ವಿಜಯಪುರ ಜಿಲ್ಲೆಯಲ್ಲಿ ಒಂದೇ ದಿನ 305 ಜನರಲ್ಲಿ ಕೊರೊನಾ ಸೋಂಕು ಪತ್ತೆ- ಸಕ್ರೀಯ ಪ್ರಕರಣಗಳ ಸಂಖ್ಯೆ 1343ಕ್ಕೆ ಏರಿಕೆ

ವಿಜಯಪುರ: ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಒಂದೇ ದಿನ 300ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.  ಶುಕ್ರವಾರ(474)ಕ್ಕೆ ಹೋಲಿಸಿದರೆ ಈಗ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದರೂ ಜನರಲ್ಲಿ ಆತಂಕ ಮನೆ ಮಾಡಿದೆ.

ಈಗ ಒಂದೇ ದಿನ 305 ಜನರಲ್ಲಿ ಸೋಂಕು ಪತ್ತೆಯಾಗಿದೆ.

ವಿಜಯಪುರ ನಗರವೊಂದರಲ್ಲಿಯೇ 98 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವಿಜಯಪುರ ಗ್ರಾಮೀಣ ಭಾಗದಲ್ಲಿ 16, ಬಬಲೇಶ್ವರ ತಾಲೂಕಿನಲ್ಲಿ 7, ತಿಕೋಟಾ ತಾಲೂಕಿನಲ್ಲಿ 5, ಬಸವನ ಬಾಗೇವಾಡಿ ತಾಲೂಕಿನಲ್ಲಿ 29, ಕೊಲ್ಹಾರ ತಾಲೂಕಿನಲ್ಲಿ 12, ನಿಡಗುಂದಿ ತಾಲೂಕಿನಲ್ಲಿ 8, ಇಂಡಿ ತಾಲೂಕಿನಲ್ಲಿ 43, ಚಡಚಣ ತಾಲೂಕಿನಲ್ಲಿ 20, ಮುದ್ದೇಬಿಹಾಳ ತಾಲೂಕಿನಲ್ಲಿ 6, ಸಿಂದಗಿ ತಾಲೂಕಿನಲ್ಲಿ 55, ದೇವರ ಹಿಪ್ಪರಗಿ ತಾಲೂಕಿನಲ್ಲಿ 5 ಮತ್ತು ಇಬ್ಬರು ಬೇರೆ ಜಿಲ್ಲೆಯ ಒಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಈಗ ಜಿಲ್ಲೆಯಲ್ಲಿ ಕೊರೊನಾ ಸಕ್ರೀಯ ಪ್ರಕರಣಗಳ ಸಂಖ್ಯೆ 1343ಕ್ಕೆ ಏರಿಕೆಯಾಗಿದೆ.   ಇದು ಈಗಷ್ಟೇ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಜನಜೀವನಕ್ಕೆ ಆತಂಕ ಮೂಡಿಸಿದೆ. ವಿದ್ಯಾರ್ಥಿಗಳಲ್ಲಿಯೂ ಕೊರೊನಾ ಸೋಂಕು ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ.

Leave a Reply

ಹೊಸ ಪೋಸ್ಟ್‌