ಜೆಸಿಬಿ ಕಳ್ಳರನ್ನು ಬಂಧಿಸಿದ ವಿಜಯಪುರ ಗ್ರಾಮೀಣ ಪೊಲೀಸರು

ವಿಜಯಪುರ: ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾ. ಪಂ. ಆವರಣದಿಂದ ಕಳುವ ಮಾಡಿದ್ದ ಕಳ್ಳರನ್ನು ವಿಜಯಪುರ ಗ್ರಾಮೀಣ ಪೊಲೀಸರು ಬಂಧಿಸಿದ್ದು, ಜೆಸಿಬಿ ವಶಪಡಿಸಿಕೊಂಡಿದ್ದಾರೆ.

ಜ. 12 ರಂದು ರಾ. 8 ರಿಂದ 12ರ ನಡುವಿನ ಅವಧಿಯಲ್ಲಿ ಕೆಎ-28/ಝೆಡ್-5907 ಸಂಖ್ಯೆ ಮತ್ತು ಸುಮಾರು ರೂ. 25 ಲಕ್ಷ ಮೌಲ್ಯದ ಜೆಸಿಬಿಯನ್ನು ಕಳವು ಮಾಡಲಾಗಿತ್ತು.  ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ಅವರು ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ಮತ್ತು ವಿಜಯಪುರ ಡಿವೈಎಸ್ಪಿ ಲಕ್ಷ್ಮಿನಾರಾಯಣ ಅವರ ಮಾರ್ಗದರ್ಶನದಲ್ಲಿ ವಿಜಯಪುರ ಗ್ರಾಮೀಣ ಸಿಪಿಐ ಸಂಗಮೇಶ ಪಾಲಭಾವಿ, ಪಿ ಎಸ್ ಐ ಆರ್. ಎ. ದಿನ್ನಿ, ಸಿಬ್ಬಂದಿಯಾದ ಎಂ. ಎನ್. ಮುಜಾವರ, ಐ. ವೈ. ದಳವಾಯಿ, ಪ್ರಭು ಠಾಣೆದ, ಎ. ಎಸ್. ಬಿರಾದಾರ, ಗುರು ಹಡಪದ, ಎ. ಎ. ಪಟ್ಟಣಶೆಟ್ಟಿ, ಆರ್. ಎಂ. ಖಾನಾಪುರ ಅವರ ವಿಶೇಷ ತನಿಖಾ ತಂಡ ಆರೋಪಿಗಳನ್ನು ಬಂಧಿಸಿದೆ.

ಈ ಪೊಲೀಸರ ತಂಡ ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದಲ್ಲಿ ಜೆಸಿಬಿಯನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದ್ದು, ಓತಿಹಾಳ ಗ್ರಾಮದ ಆರೋಪಿಗಳಾದ ವಿಜಯಕುಮಾರ ಅಣ್ಣಪ್ಪಗೌಡ ಬಿರಾದಾರ(26) ಮತ್ತು ಭೀಮನಗೌಡ ಉರ್ಫ ಸುನೀಲ ತಂದೆ ರಾಜಶೇಖರ ಜುಮನಾಳ(34) ಅವರನ್ನು ಬಂಧಿಸಿದೆ,  ಅಲ್ಲದೇ, ಈ ಕೃತ್ಯಕ್ಕೆ ಬಳಸಿದ ರೂ. 50000 ಮೌಲ್ಯದ ಬೈಕ್, ಹಾಗೂ ರೂ. 25 ಲಕ್ಷ ಮೌಲ್ಯದ ಜೆಸಿಬಿ ಸೇರಿ ಒಟ್ಟು ರೂ. 25.50 ಲಕ್ಷದ ವಸ್ತುಗಳನ್ನು ವಶಪಡಿಸಿಕೊಂಡಿದೆ.  ಈ ಕಾರ್ಯಾಚರಣೆಯಲ್ಲಿ ಪಾಲ್ಗೋಂಡ ಸಿಬ್ಬಂದಿಗೆ ನಗದು ಬಹುಮಾನ ಘೋಷಿಸಲಾಗಿದೆ ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌