ವಿಜಯಪುರ: ಶರಣರ, ಸಂತರ ಕಾಯಕ ಹಾಗೂ ದಾಸೋಹಗಳು ಜನಸಾಮಾನ್ಯರ ಬದುಕನ್ನು ಮೇಲೆಕ್ಕೆತ್ತಲು ಎರಡು ಪ್ರಬಲ ಸಾಧನಗಳಾಗಿವೆ ಎಂದು ಗುಲಬುರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಬಿ. ಜಿ. ಮೂಲಿಮನಿ ತಿಳಿಸಿದರು.
ವಿಜಯಪುರ ನಗರದಲ್ಲಿ ಸಿಕ್ಯಾಬ್ ಸಂಸ್ಥೆಯ ಸಂಸ್ಥಾಪಕರ ದಿನಾಚಾರಣೆಯಲ್ಲಿ ಸಿಕ್ಯಾಬ್ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಶಿಕ್ಷಣ ಸಂಸ್ಥೆಗಳ ಜ್ಞಾನದಾಸೋಹ ಕೈಂಕರ್ಯವು ಬಡ, ಆರ್ಥಿಕ ದುರ್ಬಲ ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬನೆ, ಆತ್ಮಗೌರವಗಳನ್ನು ದೊರಕಿಸಿ ಒಟ್ಟಾರೆ ದೇಶದ ಅಭಿವೃದ್ದಿಗೆ ಕಾರಣವಾಗುತ್ತದೆ. ಇಂದು ನಾವು ಜ್ಞಾನಾದರಿತ ಆರ್ಥಿಕ ವ್ಯವಸ್ಥೆಯಲ್ಲಿ ಬದುಕುತ್ತಿದ್ದು ಜ್ಞಾನವನ್ನು ಹಂಚುವ ಮೂಲಕ ನಾವೆಲ್ಲರೂ ಸಮುದಾಯದ ವಿಕಾಸಕ್ಕೆ ದುಡಿಯಬೇಕಾಗಿದೆ. ಶಿಕ್ಷಣ ಸಂಸ್ಥೆಗಳು ಪ್ರಸ್ತುತ ಜೀವನಕ್ಕೆ ಅವಶ್ಯವಿರುವ ಪಠ್ಯಕ್ರಮ ಹಾಗೂ ಪೂರ್ವ ಸಿದ್ದತೆಗಳನ್ನು ಮಾಡುವ ಅಗತ್ಯತೆ ಇದೆ ಎಂದು ಅವರು ಡಾ. ಬಿ. ಜಿ. ಮೂಲಿಮನಿ ಹೇಳಿದರು.
ವಿಜಯಪುರ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಡಿ. ಎಸ್. ಗುಡ್ಡೋಡಗಿ ಮಾತನಾಡಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ನಿರ್ವಹಣೆ ಮಾಡುವದು ಕಷ್ಟದ ಕೆಲಸ, ಈ ದಿಶೆಯಲ್ಲಿ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ವಿದ್ಯಾದಾನದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಂಬಯಿಯ ಎ. ಎಂ. ಪಿ ಸಂಸ್ಥೆಯ ಮುಖ್ಯಸ್ಥ ಅಮೀರ ಇದ್ರಿಸಿ, ಕಲಬುರ್ಗಿಯ ಅಲ್ ಬದರ್ ಸಂಸ್ಥೆಯ ಮುಖ್ಯಸ್ಥರಾದ ಡಾ. ಸೈಯದ್ ರಹಮತುಲ್ಲಾ, ಕಾಲ್ಸೇಕರ ತಾಂತ್ರಿಕ ಸಂಸ್ಥೆಯ ನಿರ್ದೇಶಕ ಡಾ. ಅಬ್ದುಲ್ ರಜಾಕ್ ಹೂನ್ನುಟಗಿ, ಮುಂಬಯಿಯ ಅವಾಬ ಫಕೀಯಾ, ಸಮಾಜ ಸೇವಕ ಸೈಯದ ಹೈದರಫಾಶಾ, ಹಿರಿಯ ಪತ್ರಕರ್ತ ರಫಿ ಭಂಡಾರಿ, ಡಾ. ಶುಜಾವುದ್ದಿನ್ ಪುಣೇಕರ ಮಾತನಾಡಿದರು.
ಸಿಕ್ಯಾಬ ರಾಷ್ಟ್ರೀಯ ಪ್ರಶಸ್ತಿಯ ಸ್ಮರಣ ಫಲಕವನ್ನು ಸಂಸ್ಥೆಯ ನಿರ್ದೇಶಕ ರಿಯಾಜ್ ಫಾರೂಖಿ ವಾಚಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್. ಎ. ಪುಣೇಕರ ಅವರು ಸಂಪಾದಿಸಿದ ಮಹಮ್ಮದ್ ಪೈಗಂಬರ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎ. ಎಸ್. ಪಾಟೀಲ ಅವರು ಸಿಕ್ಯಾಬ್ ಸಂಸ್ಥೆಯ ಅಡಿಯಲ್ಲಿ ಇರುವ ಶಾಲೆ ಕಾಲೇಜುಗಳ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಸಿಕ್ಯಾಬ್ ರಾಷ್ಟ್ರೀಯ ಪ್ರಶಸ್ತಿ 2022 ಸ್ಮರಣ ಫಲಕ ಹಾಗೂ ರೂ. 1 ಲಕ್ಷ ನಗದು ಬಹುಮಾನವನ್ನು ಡಾ. ಬಿ. ಜಿ. ಮೂಲಿಮನಿ ಅವರಿಗೆ ಪ್ರಧಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮುಸ್ತಫಾ ಇನಾಮಿ ಪವಿತ್ರ ಖುರಾನ, ಪ್ರಿಯಾಂಕಾ ಶ್ರೇಯಾಂಕಾ, ಸೋನಾಲಿ ಹಾಗೂ ನವ್ಯ ಅವರು ಭಗವದ್ಗೀತೆ ಪಠಿಸಿದರು. ಎ. ಆರ್. zಸ್. ಇನಾಮದಾರ, ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಮಹಮ್ಮದ್ ಅಫ್ಜಲ್ ಸ್ವಾಗತಿಸಿದರು. ಡಾ. ಸಿ. ಎಲ್. ಪಾಟೀಲ ಪರಿಚಯಿಸಿದರು. ಸಂಸ್ಥಾಪಕರ ದಿನಾಚಾರಣೆಯ ಧ್ಯೇಯ್ಯೋದ್ದೇಶಗಳನ್ನು ಪ್ರೊ. ಉಜಮಾ ಸತ್ತೀಕರ ತಿಳಿಸಿದರು.
ಈ ಸಂದರ್ಭದದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾದನೆಗೈದ ಪ್ರಾದ್ಯಾಪಕರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸನ್ಮಾನ ಕಾರ್ಯಕ್ರಮವನ್ನು ಪ್ರೊ. ಎಚ್. ಕೆ. ಯಡಹಳ್ಳಿ ನಡೆಸಿಕೊಟ್ಟರು. ಸಂಸ್ಥೆಯ ನಿರ್ದೇಶಕರಾದ ನಿವೃತ್ತ ಪ್ರಾಚಾರ್ಯ ಎ. ಎಂ. ಬಗಲಿ ವಂದಿಸಿದರು. ಡಾ. ಹಾಜಿರಾ ಪರವೀನ್, ಡಾ. ಸುಜಾತಾ ಕಟ್ಟಿಮನಿ ಹಾಗೂ ಅಕ್ಸಾ ಜಿಯಾಬೇದಿನ್ ನಿರೂಪಿಸಿದರು.