ವಿಜಯಪುರ: ಬಸವ ನಾಡಿನಲ್ಲಿ ಕಳೆದ ಎರಡು ವಾರಗಳಿಂದ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಕೇವಲ 13 ದಿನಗಳಲ್ಲಿ 131 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಜನೇವರಿ 1 ರಿಂದ ಜನೇವರಿ 13ರ ವರೆಗೆ ಒಟ್ಟು 131 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ. ಈ ಮಕ್ಕಳಲ್ಲಿ 11 ರಿಂದ 18 ವರ್ಷದ ಮಕ್ಕಳಲ್ಲಿಯೇ ಕೊರೊನಾ ಸೋಂಕು ಹೆಚ್ಚಾಗಿರುವುದು ಆತಂಕ ಮೂಡಿಸಿದೆ.
ಒಂದು ವರ್ಷದೊಳಗಿನ ಮಕ್ಕಳಲ್ಲಿ ಯಾರಿಗೂ ಸೋಂಕು ತಗುಲಿಲ್ಲ. 2 ರಿಂದ 5 ವರ್ಷದೊಳಗಿನ 4, 6 ರಿಂದ 10 ವರ್ಷದೊಳಗಿನ 7, 11 ರಿಂದ 15 ವರ್ಷದೊಳಗಿನ 59 ಮತ್ತು 16 ರಿಂದ 18 ವರ್ಷದೊಳಗಿನ 61 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ವಯಸ್ಸು ಸೋಂಕಿತ ಮಕ್ಕಳ ಸಂಖ್ಯೆ
0-1 0
2-5 4
6-10 7
11-15 59
16-18 61