ವಿಜಯಪುರ: ಕಾರ್ಯಕರ್ತರೇ ಬಿಜೆಪಿ ಜೀವಾಳ. ಅವರ ಪರಿಶ್ರಮ ಅನನ್ಯ. ಕಾರ್ಯಕರ್ತರು ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಿ ಮುನ್ನಡೆಯಬೇಕು ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ವಿಜಯಪುರ ನಗರದ ಡೋಬಳೆ ಗಲ್ಲಿಯಲ್ಲಿ ವಾರ್ಡ್ ಸಂಖ್ಯೆ 7ರಲ್ಲಿ ಬರುವ ಬಿಜೆಪಿ ಭೂತ್ ಅಧ್ಯಕ್ಷರ ಮನೆಗಳಿಗೆ ನಾಮಫಲಕ ಅಳವಡಿಕೆ ಮತ್ತು ಪಕ್ಷಕ್ಕಾಗಿ ಕಿರುದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕರ್ತರ ಫಲವಾಗಿಯೇ ಪಕ್ಷ ಬೆಳೆಯುತ್ತದೆ. ಸಾಮಾನ್ಯ ಕಾರ್ಯಕರ್ತನಾದ ನಾನು ಗೊತ್ತು, ಪರಿಚಯವಿಲ್ಲದ ಚಿಕ್ಕೊಡಿಯಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರ ಶ್ರಮವೇ ಕಾರಣ. ಮಂಡಳ ಅಧ್ಯಕ್ಷರಾಗುವುದು ಒಂದು ದೊಡ್ಡ ಯೋಗವಿದ್ದಂತೆ. ಈ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ಮಂಡಳ ಅಧ್ಯಕ್ಷರು ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
ಬಿಜೆಪಿ ಜನಪರ ಒಳಿತನ್ನು ಬಯಸುವ ಪಕ್ಷ. ಜನರ ದೇಣಿಗೆಯೇ ಈ ಪಕ್ಷಕ್ಕೆ ಆಧಾರ. ಈ ದೇಣಿಗೆ ಅಭಿಯಾನವನ್ನು ಎಲ್ಲ ಕಾರ್ಯಕರ್ತ ಬಂಧುಗಳು ಯಶಸ್ವಿಗೊಳಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಕರೆ ನೀಡಿದರು.
ಬಿಜೆಪಿ ಮಂಡಳ ಅಧ್ಯಕ್ಷ ಮಳುಗೌಡ ಪಾಟೀಲ ಮಾತನಾಡಿ, ದೇಶದಲ್ಲಿ 10.36 ಲಕ್ಷ ಭೂತ್ ಅಧ್ಯಕ್ಷರಿದ್ದಾರೆ. ಅವರ ಮನೆಗಳಿಗೆ ನಾಮಫಲಕ, ಪಕ್ಷದ ಧ್ವಜ ಅಳವಡಿಸುವ ಮಹತ್ವದ ಅಭಿಯಾನ ನಡೆಯುತ್ತಿದೆ. ಈ ಮೂಲಕ ಪಕ್ಷವನ್ನು ಸಂಘಟಿಸಲಾಗುತ್ತಿದೆ. ಮಂಡಳ ಅಧ್ಯಕ್ಷರು ತಮ್ಮ ಕಾರ್ಯಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ ವಾರಕ್ಕೊಮ್ಮೆ ಭೂತ್ ಸಮಿತಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಹಾಗೂ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.
ಸಾಬರಮತಿ ಭೂತ್ ಅಧ್ಯಕ್ಷರಾಗಿದ್ದ ಅಮಿತ ಶಾ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಚಿಕ್ಕಮಗಳೂರು ಭೂತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಸಿ. ಟಿ. ರವಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಆಟೋದಲ್ಲಿ ತಿರುಗಾಡಿ ಸಂಘಟಿಸಿದ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸಚಿವ ಸ್ಥಾನ ಅಲಂಕರಿಸಿದ್ದು ಬಿಜೆಪಿಯಲ್ಲಿ. ಹೀಗಾಗಿ ಬಿಜೆಪಿಯಲ್ಲಿ ವಂಶಾಡಳಿತವಿಲ್ಲ. ದೇಶ, ಪಕ್ಷಕ್ಕಾಗಿ ದುಡಿಯುವುದೇ ಬಿಜೆಪಿ ಧ್ಯೇಯ. ಪ್ರಾಮಾಣಿಕತೆಯಿಂದ ದುಡಿದವರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ಕಟ್ಟಿಟ್ಟ ಬುತ್ತಿ ಎಂದು ಮಳುಗೌಡ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಾದಾರ, ಬಿಜೆಪಿ ಮುಖಂಡರಾದ ಸಂಜಯ ಪಾಟೀಲ ಕನಮಡಿ, ರವಿಕಾಂತ ಬಗಲಿ, ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಗೋಪಾಲ ಘಟಕಾಂಬಳೆ, ಮಾಜಿ ಸದಸ್ಯರಾದ ರಾಹುಲ ಜಾಧವ, ಲಕ್ಷ್ಮಿ ಕನ್ನೊಳ್ಳಿ, ಅಲ್ತಾಫ ಇಟಗಿ, ರಾಜೇಶ ದೇವಗಿರಿ, ರಾಜಶೇಖರ ಮಗಿಮಠ, ಚಿದಾನಂದ ಚಲವಾದಿ, ಬಸವರಾಜ ಬೈಚಬಾಳ, ವಿಜಯ ಜೋಶಿ, ಕಾಂತು ಶಿಂಧೆ, ಭರತ ಕೋಳಿ, ಪಾಪುಸಿಂಗ ರಜಪೂತ, ಛಾಯಾಮಸಿ, ಮಲ್ಲಮ್ಮ ಜೋಗೂರ, ವಿಕಾಸ ಚವ್ಹಾಣ, ರೋಹಿತ ಜಾಧವ, ರಾಜೇಶ ತವಸೆ, ಸುರೇಶ ಬಿರಾದಾರ, ವಿನಾಯಕ ದಹಿಂಡೆ, ಸಂಗಮೇಶ ಉಕ್ಕಲಿ, ಸತೀಶ ಅಗಸರ, ಸದಾಶಿವ ಬುಟಾಳೆ, ರಾಜು ವಾಲಿ, ಈರಣ್ಣ ಪಟ್ಟಣಶೆಟ್ಟಿ, ಆನಂದ ಮುಚ್ಚಂಡಿ, ಚಂದ್ರು ಚೌಧರಿ, ವಿಠ್ಠಲ ನಡುವಿನಕೇರಿ, ರಾಜಶೇಖರ ತಾಳಿಕೋಟ, ಸಂಪತ ಕೋಹಳ್ಳಿ, ರಮೇಶ ಶ್ಯಾಪೇಟಿ, ರಾಹುಲ ಔರಂಗಬಾದ, ಸಮೀರ ಕುಲಕರ್ಣಿ, ಶಂಕರ ಹೂಗಾರ, ಸುವರ್ಣ ಕುರ್ಲೆ, ಪ್ರವೀಣ ಕೂಡಗಿ, ಮೌನೇಶ ಪತ್ತಾರ, ಸಂತೋಷ ವೆಂಕಪ್ಪಗೋಳ, ರಾಮಚಂದ್ರ ಚವ್ಹಾಣ, ಸತೀಶ ಡೋಬಳೆ, ಉದಯ ಸಾಳುಂಕೆ, ರಾಜು ಹುನ್ನೂರ ಮುಂತಾದವರು ಉಪಸ್ಥಿತರಿದ್ದರು.