ಭೀಮಾ ನದಿಯಲ್ಲಿ ಐದು ಕಡೆ ಮರಳುಗಾರಿಕೆಗೆ ಶೀಘ್ರದಲ್ಲಿ ಅವಕಾಶ ನೀಡಲಾಗುವುದು- ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ
ವಿಜಯಪುರ: ಭೀಮಾ ನದಿಯಲ್ಲಿ ಮರಳುಗಾರಿಕೆಗೆ ಶೀಘ್ರದಲ್ಲಿ ಅವಕಾಶ ನೀಡಲಾಗುವುದು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಭೀಮಾ ನದಿಯಲ್ಲಿ ಮರಳುಗಾರಿಕೆಗೆ 2016-17 ರಿಂದ ನೀಡಲಾಗಿದ್ದ ತಡೆಯಾಜ್ಞೆಯನ್ನು 26.02.2021 ರಂದು ತೆರವುಗೊಳಿಸಿದೆ. ತಡೆಯಾಜ್ಞೆ ಇದ್ದ ಸಮಯದಲ್ಲಿ ಮರಳುಗಾರಿಕೆಗೆ ಬ್ಲಾಕುಗಳನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಈ ಕುರಿತು ಸರಕಾರಕ್ಕೆ ಮಾಹಿತಿ ನೀಡಲಾಗಿತ್ತು. ಮರಳುಗಾರಿಕೆಗೆ ಇರುವ ಮಾರ್ಗಸೂಚಿ ಮತ್ತು ಸರಕಾರದ ಹೊಸ ಮರಳು ನೀತಿ-2020 ರಂತೆ ಕ್ರಮ ಕೈಗೊಳ್ಳಲು […]
ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರಿಂದ ನಾನಾ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ವಿಜಯಪುರ: ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಜಿಲ್ಲೆಯ ನಾನಾ ಯೋಜನೆಗಳಡಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. ನಾಗಠಾಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಆಹೇರಿ ತಾಂಡಾದಲ್ಲಿ ಪ್ರಗತಿ ಕಾಲೋನಿ ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರೂ 1.50 ಕೋ. ವೆಚ್ಚದಲ್ಲಿ ಮಾಡಲಾಗುತ್ತಿರುವ ಸಿಸಿ ರಸ್ತೆ ಮತ್ತು ಸಮುದಾಯ ಭವನಗಳ ಪೂರ್ಣಗೊಂಡ ಕಾಮಗಾರಿಗಳನ್ನು ಅವರು ವೀಕ್ಷಿಸಿದರು. ಅಲ್ಲದೇ, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಕನ್ನಾಳ ಗ್ರಾಮದಲ್ಲಿ ರೂ. 10 ಲಕ್ಷ […]
ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಶತಕ ದಾಟಿದ ಕೊರೊನಾ ಸೋಂಕು- ಪಾಸಿಟಿವಿಟಿ ದರ ಮತ್ತೆ ಏರಿಕೆ
ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಹೊಸದಾಗಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಶತಕ ದಾಟಿದೆ. ಈಗ ಹೊಸದಾಗಿ 102 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಶುಕ್ರವಾರ ಒಂದೇ ದಿನ 107 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಶನಿವಾರ ಈ ಸಂಖ್ಯೆ 77ಕ್ಕೆ ಇಳಿಕೆಯಾಗಿತ್ತು. ಈಗ ಮತ್ತೆ 102 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಲ್ಲಿ ವಿಜಯಪುರ ನಗರವೊಂದರಲ್ಲಿಯೇ 48 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ವಿಜಯಪುರ ಗ್ರಾಮೀಣ ಭಾಗದಲ್ಲಿ ಒಬ್ಬರಲ್ಲಿ, ತಿಕೋಟಾ ತಾಲೂಕಿನಲ್ಲಿ 3, […]