ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಹೊಸದಾಗಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಶತಕ ದಾಟಿದೆ. ಈಗ ಹೊಸದಾಗಿ 102 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಶುಕ್ರವಾರ ಒಂದೇ ದಿನ 107 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಶನಿವಾರ ಈ ಸಂಖ್ಯೆ 77ಕ್ಕೆ ಇಳಿಕೆಯಾಗಿತ್ತು. ಈಗ ಮತ್ತೆ 102 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ.
ಇದರಲ್ಲಿ ವಿಜಯಪುರ ನಗರವೊಂದರಲ್ಲಿಯೇ 48 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ವಿಜಯಪುರ ಗ್ರಾಮೀಣ ಭಾಗದಲ್ಲಿ ಒಬ್ಬರಲ್ಲಿ, ತಿಕೋಟಾ ತಾಲೂಕಿನಲ್ಲಿ 3, ಬಸವನ ಬಾಗೇವಾಡಿ ತಾಲೂಕಿನಲ್ಲಿ 2, ಕೊಲ್ಹಾರ ತಾಲೂಕಿನಲ್ಲಿ 12, ನಿಡಗುಂದಿಯಲ್ಲಿ ಒಬ್ಬರು, ಇಂಡಿ ತಾಲೂಕಿನಲ್ಲಿ 6, ಚಡಚಣ ತಾಲೂಕಿನಲ್ಲಿ 2, ಮುದ್ದೇಬಿಹಾಳ ತಾಲೂಕಿನಲ್ಲಿ 19, ತಾಳಿಕೋಟೆ ತಾಲೂಕಿನಲ್ಲಿ ಒಬ್ಬರು, ಸಿಂದಗಿ ತಾಲೂಕಿನಲ್ಲಿ 6, ದೇವರ ಹಿಪ್ಪರಗಿ ತಾಲೂಕಿನಲ್ಲಿ ಒಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಕೊರೊನಾ ಸೋಂಕು ಆರಂಭವಾದಾಗಿನಿಂದ ಈವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಾದವರ ಸಂಖ್ಯೆ 36886ಕ್ಕೆ ಏರಿಕೆಯಾಯಾಗಿದೆ.
ಈ ಮಧ್ಯೆ, ಕೊರೊನಾ ಸೋಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪಾಸಿಟಿವಿಟಿ ದರವೂ ಹೆಚ್ಚಾಗಿದೆ. ಶನಿವಾರ 4.15 ರಷ್ಟಿದ್ದ ಪಾಸಿಟಿವಿಟಿ ದರ ಈಗ 6.69ಗೆ ಏರಿಕೆಯಾಗಿದೆ.