ಕೋವಿಡ್ ನಿಂದ ಗುಣಮಖರಾದ ಸಿಎಂ- ಕೋವಿಡ್ ನಿರ್ಬಂಧ ಸಡಲಿಕೆ ಬಗ್ಗೆ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋವಿಡ್ ನಿಂದ ಗುಣಮುಖರಾಗಿದ್ದು, ದಿನಿನಿತ್ಯದ ಕಚೇರಿ ಕೆಲಸಗಳಲ್ಲಿ ತೊಡಗಿಸಿಕೊಡೇದಿದ್ದಾರೆ. ಕೊರೊನಾದಿಂದ ಗುಣಮುಖರಾದ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ 11 -12 ದಿನಗಳ ಕಾಲ ಕ್ವಾರಂಟೈನ್ ಅವಧಿ ಮುಗಿದಿದ್ದು, ಕೋವಿಡ್ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ.  ಇಂದಿನಿಂದ ದಿನದ ಕೆಲಸ ಕಾರ್ಯಗಳಲ್ಲಿ ತೊಡಗುವುದಾಗಿ ತಿಳಿಸಿದರು. ಕೋವಿಡ್ ನಿಯಮ ಸಡಿಲಿಕೆ ಕುರಿತು ವಿಚಾರ ಈ ಬಾರಿ ಕೊರೊನಾ ಸೋಂಕಿತರು  ಆಸ್ಪತ್ರೆ ದಾಖಲಾಗುವ ಪ್ರಮಾಣ ಕಡಿಮೆಯಿದೆ.  ಹೀಗಾಗಿ […]

ಸಿಂದಗಿ ತಹಸೀಲ್ದಾರ ಕಚೇರಿಯಲ್ಲಿ ಮಹಾಯೋಗಿ ವೇಮನ ಜಯಂತಿ ಆಚರಣೆ

ವಿಜಯಪುರ: ಮಹಾಯೋಗಿ ವೇಮನ ಜಯಂತಿಯನ್ನು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಆಚರಿಸಲಾಯಿತು. ಸಿಂದಗಿ ತಹಸೀಲ್ದಾರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ ವೇಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.  ಬಳಿಕ ಮಾತನಾಡಿದ ಅವರು, ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಮಹಾನ್ ಚೇತನಕ್ಕೆ ವೇಮನ್ ಅವರಿಗೆ ಅನಂತ ನಮನಗಳು ಎಂದು ಹೇಳಿದರು. ಈ ಸಂದರ್ಭದಲ್ಲಿ ಖಂಡರಾದ ಅನಂತರಡ್ಡಿ ದೇವರಡ್ಡಿ, ರವಿ ಮಂಗಳೂರ, ಸಂಗನಗೌಡ ಪಾಟೀಲ, ಬಸವರಾಜ ಕೋಳೂರ, ರಾಜೇಂದ್ರರಡ್ಡಿ ದೇಸಾಯಿ ಉಪಸ್ಥಿತರಿದ್ದರು.

ಕೆಲ ಸಂಘಟನೆಗಳಿಂದ ಎಂ. ಬಿ. ಪಾಟೀಲ ಅವರ ತೇಜೋವಧೆ ಆರೋಪ- ನಾನಾ ಸಂಘಟನೆಗಳ ಸಭೆಯಲ್ಲಿ ಮುಖಂಡರು ಮಾತುಗಳು

ವಿಜಯಪುರ: ಮೇಕೆದಾಟು ವಿಚಾರದಲ್ಲಿ ಜಲಸಂಪನ್ಮೂಲ ಖಾತೆ ಹಾಲಿ ಮತ್ತು ಮಾಜಿ ಸಚಿವರ ಮಧ್ಯೆ ಆರೋಪ ಪ್ರತ್ಯೋರೋಪಗಳು ನಡೆದಿದ್ದವು. ಈ ಸಂದರ್ಭದಲ್ಲಿ ಕೆಲವು ಸಂಘಟನೆಗಳು ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ವಿಜಯಪುರ ನಿವಾಸದ ಎದುರು ಪ್ರತಿಭಟನೆ ನಡೆಸಿ, ಪ್ರತಿಕೃತಿ ಕೂಡ ದಹನ ಮಾಡಿದ್ದರು. ಇದಾದ ಬಳಿಕ ಕೆಲವು ಸಂಘಟನೆಗಳ ಕಾರ್ಯಕರ್ತರು ಎಂ. ಬಿ. ಪಾಟೀಲ ವಿರುದ್ಧ ಮೂರು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಜಾತಿನಿಂದನೆ ಪ್ರಕರಣ ದಾಖಲಿಸಲು ದೂರು ನೀಡಿದ್ದವು.        ಈ ಹಿನ್ನೆಲೆಯಲ್ಲಿ, […]

ಜಿಲ್ಲೆಯಲ್ಲಿ ದಲಿತರ ಹೆಸರಿನಲ್ಲಿ ಅನಗತ್ಯವಾಗಿ ಜನರನ್ನು ಎತ್ತಿ ಕಟ್ಟಿದ ಆರೋಪ- ನಾನಾ ಸಂಘಟನೆಗಳ ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು ಗೊತ್ತಾ?

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಕೆಲವು ಸಂಘಟನೆಯವರು ದಲಿತರ ಹೆಸರಿನಲ್ಲಿ ಅನಗತ್ಯವಾಗಿ ಕೆಲವರನ್ನು ಎತ್ತಿ ಕಟ್ಟಿ ಸುಳ್ಳು ಪ್ರಕರಣ ದಾಖಲಿಸುವುದು, ಬೆದರಿಗೆ ಹಾಕುವುದು, ತೇಜೋವಧೆ ಮಾಡುವುದು ಇತ್ಯಾದಿ ಕಿರುಕುಳ ಗುರಿತು ಸಮಾಲೋಚನೆ ಸಭೆ ವಿಜಯಪುರ ನಗರದ ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ನಡೆಯಿತು. ಈ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಣ್ಣ ಕೈಗಾರಿಕೆಗಳ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಮತ್ತು ವಿಜಯಪುರ ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ನ್ಯಾಯವಾದಿ ಮತ್ತು ಗಡಿ ಅಭಿವೃದ್ಧಿ […]

ಕಾರ್ಯಕರ್ತರೇ ಬಿಜೆಪಿ ಜೀವಾಳ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಕಾರ್ಯಕರ್ತರೇ ಬಿಜೆಪಿ ಜೀವಾಳ. ಅವರ ಪರಿಶ್ರಮ ಅನನ್ಯ. ಕಾರ್ಯಕರ್ತರು ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಿ ಮುನ್ನಡೆಯಬೇಕು ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ವಿಜಯಪುರ ನಗರದ ಡೋಬಳೆ ಗಲ್ಲಿಯಲ್ಲಿ ವಾರ್ಡ್ ಸಂಖ್ಯೆ 7ರಲ್ಲಿ ಬರುವ ಬಿಜೆಪಿ ಭೂತ್ ಅಧ್ಯಕ್ಷರ ಮನೆಗಳಿಗೆ ನಾಮಫಲಕ ಅಳವಡಿಕೆ ಮತ್ತು ಪಕ್ಷಕ್ಕಾಗಿ ಕಿರುದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾರ್ಯಕರ್ತರ ಫಲವಾಗಿಯೇ ಪಕ್ಷ ಬೆಳೆಯುತ್ತದೆ. ಸಾಮಾನ್ಯ ಕಾರ್ಯಕರ್ತನಾದ ನಾನು ಗೊತ್ತು, ಪರಿಚಯವಿಲ್ಲದ ಚಿಕ್ಕೊಡಿಯಲ್ಲಿ […]