ಇಬ್ಬರು ಕಳ್ಳರನ್ನು ಬಂಧಿಸಿದ ಗಾಂಧಿಚೌಕ ಪೊಲೀಸರು- ಚಿನ್ನಾಭರಣ, ಮೋಟಾರ ಸೈಕಲ್ ವಶ

ವಿಜಯಪುರ: ವಿಜಯಪುರ ನಗರದಲ್ಲಿ ಇತ್ತೀಚೆಗೆ ನಡೆದ ನಾನಾ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಗಾಂಧಿಚೌಕ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಮೂರು ಬೈಕ್ ವಶಪಡಿಸಿಕೊಂಡಿದ್ದಾರೆ. 

ಮನೆಗಳ್ಳತನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ಅವರು ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಲಕ್ಷ್ಮಿನಾರಾಯಣ , ಸಿಪಿಐ ರವೀಂದ್ರ ನಾಯ್ಕೋಡಿ ಅವರ ನೇತೃತ್ವದಲ್ಲಿ ತಂಡ ರಚಿಸಿದ್ದರು.  ಈ ತಂಡ ಮನೆಗಳ್ಳತನ ಮತ್ತು ಬೈಕ್ ಕದ್ದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಸೂರ ಗ್ರಾಮದ ಮತ್ತು ಸಧ್ಯಕ್ಕೆ ವಿಜಯಪುರ ನಗರದ ನಿಸಾರಮಡ್ಡಿ ಲಾಲ ಬಂಗ್ಲಾ ಬಳಿ ವಾಸಿಸುವ ಮತ್ತಪ್ಪ ಹಣಮಂತ ಮೂಲಿಮನಿ(25)  ಮತ್ತು ವಿಜಯಪುರ ನಗರದ ಆದರ್ಶ ನಗರ ಬಳಿ ಇರುವ ಕಾಶಿನಕೇರಿ ತಾಂಡಾ ನಿವಾಸಿ ಹಾಗೂ ಸಧ್ಯಕ್ಕೆ ಐಶ್ವರ ನಗರದಲ್ಲಿ ವಾಸಿಸುವ ಮಹಾವೀರ ರಾಮಜಿ ಚವ್ಹಾಣ(33) ಎಂಬುವರನ್ನು ವಶಕ್ಕೆ ಪಡೆದಿದೆ.

ಈ ಆರೋಪಿಗಳನ್ನು ವಿಚಾರಣೆ ಒಳಪಡಿಸಿದಾಗ ಇವರಿಬ್ಬರೂ ಸೇರಿಕೊಂಡು ವಿಜಯಪುರ ನಗರದ ರಹಿಮ ನಗರ ಮತ್ತು ಗ್ಯಾಂಗ ಬಾವಡಿಯಲ್ಲಿ ಮನೆಗಳ್ಳತನ ಮತ್ತು ಸರಾಫ ಬಜಾರ ಬಳಿ ಮೂರು ಕಡೆಗಳಲ್ಲಿ ಬೈಕ್ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.  ಅಲ್ಲದೇ, ಇವರ ಬಳಿಯಿದ್ದ ಸುಮಾರು ರೂ. 8.16 ಲಕ್ಷ ಮೌಲ್ಯದ 204 ಗ್ರಾಂ ಚಿನ್ನಾಭರಣ ಹಾಗೂ ರೂ. 87600 ಮೌಲ್ಯದ 1460 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ರೂ. 1, 50 ಲಕ್ಷ ಮೌಲ್ಯದ ಮೂರು ಮೋಟಾರ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.  ಇದರಿಂದಾಗಿ ಒಟ್ಟು ರೂ. 1053600 ಮೌಲ್ಯದ ನಾನಾ ಸಾಮಾನುಗಳನ್ನು ವಶಪಡಿಸಿಕೊಂಡಂತಾಗಿದೆ ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ತಿಳಿಸಿದ್ದಾರೆ.

ಈ ಪ್ರಕರಣವನ್ನು ಪತ್ತೆ ಮಾಡಿದ ವಿಜಯಪುರ ನಗರದ ಗಾಂಧಿಚೌಕ ಸಿಪಿಐ ರವೀಂದ್ರ ಕೆ. ನಾಯ್ಕೋಡಿ, ಪಿ ಎಸ್ ಐ ಆರೀಪ ಮುಶಾಪುರಿ, ಆರ್. ಬಿ. ಕೂಡಗಿ, ದೀಪಾ, ಸಿಬ್ಬಂದಿಯಾದ ಎಸ್. ಬಿ. ಚನಶಟ್ಟಿ, ಟಿ. ಎಂ. ಶೇಲಾರ, ಬಾಬು ಕೆ. ಗುಡಿಮನಿ ಎಚ್. ಎಚ್. ಜಮಾದಾರ, ಶಿವಾನಂದ ಅಳ್ಳಿಗಿಡದ, ಬಶೀರ ಅಹ್ಮದ ಎಂ. ಶೇಖ, ರಾಮನಗೌಡ.ಬಿ. ಬಿರಾದಾರ, ಎನ್, ಕೆ. ಮುಲ್ಲಾ, ಎಸ್. ವಿ. ಜೋಗಿನ, ವಿಕ್ರಮ ಶಾಪುರ, ತಾಂತ್ರಿಕ ಸಿಬ್ಬಂದಿಯಾದ ಸುನೀಲ ಗೌಳಿ, ಗುಂಡು ಗಿರಣಿವಡ್ಡರ, ಮತೀನ ಬಾಗವಾನ ಅವರಿಗೆ ಎಸ್ಪಿ ಎಚ್. ಡಿ. ಆನಂದ ಕುಮಾರ ಪ್ರಕಟಣೆಯಲ್ಲಿ ಶ್ಲಾಘಿಸಿದ್ದಾರೆ.

Leave a Reply

ಹೊಸ ಪೋಸ್ಟ್‌