ವಚನ ಪಿತಾಮಹ ಸಮಾಧಿಗೆ ತೆರಳಿ ಧ್ಯಾನ ಮಾಡಿ ಚೈತನ್ಯ ಪಡೆದ ಶಾಸಕ ಎಂ. ಬಿ. ಪಾಟೀಲ

ವಿಜಯಪುರ : ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರೆಂದರೆ ಮಾಜಿ ಸಚಿವ ಎಂ. ಬಿ. ಪಾಟೀಲ ಅವರಿಗೆ ಅತೀವ ಅಭಿಮಾನ, ಹೆಮ್ಮೆ ಮತ್ರು ಪೂಜನೀಯ ಭಾವನೆಯಿದೆ.  

ಈ ಹಿನ್ನೆಲೆಯಲ್ಲಿಯೇ ಅವರು ಬಿ ಎಲ್ ಡಿ ಇ ಸಂಸ್ಥೆಯಲ್ಲಿ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಹೆಸರಿನಲ್ಲಿ ಸಂಶೋಧನಾ ಕೇಂದ್ರ ತೆರೆದು ನಾನಾ ರೀತಿಯಲ್ಲಿ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಬಿ ಎಲ್ ಡಿ ಇ ಸಂಸ್ಥೆ ಸ್ಥಾಪನೆಯಲ್ಲಿ ಡಾ. ಫ. ಗು. ಹಳಕಟ್ಟಿ ಅವರ ಕೊಡುಗೆಯೂ ಅಪಾರ. ಇದನ್ನು ಎಂ. ಬಿ. ಪಾಟೀಲ ಸದಾ ಸ್ಮರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಎಂಜಿನಿಯರಿಂಗ್ ಕಾಲೇಜಿಗೂ ಫ. ಗು. ಹಳಕಟ್ಟಿ ಅವರ ಹೆಸರನ್ನು ಇಟ್ಟಿದ್ದಾರೆ.

https://m.facebook.com/story.php?story_fbid=483313496487695&id=100044271467644

ಸಂಶೋಧನೆ ಕೇಂದ್ರ ಈಗ ಸಾಕಷ್ಟು ಪುಸ್ತಕ ಮತ್ತು ನಾನಾ ಗಣ್ಯರ ಸಂಪುಟಗಳನ್ನು ಪ್ರಕಟ ಮಾಡುವ ಮೂಲಕ ಮನೆಮಾತಾಗಿದೆ.  ಈ ಹಿನ್ನೆಲೆಯಲ್ಲಿ ಎಂ. ಬಿ. ಪಾಟೀಲ ಅವರು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.  ಈ ಸಂದರ್ಭದಲ್ಲಿ ಫ. ಗು. ಹಳಕಟ್ಟಿ ಅವರ ಸಮಾಧಿಗೆ ತೆರಳಿ ನಮನ ಸಲ್ಲಿಸಿದರು.  ಏಕಾಂತದಲ್ಲಿ ಸ್ಮರಣೆ ಕೂಡ ಮಾಡಿದರು.  ಇದು ಎಂ. ಬಿ. ಪಾಟೀಲ ಅವರು ಹಳಕಟ್ಟಿ ಅವರ ಬಗ್ಗೆ ಹೊಂದಿರುವ ಗೌರವಾಭಿಮಾನಕ್ಕೆ ಸಾಕ್ಷಿಯಾಗಿತ್ತು.

ಅಲ್ಲದೇ, ತಾವು ಭೇಟಿ ನೀಡಿರುವ ಕುರಿತು ಟ್ವಿಟರ್ ಮತ್ತು ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಮಾಜಿ ಸಚಿವರು, ನಮ್ಮೆಲ್ಲರ ಆದರ್ಶ, ವಚನ ಪಿತಾಮಹ ಎಂದೇ ಖ್ಯಾತರಾಗಿದ್ದ ಪರಮ ಪೂಜ್ಯ ಡಾ. ಫ. ಗು. ಹಳಕಟ್ಟಿಯವರ ಸಮಾಧಿಗೆ ನಮನ ಸಲ್ಲಿಸಿದೆನು. ಅವರ ಪುಣ್ಯಸ್ಥಳಕ್ಕೆ ಆಗಮಿಸಿ, ಧ್ಯಾನಿಸುವುದು ಮನಸ್ಸಿಗೆ ಶಾಂತಿ-ಚೇತನ ತುಂಬುತ್ತದೆ ಎಂದು ಮನದಿಂಗಿತ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೊದಲು ಸಂಶೋಧನಾ ಕೇಂದ್ರದ ಲೈಬ್ರರಿಗೆ ಭೇಟಿ ನೀಡಿದ ಶಾಸಕರು, ಅಲ್ಲಿನ ವ್ಯವಸ್ಥೆ, ಸಂಗ್ರಹಿಸಲಾಗಿರುವ ಪುಸ್ತಕಗಳ ಕುರಿತು ಮಾಹಿತಿ ಪಡೆದು ಸಂತಸ ವ್ಯಕ್ತಪಡಿಸಿದರು.  ಈ ಕುರಿತು ಕೂಡ ಫೇಸಬುಕ್ ಮತ್ತು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ಹಂಚಿಕೊಂಡಿರುವ ಅವರು, ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರವು ಕನ್ನಡ ಸಾಹಿತ್ಯ ಲೋಕಕ್ಕೆ ಹಾಗೂ ಸಂಶೋಧನೆಗೆ ತನ್ನದೇ ಆದ ಕೊಡುಗೆ ನೀಡಿ, ಛಾಪು ಮೂಡಿಸಿದೆ.
ವಿಜಯಪುರದಲ್ಲಿ ಜ್ಞಾನಾರ್ಜನೆಗಾಗಿ ಲಭ್ಯವಿರುವ ಇಂತಹ ಅದ್ಭುತ ಸಂಶೋಧನಾ ಕೇಂದ್ರವನ್ನು ರಾಜ್ಯದ ಜನತೆ ಸದುಪಯೋಗಪಡಿಸಿಕೊಳ್ಳಬೇಕು.

ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಗ್ರಂಥಾಲಯಕ್ಕೆ ಭೇಟಿ ನೀಡಿದೆನು. ಇಲ್ಲಿ ಲಭ್ಯವಿರುವ ಪುಸ್ತಕಗಳು ಮತ್ತು ಅಧ್ಯಯನ ಮಾಡಲು ಈ ಗ್ರಂಥಾಲಯದ ಬಳಕೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ ಕೊಡುವಂತೆ ಸಲಹೆ ನೀಡಿ, ಕೇಂದ್ರದ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದೆನು‌ ಎಂದು ಸಂಶೋಧನಾ ಕೇಂದ್ರದ ವ್ಯವಸ್ಥೆ ಮತ್ತು ಅಲ್ಲಿನ ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

https://m.facebook.com/story.php?story_fbid=483322623153449&id=100044271467644

ಶಾಸಕ ಎಂ. ಬಿ. ಪಾಟೀಲ ಅವರ ಈ ಭೇಟಿಯ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ರಾಘವೇಂದ್ರ ಕುಲಕರ್ಣಿ, ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ, ಡಾ. ವಿ. ಡಿ. ಐಹೊಳ್ಳಿ, ಎ. ಬಿ. ಬೂದಿಹಾಳ, ಚೈತನಾ ಸಂಕೊಂಡ ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌