ವಿಶ್ವದಲ್ಲಿ ಜ್ಞಾನವೇ ಎಲ್ಲಕ್ಕಿಂತ ಮಿಗಿಲು- ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ

ವಿಜಯಪುರ: ವಿಶ್ವದಲ್ಲಿ ಜ್ಞಾನ ಎಲ್ಲಕ್ಕಿಂತಲೂ ಮಿಗಿಲಾಗಿದೆ.  ಜ್ಞಾನ ಜೋಳಿಗೆಯ ಮೂಲಕ ಪುಸ್ತಕಗಳನ್ನು ಸಂಗ್ರಹಿಸಿ ಸರಕಾರಿ ಶಾಲೆಗಳ ಗ್ರಂಥಾಲಯಗಳಿಗೆ ನೀಡುತ್ತಿರುವುದು ನಿಜಕ್ಕೂ ಅಭಿಮಾನದ ಸಂಗತಿ ಎಂದು ನರ್ಮದಾ ಬಚಾವೋ ಆಂದೋಲನದ ರೂವಾರಿ ಮತ್ತು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ ಹೇಳಿದ್ದಾರೆ.

ವಿಜಯಪುರ ನಗರದಲ್ಲಿ ಸಿ ಎನ್ ಎಫ್ ಇ ಸಂಸ್ಥೆಯಲ್ಲಿ ಕಾಂಗ್ರೆಸ್ ಮುಖಂಡ ಮತ್ತು ಸಮಾಜ ಸೇವಕ ಸಂಗಮೇಶ ಬಬಲೇಶ್ವರ ಕೈಗೊಂಡಿರುವ ಜ್ಞಾನ ಜೋಳಿಗೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದ ಅವರು, ತಮ್ಮ ಬಳಿಯಿದ್ದ ಪುಸ್ತಕವನ್ನು ಜ್ಞಾನ ಜೋಳಿಗೆಗೆ ಹಾಕಿ ಶುಭ ಹಾರೈಸಿದರು.

ಗ್ರಾಮೀಣ ಭಾಗದ ಮಕ್ಕಳ ಜ್ಞಾನದಾಹವನ್ನು ತಣಿಸುವ ಜ್ಞಾನ ಯಜ್ಞ ನಿರಂತರವಾಗಿ ಸಾಗಲಿ.  ಈ ಕೆಲಸ ಕಾರ್ಯಗಳ ಬಗ್ಗೆ ತಿಳಿದು ತಮಗೆ ತುಂಬಾ ಸಂತೋಷವಾಗಿದೆ ಎಂದು ಮೇಧಾ ಪಾಟ್ಕರ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜ್ಞಾನ ಜೋಳಿಗೆ ಪಬ್ಲಿಕ್ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಜ್ಞಾನ ಜೋಳಿಗೆ ಕಾರ್ಯಕ್ಕೆ ನಾಡಿನಾದ್ಯಂತ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗುತ್ತಿದೆ.  ಓದುಗರಿಗೆ ಸಾಹಿತ್ಯಾಸಕ್ತರು, ಶಿಕ್ಷಕರು, ಸಾಹಿತಿಗಳು ಮತ್ತು ಇತರರು ತಾವು ಓದಿ ಎತ್ತಿಟ್ಟಿರುವ ಪುಸ್ತಕಗಳನ್ನು ಜ್ಞಾನ ಜೋಳಿಗೆಗೆ ದಾಸೋಹ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಿ ಎನ್ ಎಫ್ ವಿಭಾಗದ ಮುಖ್ಯಸ್ಥ  ಟಿಯೋಲ್ ಮಾಚಾಡೊ ಆಲ್ವಿನ್ , ಸಿದ್ಧಲಿಂಗ ಬಾಗೇವಾಡಿ, ಭರತ ರೆಡ್ಡಿ, ಚಂದ್ರಶೇಖರ ಗಂಟೆಪ್ಪಗೋಳ, ಭರತಕುಮಾರ. ರವಿ ಕೆಂಗನಾಳ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌