ವಿಜಯಪುರ: ಗುಮ್ಮಟ ನಗರಿ ವಿಜಯಪುರ ನಗರದಲ್ಲಿ ಕೊರೊನಾ ಮಹಾಸ್ಪೋಟವಾಗಿದ್ದು, ಜಿಲ್ಲೆಯಲ್ಲಿಯೂ ಭಾರಿ ಸಂಖ್ಯೆಯಲ್ಲಿ ಸೋಂಕು ತಗುಲಿದೆ.
ಒಂದೇ ದಿನ 474 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದು ಜಿಲ್ಲೆಯಲ್ಲಿ ಸಾಕಷ್ಟು ಆತಂಕ ಸೃಷ್ಠಿಸಿದೆ.
ವಿಜಯಪುರ ನಗರವೊಂದರಲ್ಲಿಯೇ 180 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವಿಜಯಪುರ ಗ್ರಾಮೀಣ ಭಾಗದಲ್ಲಿ 16, ಬಬಲೇಶ್ವರ ತಾಲೂಕಿನಲ್ಲಿ 16, ತಿಕೋಟಾ ತಾಲೂಕಿನಲ್ಲಿ 8, ಬಸವನ ಬಾಗೇವಾಡಿ ತಾಲೂಕಿನಲ್ಲಿ 40, ಕೊಲ್ಹಾರ ತಾಲೂಕಿನಲ್ಲಿ 5, ನಿಡಗುಂದಿ ತಾಲೂಕಿನಲ್ಲಿ 10, ಇಂಡಿ ತಾಲೂಕಿನಲ್ಲಿ 45, ಚಡಚಣ ತಾಲೂಕಿನಲ್ಲಿ 47, ಮುದ್ದೇಬಿಹಾಳ ತಾಲೂಕಿನಲ್ಲಿ 79, ತಾಳಿಕೋಟೆ ತಾಲೂಕಿನಲ್ಲಿ 9, ಸಿಂದಗಿ ತಾಲೂಕಿನಲ್ಲಿ 50, ದೇವರ ಹಿಪ್ಪರಗಿ ತಾಲೂಕಿನಲ್ಲಿ 6ಮತ್ತು ಇಬ್ಬರು ಬೇರೆ ಜಿಲ್ಲೆಯ 3 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಇದು ಈಗಷ್ಟೇ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಜನಜೀವನಕ್ಕೆ ಆತಂಕ ಮೂಡಿಸಿದೆ. ವಿದ್ಯಾರ್ಥಿಗಳಲ್ಲಿಯೂ ಕೊರೊನಾ ಸೋಂಕು ಪತ್ತೆಯಾಗುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದ್ದು, ಮಹಿಳಾ ವಿಶ್ವವಿದ್ಯಾಲಯ ಸೇರಿದಂತೆ ಕೆಲವು ಶಾಲೆಗಳಿಗೆ ಈಗಾಗಲೇ ಒಂದು ವಾರ ರಜೆ ನೀಡಲಾಗಿದೆ.