ಪ್ರಧಾನಿ ನರೇಂದ್ರ ಮೋದಿ ಆಯುರಾರೋಗ್ಯಕ್ಕಾಗಿ ಪ್ರಾರ್ಥಿಸಿ ಬಸವ ನಾಡಿನಲ್ಲಿ ಬಿಜೆಪಿಯಿಂದ ವಿಶೇಷ ಪೂಜೆ

ವಿಜಯಪುರ: ಪಂಜಾಬಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಉಂಟಾದ ಲೋಪದ ಹಿನ್ನೆಲೆಯಲ್ಲಿ ಮತ್ತು ಪ್ರಧಾನಿಯ ಆರೋಗ್ಯ ಮತ್ತು ಆಯೋಷ್ಯಕ್ಕಾಗಿ ಪ್ರಾರ್ಥಿಸಿ ಬಸವ ನಾಡು ವಿಜಯಪುರದಲ್ಲಿ ಬಿಜೆಪಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

 

ವಿಜಯಪುರ ನಗರದ ಜೋರಾಪುರ ಪೇಟೆಯಲ್ಲಿರುವ ಶ್ರೀ ಶಂಕರಲಿಂಗ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.  ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

 

ಬಿಜೆಪಿ ಕಾರ್ಯಕರ್ತರು ಮತ್ತು ಮಹಿಳಾ ಕಾರ್ಯಕರ್ತರು ಸಾಮೂಹಿಕ ಶ್ರೀಮೃತ್ಯುಂಜಯ ಮಂತ್ರವನ್ನು ಪಠಿಸಿದರು.  ಶ್ರೀ ಶಂಕರಲಿಂಗ ದೇವಸ್ಥಾನದಲ್ಲಿ ನಡೆದ ಪೂಜೆಯಲ್ಲಿ ದೇವಸ್ಥಾನದ ಅರ್ಚಕರು ಮಂತ್ರ ಹೇಳಿದರು.

 

ಈ ಸಂದರ್ಭದಲ್ಲಿ ಬಿಜೆಪಿ ವಿಭಾಗೀಯ ಪ್ರಮುಖ ಪ್ರಕಾಶ ಅಕ್ಕಲಕೋಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ, ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ, ಮುಖಂಡರಾದ ರಾಜು ಮಗಿಮಠ, ಗುರು ಗಚ್ಚಿನಮಠ, ಮಳುಗೌಡ ಪಾಟೀಲ, ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ, ಸಂಜಯ ಪಾಟೀಲ ಕನಮಡಿ, ಮುಖಂಡರಾದ ಕೃಷ್ಣಾ ಗುನ್ಹಾಳಕರ, ಭಾರತಿ ಭುಯ್ಯಾರ, ಗೀತಾ ಕೊಗನೂರು, ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಹುಲ ಜಾಧವ, ರಾಜೇಶ ದೇವಗಿರಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌