ಎರಡು ವಾರ ಅನಗತ್ಯವಾಗಿ ಆಸ್ಪತ್ರೆಗಳಿಗೆ ತೆರಳಬೇಡಿ- ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು: ಕೋರೋನಾ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೊಸದಾಗಿ ಸೂಚನೆ ನೀಡಿದೆ.

ಅಸ್ವಸ್ಥ ಮತ್ತು ತುರ್ತು ಆರೋಗ್ಯ ಸೇವೆ ಅಗತ್ಯ ಇರುವ ರೋಗಿಗಳು ಮಾತ್ರ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು.

ಲಘು ಅನಾರೋಗ್ಯದ ಲಕ್ಷಣಗಳಿರುವವರು ಮತ್ತು ದಂತ ಸಂಬಂದಿ ಚಿಕಿತ್ಸೆ ರೋಗಿಗಳು ಎರಡು ವಾರ ಆಸ್ಪತ್ರೆಗಳಿಗೆ ತೆರಳಬಾರದು.  ಎರಡು ವಾರಗಳ ಕಾಲ ಅತವಾ ಮುಂದಿನ ಆದೇಶದವರೆಗೆ ಇದನ್ನು ಅನುಸರಿಸಬೇಕು ಎಂದು ಹೇಳಿದೆ.

ಖಾಸಗಿ ಆಸ್ಪತ್ರೆಗಳು ಕೂಡ ಈ ಮಾರ್ಗಸೂಚಿ ಪಾಲಿಸಬೇಕು.  ಸಧ್ಯದ ಕೋವಿಡ್-19 ಪರಿಸ್ಥಿತಿಯಲ್ಲಿ ಜನರು ಹೆಚ್ಚಾಗಿ ಸೇರುವುದನ್ನು ತಡೆಯಲು ಮತ್ತು ಸೋಂಕು ನೀಯಂತ್ರಣಕ್ಕೆ ಇದು ಅಗತ್ಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಆದರೆ, ಈಗ ಮೈಲ್ಡ್ ಇಲ್(ಲಘು ಅನಾರೋಗ್ಯ) ಎಂದು ಹೇಗೆ ಗುರುತಿಸುವುದು ಎಂಬುದು ಚರ್ಚೆಗೆ ಗ್ರಾಸವಾಗಿದೆ.

Leave a Reply

ಹೊಸ ಪೋಸ್ಟ್‌