ವಿಜಯಪುರದ ಸಂಗನ ಬಸವ ಶಿಶುನಿಕೇತನ ಶಾಲೆಯಲ್ಲಿ 75 ಕೋಟಿ ಸೂರ್ಯ ನಮಸ್ಕಾರ ಕಾರ್ಯಕ್ರಮ

ವಿಜಯಪುರ: 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ 75 ಕೋಟಿ ಸೂರ್ಯ ನಮಸ್ಕಾರ ಕಾರ್ಯಕ್ರಮ ವಿಜಯಪುರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಸಂಗನ ಬಸವ ಶಿಶುನಿಕೇತನ ಶಾಲೆಯಲ್ಲಿ ನಡೆಯಿತು.

ಶಾಲೆಯ ಪ್ರಾಂಶುಪಾಲರಾದ ವಿಜಯಲಕ್ಷ್ಮಿ ಪಟ್ಟೇದ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಎಚ್. ವೆಂಕಟೇಶ, ಯೋಗ ಶಿಕ್ಷಕ ಚನ್ನಬಸು ಎಸ್. ಬಣಜಿಗೇರ, ಪ್ರವೀಣ ಕುಮಾರ, ಶಂಕರ, ಅರುಣಾ ಇವರ ನೇತೃತ್ವದಲ್ಲಿ 1825 ಮಕ್ಕಳು ಹಾಗೂ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೂರ್ಯ ನಮಸ್ಕಾರ ಹಾಕಿದರು.

 

Leave a Reply

ಹೊಸ ಪೋಸ್ಟ್‌