ವೀಕೆಂಡ್ ಕರ್ಫ್ಯೂ: ಸದುಪಯೋಗ ಪಡಿಸಿಕೊಂಡು ಧೂಳುಮುಕ್ತ ನಗರ ಮಾಡಲು ಕಾರ್ಯೋನ್ಮುಖವಾಗಿರುವ ವಿಜಯಪುರ ಮಹಾನಗರ ಪಾಲಿಕೆ

ವಿಜಯಪುರ: ಕೊರೊನಾ ಓಮಿಕ್ರಾನ್ ಸೋಂಕು ತಡೆಯಲು ರಾಜ್ಯ ಸರಕಾರ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ.  ಶನಿವಾರ ಮತ್ತು ರವಿವಾರ ತೀರ ಅಗತ್ಯ ಕೆಲಸ ಕಾರ್ಯಗಳನ್ನು ಹೊ       ರತು ಪಡಿಸಿ ಮತ್ತು ತುರ್ತು ಸೇವೆಗಳ ಹೊರತಾಗಿ ಯಾವುದೇ ರೀತಿಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.  ಈ ಹಿನ್ನೆಲೆಯಲ್ಲಿ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಪೊಲೀಸರು ಬಿಗೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.  ವಿನಾಕಾರಣ ರಸ್ತೆಗೆ ಇಳಿಯುವವರನ್ನು ತಡೆದು ದಂಡ ವಿಧಿಸುತ್ತಿದ್ದಾರೆ.

ಇತ್ತ ಈ ವೀಕೆಂಡ್ ಕರ್ಫ್ಯೂ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವ ವಿಜಯಪುರ ಮಹಾನಗರ ಪಾಲಿಕೆ ಮತ್ತು ಐತಿಹಾಸಿಕ ಗೋಳಗುಮ್ಮಟ ಅಧಿಕಾರಿಗಳು ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ.  ವಿಜಯಪುರ ಮಹಾಗನರ ಪಾಲಿಕೆ ಅಧಿಕಾರಿಗಳು ಗುಮ್ಮಟ ನಗರಿಯನ್ನು ಧೂಳುಮುಕ್ತ ಮಾಡಲು ಸಂಕಲ್ಪ ಮಾಡಿದ್ದಾರೆ.  ಅದರ ಅಂಗವಾಗಿ ಐತಿಹಾಸಿಕ ವಿಜಯಪುರ ನಗರದ ಸ್ವಚ್ಚತಾ ಕಾರ್ಯಕ್ರಮ ನಡೆಸುತ್ತಿದ್ದಾರೆ.  ಕಳೆದ ಎರಡು ದಿನಗಳಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪೌರ ಕಾರ್ಮಿಕರು ರೋಡ್ ಸ್ವೀಪ್ ಬ್ರಷ್ ಹಾಗೂ ಕಸಬರಗಿ ಬಳಸಿ ಸ್ವಚ್ಛಗೊಳಿಸುತ್ತಿದ್ದಾರೆ.  ರಸ್ತೆಯಲ್ಲಿ ಸಂಗ್ರವಹಾದ ಮಣ್ಣನ್ನು ಸಂಗ್ರಹಿಸಿ ಬೇರೆ ಕಡೆಗೆ ಸಂಗ್ರಹಿಸಿ ಸ್ವಚ್ಛಗೊಳಿಸುತ್ತಿದ್ದಾರೆ.  ಈ ಮಣ್ಣು ತೆಗೆಯುವುದರಿಂದ ಧೂಳು ಕಡಿಮೆಯಾಗುವ ನಿರೀಕ್ಷೆಯಲ್ಲಿದ್ದಾರೆ.

 

ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಒಟ್ಟು 600 ಪೌರ ಕಾರ್ಮಿಕರಿದ್ದಾರೆ.  ಅವರಲ್ಲಿ 450 ಜನ ಮಹಿಳೆಯರು ಮತ್ತು 150 ಪುರುಷರಿದ್ದಾರೆ.  ಅಲ್ಲದೇ, ಕಸ ಸ್ವಚ್ಛ ಮಾಡಲು 18 ಟ್ರ್ಯಾಕ್ಟರ್ ಹಾಗೂ ಒಂದು ಜೆಸಿಬಿ ಯಂತ್ರ ಬಳಸುವ ಮೂಲಕ ಸ್ವಚ್ಚತಾ ಕಾರ್ಯಕ್ರಮ ಕೈಗೊಂಡಿದ್ದಾರೆ.  ವಿಜಯಪುರ ನಗರದ ರೇಲ್ವೆ ಸ್ಟೇಶನ್ ರಸ್ತೆ, ಗಾಂಧಿ ರಸ್ತೆ, ಸಿದ್ದೇಶ್ವರ ರಸ್ತೆ ಹೀಗೆ ಪ್ರಮುಖ ರಸ್ತೆಗಳಲ್ಲಿ ಮಹಾನಗರ ಪಾಲಿಕೆ ಹೆಲ್ತ್ ಇನ್ಸ್ಪೆಕ್ಟರ್ ಆಜಾಧ ಹಂಚಿನಾಳ, ಸರ್ವಿಸ್ ಎಕ್ಸಪರ್ಟ್ ಶಶಿಧರ ಕಲ್ಮಠ ಖುದ್ದಾಗಿ ರಸ್ತೆದೆ ಇಳಿದಿದು ಸ್ವಚ್ಚತಾ ಕಾರ್ಯ ಮಾಡುತ್ತಿದ್ದಾರೆ.  ಮಹಾನಗರ ಪಾಲಿಕೆಯ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.

ಮತ್ತೋಂದೆಡೆ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ವಿಜಯಪುರ ನಗರದಲ್ಲಿರುವ ಎಲ್ಲ ಪ್ರಾಚೀನ ಸ್ಮಾರಕಗಳನ್ನು ಬಂದ್ ಮಾಡಲಾಗಿದೆ.  ವಿಶ್ವ ವಿಖ್ಯಾತ ಗೋಳಗುಮ್ಮಟ ಬಂದ್ ಮಾಡಲಾಗಿದೆ.  ಗೋಳಗುಮ್ಮಟ ಪ್ರವೇಶಕ್ಕೆ ಪ್ರವಾಸಿಗರಿಗೆ ಭಾರತೀಯ ಪುರಾತತ್ವ ಇಲಾಖೆ ನಿರ್ಬಂಧ ಹೇರಿದೆ.  ಹೀಗಾಗಿ ಗೋಳಗುಮ್ಮಟ ಆವರಣ ಬೀಕೊ ಎನ್ನುತ್ತಿದೆ.  ಇದೇ ಸಮಯವನ್ನು ಗೋಳಗುಮ್ಮಟದ ಸಿಬ್ಬಂದಿಯೂ ಧನಾತ್ಮಕವಾಗಿ ಸ್ವೀಕರಿಸಿದ್ದಾರೆ.  ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಪ್ರವಾಸಿಗರೂ ಇಲ್ಲದ್ದರಿಂದ ಗೋಳಗುಮ್ಮಟದ ಆವರಣವನ್ನು ಸ್ವಚ್ಛ ಮಾಡುತ್ತಿದ್ದಾರೆ.

 

50ಕ್ಕೂ ಹೆಚ್ಚು ಸಿಬ್ಬಂದಿ ಗೋಳಗುಮ್ಮಟದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.  ಒಟ್ಟಾರೆ ಒಂದೆಡೆ ಕೊರೊನಾ ತಡೆಗಟ್ಟಲು ವಿಧಿಸಲಾಗಿರುವ ವೀಕೆಂಡ್ ಕರ್ಫ್ಯೂ ವಿಜಯಪುರ ನಗರದಲ್ಲಿ ಮತ್ತು ಪ್ರಾಚೀನ ಸ್ಮಾರಕಗಳ ಆವರಣದಲ್ಲಿ ಸ್ವಚ್ಥತೆ ಕಾರ್ಯ ಕೈಗೊಳ್ಳಲು ಅನುಕೂಲವಾಗಿದೆ.

Leave a Reply

ಹೊಸ ಪೋಸ್ಟ್‌