ಬಿಜೆಪಿ ರಾಜ್ಯ ರೈತ ಮೋರ್ಚಾಗೆ ರವಿಕಾಂತ ಬಗಲಿ ನೇಮಕ

ವಿಜಯಪುರ: ವಿಜಯಪುರ ನಗರಸಭೆಯ ಮಾಜಿ ಸದಸ್ಯ, ರವಿಕಾಂತ ಬಗಲಿ ಅವರನ್ನು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಬಿಜೆಪಿ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅವರನ್ನು ಈಗ ರೈತ ಮೋರ್ಚಾಗೆ ನೇಮಕ ಮಾಡಲಾಗಿದೆ. ರಾಜ್ಯಸಭೆ ಸದಸ್ಯ ಮತ್ತು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಈ ನೇಮಕ ಮಾಡಿದ್ದಾರೆ. ಬಿಜೆಪಿಯಲ್ಲಿ ತಮಗೆ ಹೊಸ ಜವಾಬ್ದಾರಿ ನೀಡಿರುವುದಕ್ಕೆ ರವಿಕಾಂತ ಸಿದ್ದಪ್ಪ ಬಗಲಿ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈರಣ್ಣ ಕಡಾಡಿ ಹಾಗೂ ಬಿಜೆಪಿ […]

ಇಂದು, ನಾಳೆ ವಜ್ರ ಹನುಮಾನ ನಗರ ರೇಲ್ವೆ ಗೇಟ್ ಮೂಲಕ ಸಂಚಾರ ಬಂದ್- ಪರ್ಯಾಯ ಮಾರ್ಗ ಅನಿವಾರ್ಯ

ವಿಜಯಪುರ: ಕಾಮಗಾರಿ ಹಿನ್ನೆಲೆಯಲ್ಲಿ ಶನಿವಾರ(ಇಂದು) ಮತ್ತು ರವಿವಾರ ಎರಡು ದಿನ ವಿಜಯಪುರ ನಗರದ ವಜ್ರಹನುಮಾನ ರೇಲ್ವೆ ಗೇಟ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಎರಡು ದಿನ ಬೆ. 8 ರಿಂದ ರಾತ್ರಿ 8ರ ವರೆಗೆ ರೇಲ್ವೆ ಗೇಟ್ ಬಂದ್ ಮಾಡಲಾಗುತ್ತದೆ ಎಂದು ನೈರುತ್ಯ ರೇಲ್ವೆ ವಲಯ ಸೀನಿಯರ್ ಸೇಕ್ಷನ್ವೆಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಬಾಗಲಕೋಟೆ ಕಡೆಗೆ ತೆರಳಬೇಕಾದ ಜನರು ಇದಕ್ಕೆ ಪರ್ಯಾಯ ಮಾರ್ಗದಲ್ಲಿ‌ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ವಹ್ರ ಹನುಮಾನ ರೇಲ್ವೆ ಗೇಟ್ ಪಕ್ಕದಲ್ಲಿರುವ ರಸ್ತೆಯ […]

ಮಹಿಳಾ ವಿವಿ ಮುಚ್ಚಿದರೆ ಉಗ್ರ ಹೋರಾಟ- ನ್ಯಾಯವಾದಿ ಶ್ರೀನಾಥ ಪೂಜಾರಿ ಎಚ್ಚರಿಕೆ

ವಿಜಯಪುರ: ರಾಜ್ಯದ ಪ್ರಥಮ ಮತ್ತು ಏಕೈಕ ಮಹಿಳಾ ವಿಶ್ವವಿದ್ಯಾಲಯ ಎಂದೇ ಹೆಸರಾಗಿರುವ ಹಾಗೂ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಆರಂಭಿಸಲಾಗಿರುವ ಅಕ್ಕ ಮಹಾದೇವಿ ಮಹಿಳಾ ವಿವಿಯನ್ನು ಮುಚ್ಚಲು ಸರಕಾರ ಹುನ್ನಾರ ನಡೆಸಿದೆ ಎಂದು ನ್ಯಾಯವಾದಿ ಶ್ರೀನಾಥ ಪೂಜಾರಿ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಲಾಗಿರುವ ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚಲು ಸರಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಹುನ್ನಾರ ನಡೆಸಿದೆ ಎಂದು ನ್ಯಾಯವಾದಿ ಶ್ರೀನಾಥ ಪೂಜಾರಿ ಆರೋಪಿಸಿದರು. ಒಂದು ವೇಳ […]

ಬಸವ ಜನ್ಮಸ್ಥಳದಲ್ಲಿ 550 ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ 75 ಕೋಟಿ ಸೂರ್ಯ ನಮಸ್ಕಾರ ಸಂಕಲ್ಪ

ವಿಜಯಪುರ: ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷಾಚರಣೆ ಅಂಗವಾಗಿ ದೇಶಾದ್ಯಂತ ನಾನಾ ಕಡೆ ನಡೆಯುತ್ತಿರುವ 75 ಕೋಟಿ ಸೂರ್ಯ ನಮಸ್ಕಾರ ಕಾರ್ಯಕ್ರಮ ಅಣ್ಣ ಬಸವಣ್ಣನ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ನಡೆಯಿತು.   ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಶ್ರೀ ಬಸವೇಶ್ವರ ದೇವಾಲಯ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.  ಶ್ರೀ ನಂದೀಶ್ವರ ರಂಗ ಮಂದಿರ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗಗುರು ದಯಾಸಾಗರ ಉಪಾಧ್ಯಾಯ ಯೋಗವನ್ನು ಹೇಳಿಕೊಟ್ಟರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ […]