ಬಸವ ಜನ್ಮಸ್ಥಳದಲ್ಲಿ 550 ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ 75 ಕೋಟಿ ಸೂರ್ಯ ನಮಸ್ಕಾರ ಸಂಕಲ್ಪ

ವಿಜಯಪುರ: ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷಾಚರಣೆ ಅಂಗವಾಗಿ ದೇಶಾದ್ಯಂತ ನಾನಾ ಕಡೆ ನಡೆಯುತ್ತಿರುವ 75 ಕೋಟಿ ಸೂರ್ಯ ನಮಸ್ಕಾರ ಕಾರ್ಯಕ್ರಮ ಅಣ್ಣ ಬಸವಣ್ಣನ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ನಡೆಯಿತು.

 

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಶ್ರೀ ಬಸವೇಶ್ವರ ದೇವಾಲಯ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.  ಶ್ರೀ ನಂದೀಶ್ವರ ರಂಗ ಮಂದಿರ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗಗುರು ದಯಾಸಾಗರ ಉಪಾಧ್ಯಾಯ ಯೋಗವನ್ನು ಹೇಳಿಕೊಟ್ಟರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರವೀಣ ಪವಾರ, ಸದಸ್ಯ ಸಂಗನಗೌಡ ಚಿಕ್ಕೋಂಡ ಯೋಗದ ಮಹತ್ವದ ಕುರಿತು ಮಾತನಾಡಿದರು.

ಶಾಲೆಯ ದೈಹಿಕ ಶಿಕ್ಷಕ ಎಸ್. ಆರ್. ಸಜ್ಜನ, ಮಹೇಶ ಸಂಗಮ, ಪ್ರಾಚಾರ್ಯ ಆರ್. ಎಂ. ರೋಣದ, ಎಸ್. ಎಂ. ಬಿಸ್ಟಗೊಂಡ, ವಿದ್ಯಾರ್ಥಿಗಳು ಮತ್ತು ಶಾಲೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಗಳಾದ ಆತೀಫಾ ಗಂಜಿಹಾಳ, ಭೂಮಿಕಾ ಹಂಚಾಟೆ ಕಾರ್ಯಕ್ರಮ ನಿರೂಪಿಣೆ ಮಾಡಿದರು.  ಬಾಪೂಜಿ ಕಲ್ಲೂರ ವಂದಿಸಿದರು.

 

Leave a Reply

ಹೊಸ ಪೋಸ್ಟ್‌