ಪ್ರತಿಯೊಂದು ಆಂದೋಲನ ಸಂಘರ್ಷದಿಂದ ಉಂಟಾಗಿರುತ್ತವೆ- ಮೇಧಾ ಪಾಟ್ಕರ್

ವಿಜಯಪುರ: 22ನೇ ಶತಮಾನ ಆರಂಭವಾದರೂ ಇನ್ನೂ ಅನೇಕ ಮಹಿಳೆಯರು ಮೂಲಭೂತ ಸೌಕರ್ಯಗಳು ಮತ್ತು ಶಿಕ್ಷಣದಿಂದ ವಂಚಿತರಾಗಿದ್ದಾರೆ,  ನಾಲ್ಕು ಗೊಡೆಗಳ ಮದ್ಯದಲ್ಲಿಯೇ ಜೀವನ ನಡೆಸುತ್ತಿರುವವರಿಗೆ ವಿಶೇಷ ಕಾಳಜಿ ವಹಿಸಿ ಉತ್ತಮ ಶಿಕ್ಷಣ ನೀಡಿದಾಗ ಅವರೂ ಕೂಡ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಹೇಳಿದ್ದಾರೆ.

ವಿಜಯಪುರದಲ್ಲಿ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಾದ ಅವಶ್ಯಕತೆಯಿದೆ.  ಮಹಿಳೆಯರ ಮೇಲಾಗುವ ಅನ್ಯಾಯ, ಅತ್ಯಾಚಾರ, ದುಷ್ಕೃತ್ಯಗಳು ನಡೆಯದಂತೆ ಸುಂದರ ಸಮಾಜ ನಿರ್ಮಾಣವಾಗಬೇಕು.  ಒಬ್ಬ ಮಹಿಳೆಗೆ  ಅನ್ಯಾಯವಾದಾಗ ಆಕೆಯ ಪರವಾಗಿ ಇನ್ನೊಬ್ಬ ಮಹಿಳೆ ಇದ್ದರೆ ಅಲ್ಲಿ ಆಂದೋಲನ ಆರಂಭವಾಗುತ್ತದೆ.  ಆಕೆಗೆ ಹೋರಾಟ ಮಾಡುವ ಶಕ್ತಿ ಬರುತ್ತದೆ. ಪ್ರತಿಯೊಂದು ಆಂದೋಲನ ಸಂಘರ್ಷದಿಂದ ಉಂಟಾಗಿರುತ್ತದೆ ಎಂದು ಅವರು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್. ಜಿ. ರೊಡಗಿ, ಮೇಧಾ ಪಾಟ್ಕರ ಅವರು ಇಂದಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ.  ಅವರ ಸಾಮಾಜಿಕ ಕೊಡುಗೆ ಅಪಾರ.  ಅವರ ಜೀವನ ಸಾದನೆಗಳು ಪ್ರತಿಯೊಬ್ಬ ಹೋರಾಟಗಾರಿಗೆ ಸ್ಪೂರ್ತಿಯಾಗಿವೆ.  ಸಮಾಜದ, ದೇಶದ ಪ್ರಗತಿಯಲ್ಲಿ ಅವರೊಂದಿಗೆ ನಾವೂ ಕೈಜೋಡಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ಸಂಗು ಸಜ್ಜನ, ಆಡಳಿತಾಧಿಕಾರಿ ಡಾ. ಕೆ. ಜಿ. ಪೂಜಾರಿ, ನ್ಯಾಯವಾದಿ ವಿದ್ಯಾ ದೇಶಪಾಂಡೆ, ಸ್ಥಳಿಯ ರೈತರು, ಕಾರ್ಮಿಕರು, ಪಾಲಕರು, ನಾನಾ ಕಾಲೇಜುಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮ ಆರಂಭವಾಗುವುದಕ್ಕೂ ಮುಂಚೆ ಮೇಧಾ ಪಾಟ್ಕರ ಅವರು ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟು ಸಂತಸ ವ್ಯಕ್ತಿಪಡಿಸಿದರು.

ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.  ಮಹಿಳಾ ವೇದಿಕೆ ಮುಖ್ಯಸ್ಥೇ ಡಾ. ಮಹಾನಂದಾ ಪಾಟೀಲ, ಪರಿಚಯಿಸಿದರು.  ಡಾ. ಎಸ್. ಟಿ ಮೆರವಡೆ ನಿರೂಪಿಸಿದರು. ಡಾ. ಭಕ್ತಿ ಮಹಿಂದ್ರಕರ್ ವಂದಿಸಿದರು.

 

Leave a Reply

ಹೊಸ ಪೋಸ್ಟ್‌