಜೋಳಿಗೆ ಮೂಲಕ ಸಂಗ್ರಹಿಸಿದ ಪುಸ್ತಕಗಳನ್ನು ಸರಕಾರಿ ಶಾಲೆಗೆ ನೀಡಿದ ಸಮಾಜ ಸೇವಕ ಸಂಗಮೇಶ ಬಬಲೇಶ್ವರ

ವಿಜಯಪುರ: ಪ್ರಪಂಚದಲ್ಲಿ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ.  ಜಗತ್ತಿನಲ್ಲಿ ನಾವು ಪಡೆದ ಅಧಿಕಾರ, ಗಳಿಸಿದ ಆಸ್ತಿಯನ್ನು ಯಾರು ಬೇಕಾದರೂ ಕಿತ್ತುಕೊಳ್ಳಬಹುದು.  ಆದರೆ, ಪಡೆದ ಜ್ಞಾನವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಸಮಾಜ ಸೇವಕ ಮತ್ತು ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರದಲ್ಲಿ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಗೆ ಜ್ಞಾನ ಜೋಳಿಗೆಯ ಮೂಲಕ ಸಂಗ್ರಹಗೊಂಡ ಪುಸ್ತಕಗಳನ್ನು ನೀಡಿ ಅವರು ಮಾತನಾಡಿದರು. ಹಣ ಮತ್ತು ಅಧಿಕಾರಕ್ಕಿಂತ ಜ್ಞಾನ ಮಿಗಿಲಾಗಿದೆ.  […]

ಕೊರೊನಾ, ನೈಟ್ ಕರ್ಫ್ಯೂ ತಂದ ಕಂಟಕ- ಕತ್ತಲಿನತ್ತ ರಂಗ ಕಲಾವಿದರ ಬದುಕು

ವಿಜಯಪುರ: ಅವರ ಬಹುತೇಕ ಕಾಯಕ ವೃತ್ತಿ ಆರಂಭವಾಗುವುದೇ ಮುಸ್ಸಂಜೆ ಮತ್ತು ರಾತ್ರಿಯ ವೇಳೆ.  ಆದರೆ, ಜನರ ಬಾಳಲ್ಲಿ ಆಟವಾಡುತ್ತಿರುವ ಕೊರೊನಾ ಇವರ ಬಾಳಿನಲ್ಲಿ ಅಂಧಕಾರ ಉಂಟು ಮಾಡುತ್ತಿದೆ.  ಕಳೆದ ಎರಡು ವರ್ಷಗಳಿಂದ ಸಂಕಷ್ಟದಲ್ಲಿದ್ದ ರಂಗಭೂಮಿ ಕಲಾವಿದರ ಬದುಕು ಇತ್ತೀಗಷ್ಟೇ ಸುಧಾರಿಸುವ ಲಕ್ಷಣಗಳು ಕಾಣಿಸಿಕೊಂಡಿದ್ದವು.  ಆದರೆ, ಕೊರೊನಾ ಒಮಿಕ್ರಾನ್ ಆತಂಕ ಈಗ ಮತ್ತೆ ಅವರ ಬದುಕನ್ನು ಬರ್ಬಾರ್ ಮಾಡುವತ್ತ ಸಾಗಿದೆ. ಕೊರೊನಾ ಲಾಕಡೌನ್ ಸಡಿಲಗೊಂಡಿದ್ದರಿಂದ ರಂಗಭೂಮಿ ಕಲಾವಿದರು ಮತ್ತೆ ಬಣ್ಣ ಹಚ್ಚಿಕೊಂಡು ವೀಕ್ಷಕರಿಗೆ ಮನೋರಂಜನೆ ನೀಡುತ್ತಿದ್ದರು.  ಇನ್ನೇನು ತಮ್ಮ […]