ವಿಜಯಪುರ: ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣದಲ್ಲಿ ಅಯ್ಯಪ್ಪ ಸ್ವಾಮಿ ಪೂಜಾ ಕಾರ್ಯ ನಡೆಯಿತು.
ಸತತವಾಗಿ 25 ವರ್ಷಗಳಿಂದ ಇಲ್ಲಿನ ಯುವಕರು ಅಯ್ಯಪ್ಪ ಸ್ವಾಮಿ ಮಾಲೆಯನ್ನು ಧರಿಸುತ್ತಿದ್ದಾರೆ. ನಾಲತವಾಡ ಪಟ್ಟಣದಲ್ಲಿ 32 ಜನ ಅಯ್ಯಪ್ಪ ಮಾಲೆ ಹಾಕಿಕೊಂಡಿದ್ದಾರೆ.
ಈ ಕಾರ್ಯಕ್ರಮದ ಅಂಗವಾಗಿ ಶ್ರೀ ವೀರೇಶ್ವರ ಮಠದಲ್ಲಿ ಹಿರುಮುಡಿ ಕಟ್ಟಿದರು. ನಂತರ ಮಠದಿಂದ ಎಲ್ಲರೂ ಶಬರಿಯ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದರು.