2ಎ ಮೀಸಲಾತಿ ನೀಡಲು ವಿಳಂಬ- ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ಪಂಚಮಸಾಲಿ ಸಮುದಾಯದಿಂದ ಪ್ರತಿಭಟನೆ

ವಿಜಯಪುರ: ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಸವಣ್ಣನವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಪಂಚಮಸಾಲಿ ಸಮುದಾಯದಿಂದ ಪ್ರತಿಟನೆ ನಡೆಸಲಾಯಿತು. 

ಬಸವನ ಬಾಗೇವಾಡಿ ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಅಖಿಲ ಭಾರತ ಲಿಂಗಾಯಿತ ಪಂಚಮಸಾಲಿ ಮಹಾಸಭೆ ಯುವ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಂಕರಗೌಡ ಬಿರಾದಾರ, 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮ ದಿಂದ ಬೆಂಗಳೂರಿನವರಿಗೆ ಪಾದಯಾತ್ರೆ ಮಾಡಿ ಒಂದು ವರ್ಷ ಕಳೆದಿದೆ.  ಆದರೂ, ಸರಕಾರ ಇನ್ನೂ ಮೀಸಲಾತಿ ಪಟ್ಟಿಗೆ ಸೇರಿಸಿಲ್ಲ ಎಂದು ಹೇಳಿದರು.

ಕೂಡಲ ಸಂಗಮದಿಂದ ಬೆಂಗಳೂರು ವರೆಗೆ ಸುಮಾರು 780 ಕಿ. ಮೀ. ಪಾದಯಾತ್ರೆ ಮಾಡಿರುವ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಮಾಜದ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.  ಅವರ ಹೋರಾಟ ವ್ಯರ್ಥವಾಗಬಾರದು.  ಪಂಚಮಸಾಲಿ ಸಮುದಾಯದ ಬಹುತೇಕ ಜನರು ಕೃಷಿ ಕೆಲಸ ಮಾಡುತ್ತಿದ್ದಾರೆ.  ಈ ಸಮಾಜದ ಮಕ್ಕಳಿಗೆ ಸರಕಾರ ಕೂಡಲೇ 2ಎ ಮೀಸಲಾತಿ ನೀಡಬೇಕು.  ಒಂದು ವೇಳೆ ಸರಕಾರ ಇನ್ನೂ ವಿಳಂಬ ಮಾಡಿದರೆ ರಾಜ್ಯಾದ್ಯಂತ ಮತ್ತೆ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಿರಿಯ ಸಾಹಿತಿ ಲ. ರೂ. ಗೊಳಸಂಗಿ ಮಾತನಾಡಿ, ಲಿಂಗಾಯಿತ ಪಂಚಮಸಾಲಿ ಸಮುದಾಯದಲ್ಲಿ ಸಾಕಷ್ಟು ಜನ ಬಡವರಿದ್ದಾರೆ.  ಕೃಷಿ ಕಾರ್ಮಿಕರಿದ್ದಾರೆ.  ಕೂಡಲೇ ಸರಕಾರ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಿ ಎಲ್ ಡಿ ಇ ಬ್ಯಾಂಕಿನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ತಾಲೂಕ ಯುವ ಘಟಕದ ಅಧ್ಯಕ್ಷ ಸಂಜು ಬಿರಾದಾರ, ತಾಲೂಕು ಅಧ್ಯಕ್ಷ ಬಸವರಾಜ ಗೊಳಸಂಗಿ, ಸುರೇಶಗೌಡ ಪಾಟೀಲ, ಸುನಿಲಗೌಡ ಚಿಕ್ಕೊಂಡ, ಬಸಣ್ಣ ದೇಸಾಯಿ ಕಲ್ಲೂರ. ಎಪಿಎಂಸಿ ಸದಸ್ಯ ಶೇಖj ಗೊಳಸಂಗಿ, ಶ್ರೀಕಾಂತ ಕೊಟ್ರಶೆಟ್ಟಿ, ಬಸವರಾಜ ಕೋಟಿ, ಸಂಗನಗೌಡ ಚಿಕ್ಕೊಂಡ, ಶೇಖರಗೌಡ ಪಾಟೀಲ, ಅರವಿಂದ ಗೊಳಸಂಗಿ, ಮುತ್ತು ಡಂಬಳ, ಸುರೇಶ ಹಾರಿವಾಳ, ಪ್ರಶಾಂತ ಮುಂಜಾನೆ, ವಿನೋದ ಗಬ್ಬೂರ, ಮಂಜು ಚಿಕ್ಕೊಂಡ, ಮಲ್ಲಿಕಾರ್ಜುನ ಅವಟಿ, ದಯಾನಂದ ಜಾಲಗೇರಿ, ಶ್ರೀಶೈಲ ಹೆಬ್ಬಾಳ, ರಮೇಶ ಬೇನಾಳ, ಮಂಜುನಾಥ ಜಾಲಗೇರಿ, ಸಂಗನ ಬಸವ ಪೂಜಾರಿ, ನಿಂಗಪ್ಪ ಅವಟಿ, ಸಾಹೇಬಗೌಡ ಪಾಟೀಲ, ಅಮೃತ ಬಾಗೇವಾಡಿ, ರಾಜು ಬಸರಕೋಡ, ಗುರುರಾಜ ವಂದಾಲ, ಬಸವರಾಜ ಮುಂಜಾನೆ, ರಾಮನಗೌಡ ಪಾಟೀಲ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌