ಮಾದಕ ವಸ್ತು ವ್ಯಸನ ತ್ಯಜಿಸಿ ಜೀವನ ಜಯಿಸಿ- ಡಾ. ರವಿ ಕೋಟೆಣ್ಣವರ

ಬಾಗಲಕೋಟೆ: ಬಾಗಲಕೋಟೆ ನಗರದ ಬಿವಿವಿಎಸ್ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಕೇಂದ್ರ ನಾಕೋ೯ಟಿಕ ಬ್ಯೂರೋ ಆಫ್ ಇಂಡಿಯಾ ಅಡಿಯಲ್ಲಿ ಮಾದಕ ವಸ್ತುಗಳನ್ನು ತ್ಯಜಿಸುವ ಕುರಿತು ಕಾರ್ಯಕ್ರಮ ನಡೆಯಿತು.

ಪ್ರಾಧ್ಯಾಪಕ ಡಾ. ರವಿ ಕೋಟೆಣ್ಣವರ ಮಾತನಾಡಿ, ಮಾದಕ ವ್ಯಸನ ತ್ಯಜಿಸಿ ಜೀವನ ಜಯಿಸಿ ಎಂದು ಕರೆ ನೀಡಿದರು

ಈ ಕಾರ್ಯಕ್ರಮದಲ್ಲಿ ಪಿ ಎಸ್ ಐ ಸಂತೋಷ ಜಾದವ ಮಾದಕ ವ್ಯಸನಗಳ ಕುರಿತು ಉಪನ್ಯಾಸ ನೀಡಿದರು.  ವೈದ್ಯ ವಿದ್ಯಾಥಿ೯ಗಳು ಮಾದಕ ವ್ಯಸನಗಳಿಂದ ಮುಕ್ತರಾಗಬೇಕು.  ಇತರರನ್ನು ಮಾದಕ ವಸ್ತುಗಳನ್ನು ತ್ಯಜಿಸಲು ಪ್ರೇರಿಪಿಸಬೇಕು.  ಅಲ್ಲದೇ, ಪೊಲೀಸ್ ಟೋಲ್ ಫ್ರಿ ನಂಬರ್ 112 ಪೋನ ಕರೆ ಮಾಡಿಯೂ ಮಾದಕ ವಸ್ತುಗಳ ಕುರಿತು ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದರು.  ತಮ್ಮ ಸುತ್ತ ಮುತ್ತ ನಡೆಯುವ ಯಾವುದೇ ಅಪರಾಧ ಕೃತ್ಯಗಳ ಬಗ್ಗೆ ಈ ಸಂಖ್ಯೆಗೆ ನಿರ್ಭೀತಿಯಿಂದ ಕರೆ ಮಾಡಿ ಮುಂದಾಗುವ ಅನಾಹುತ ತಪ್ಪಿಸಲು ಕೈ ಜೋಡಿಸಬೇಕು ಎಂದು ಹೇಳಿದರು.

ಈ ಕಾಯ೯ಕ್ರಮದಲ್ಲಿ ಎ ಎಸ್ ಆಯ್ ಎಸ್. ಎಸ್. ಹೆಳವರ. ಡಾ. ಅಮರೇಶ ಬಳಗಾನೂರು. ಡಾ. ಶಶಿಕುಮಾರ ಇಜೇರಿ,  ಡಾ. ಸುನೀಲ ಭೋಸಲೆ, ಡಾ. ಮಂಜುನಾಥ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ವೈದ್ಯ ವಿದ್ಯಾಥಿ೯ಗಳಿಂದ ಮಾದಕ ವ್ಯಸನಗಳನ್ನು ತ್ಯಜಿಸಲು ಪ್ರಮಾಣ ಭೋದಿಸಿ ಆನ್ ಲೈನ ಮೂಲಕ ಸೆಂಟ್ರಲ್ ನಾಕೋ೯ಟಿಕ್ ಕಂಟ್ರೋಲ ಬ್ಯೂರೋ ಆಫ್ ಇಂಡಿಯಾ ನೀಡುವ ಪ್ರಮಾಣ ಪತ್ರಗಳನ್ನು ನೀಡಲಾಯಿತು.

Leave a Reply

ಹೊಸ ಪೋಸ್ಟ್‌