ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಮಹಾಸ್ಪೋಟವಾಗಿದ್ದು, ಒಂದೇ ದಿನ 107 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದು ಈಗಷ್ಟೇ ಸಹಜ ಸ್ಥಿತಿಗೆ ಮರಳುತ್ತಿರುವ ಬಸವ ನಾಡಿನ ಜನರಲ್ಲಿ ಆತಂಕ ಮೂಡಸಿದೆ.
ಇದರಲ್ಲಿ ವಿಜಯಪುರ ನಗರವೊಂದರಲ್ಲಿಯೇ 60 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ವಿಜಯಪುರ ಗ್ರಾಮೀಣ ಭಾಗದಲ್ಲಿ 4, ಬಬಲೇಶ್ವರ ತಾಲೂಕಿನಲ್ಲಿ 1, ಬಸವನ ಬಾಗೇವಾಡಿ ತಾಲೂಕಿನಲ್ಲಿ 6, ಕೊಲ್ಹಾರ ತಾಲೂಕಿನಲ್ಲಿ 5, ನಿಡಗುಂದಿ ತಾಲೂಕಿನಲ್ಲಿ 1, ಇಂಡಿ ತಾಲೂಕಿನಲ್ಲಿ 5, ಚಡಚಣ ತಾಲೂಕಿನಲ್ಲಿ 1 ಮತ್ತು ಮುದ್ದೇಬಿಹಾಳ ತಾಲೂಕಿನಲ್ಲಿ 13, ತಾಳಿಕೋಟೆ ತಾಲೂಕಿನಲ್ಲಿ 2, ಸಿಂದಗಿ ತಾಲೂಕಿನಲ್ಲಿ 5, ದೇವರ ಹಿಪ್ಪರಗಿ ತಾಲೂಕಿನಲ್ಲಿ 1 ಮತ್ತು ಇಬ್ಬರು ಬೇರೆ ಜಿಲ್ಲೆಯ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಕೊರೊನಾ ಸೋಂಕು ಆರಂಭವಾದಾಗಿನಿಂದ ಈವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಾದವರ ಸಂಖ್ಯೆ 36709ಗೆ ತಲುಪಿದೆ.
ಈ ಮಧ್ಯೆ, ಕೊರೊನಾ ಸ್ಪೋಟದ ಜೊತೆಯಲ್ಲಿಯೇ ಪಾಸಿಟಿವಿಟಿ ದರವೂ ಹೆಚ್ಚಾಗಿದೆ. ಜ. 12 ರಂದು 2.31 ರಷ್ಟಿದ್ದ ಕೊರೊನಾ ಪಾಸಿಟಿವಿಟಿ ದರ ಈಗ 5.41 ಗೆ ತಲುಪಿದೆ.
ಇದು ಈಗಷ್ಟೇ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಜನಜೀವನಕ್ಕೆ ಆತಂಕ ಮೂಡಿಸಿದೆ. ವಿದ್ಯಾರ್ಥಿಗಳಲ್ಲಿಯೂ ಕೊರೊನಾ ಸೋಂಕು ಪತ್ತೆಯಾಗುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದ್ದು, ವಿಜಯಪುರ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಈಗ ಕುತೂಹಲ ಕೆರಳಿಸಿದೆ.