ವಿಜಯಪುರ ಜಿಲ್ಲೆಯಲ್ಲಿ ಹೊಸದಾಗಿ 77 ಜನರಲ್ಲಿ ಕೊರೊನಾ ಸೋಂಕು ಪತ್ತೆ- ಪಾಸಿಟಿವಿಟಿ ದರ ಸ್ವಲ್ಪ ಇಳಿಕೆ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಹೊಸಗಾಗಿ 77 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆಶುಕ್ರವಾರ ಒಂದೇ ದಿನ 107 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. 

ಇದರಲ್ಲಿ ವಿಜಯಪುರ ನಗರವೊಂದರಲ್ಲಿಯೇ 27 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ವಿಜಯಪುರ ಗ್ರಾಮೀಣ ಭಾಗದಲ್ಲಿ 2, ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳಲ್ಲಿ ತಲಾ 1, ಬಸವನ ಬಾಗೇವಾಡಿ ತಾಲೂಕಿನಲ್ಲಿ 9, ಕೊಲ್ಹಾರ ತಾಲೂಕಿನಲ್ಲಿ 13, ಇಂಡಿ ತಾಲೂಕಿನಲ್ಲಿ 3, ಮುದ್ದೇಬಿಹಾಳ ತಾಲೂಕಿನಲ್ಲಿ 12, ತಾಳಿಕೋಟೆ ತಾಲೂಕಿನಲ್ಲಿ 4, ಸಿಂದಗಿ ತಾಲೂಕಿನಲ್ಲಿ 3, ದೇವರ ಹಿಪ್ಪರಗಿ ತಾಲೂಕಿನಲ್ಲಿ 2 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.  ಇದರಿಂದಾಗಿ ಕೊರೊನಾ ಸೋಂಕು ಆರಂಭವಾದಾಗಿನಿಂದ ಈವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಾದವರ ಸಂಖ್ಯೆ 36785ಗೆ ತಲುಪಿದೆ.

ಈ ಮಧ್ಯೆ, ಕೊರೊನಾ ಸೋಕಿತರ ಸಂಖ್ಯೆ ಸ್ವಲ್ಪ ಕಡಿಮೆಯಾಗಿರುವ ಹಿನ್ನೆಲೆಲ್ಲಿ ಪಾಸಿಟಿವಿಟಿ ದರದಲ್ಲಿ ಸ್ವಲ್ಪ ಇಳಿಮುಖವಾಗಿದೆ.  ಜ. 13 ರಂದು 5.41 ರಷ್ಟಿದ್ದ ಕೊರೊನಾ ಪಾಸಿಟಿವಿಟಿ ದರ ಈಗ 4.15ಗೆ ಇಳಿಕೆಯಾಗಿದೆ.

 

 

 

Leave a Reply

ಹೊಸ ಪೋಸ್ಟ್‌