ಪಂಚಮಸಾಲಿ ಮೂರನೇ ಪೀಠ ಸ್ಥಾಪನೆಯಲ್ಲಿ ಸಚಿವರ ಕುಮ್ಮಕ್ಕಿಲ್ಲ- ಯಾರೂ ಅವರ ನಿರಾಣಿ ಅವರ ಮನಸ್ಸು ನೋಯಿಸಬಾರದು- ಮನಗೂಳಿ ಅಭಿನವ ಸಂಗನಬಸವ ಸ್ವಾಮೀಜಿ
ವಿಜಯಪುರ: ಪಂಚಮಸಾಲಿ ಮೂರನೇ ಪೀಠ ಸ್ಥಾಪನೆಯಲ್ಲಿ ಸಚಿವ ಮುರುಗೇಶ ನಿರಾಣಿ ಕುಮ್ಮಕ್ಕಿಲ್ಲ. ಯಾರೂ ಅವರ ಹೆಸರು ಹೇಳುವ ಮೂಲಕ ಸಚಿವರ ಮನಸ್ಸನ್ನು ನೋಯಿಸಬಾರದು ಎಂದು ವಿಜಯಪುರ ಜಿಲ್ಲೆಯ ಮನಗೂಳಿ ಹಿರೇಮಠದ ಶ್ರೀ ಸಂಗನಬಸವ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಮೂರನೇ ಪೀಠದ ಸ್ವಾಮೀಜಿಗಳ ಪೀಠಾರೋಣ ಕಾರ್ಯಕರ್ಮ ಫೆ. 14 ರಂದು ಬ್ರಾಹ್ಮಿ ಮುಹೂರ್ತದಲ್ಲಿ ನಡೆಯಲಿದೆ ಹರಿಹರ ಪೀಠ, ಕನಕ ಪೀಠ, ವಾಲ್ಮಿಕಿ, ಮಾದಾರ ಚನ್ನಯ್ಯ ಪೀಠ, ಭೋವಿ ಪೀಠ, ರೆಡ್ಡಿ ಪೀಠದ ಪೂಜ್ಯರು […]
ವಿಜಯಪುರ ಜಿಲ್ಲೆಯಲ್ಲಿ ಮತ್ತೆ ತ್ರಿಶತಕ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
ವಿಜಯಪುರ: ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಮತ್ತೆ 300ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಶನಿವಾರ(305) ಹೋಲಿಸಿದರೆ ಈಗ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಈಗ ಒಂದೇ ದಿನ 321 ಜನರಲ್ಲಿ ಸೋಂಕು ಪತ್ತೆಯಾಗಿದೆ. ವಿಜಯಪುರ ನಗರವೊಂದರಲ್ಲಿಯೇ 129 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವಿಜಯಪುರ ಗ್ರಾಮೀಣ ಭಾಗದಲ್ಲಿ 27, ಬಬಲೇಶ್ವರ ತಾಲೂಕಿನಲ್ಲಿ 8, ತಿಕೋಟಾ ತಾಲೂಕಿನಲ್ಲಿ 13, ಬಸವನ ಬಾಗೇವಾಡಿ ತಾಲೂಕಿನಲ್ಲಿ 17, ಕೊಲ್ಹಾರ ತಾಲೂಕಿನಲ್ಲಿ 16, ನಿಡಗುಂದಿ ತಾಲೂಕಿನಲ್ಲಿ 4, ಇಂಡಿ ತಾಲೂಕಿನಲ್ಲಿ […]
ವಿಧಾನ ಸೌಧದ ಮುಂಭಾಗಕ್ಕೆ ನೇತಾಜಿ ಪ್ರತಿಮೆ ಸ್ಥಳಾಂತರ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ನೇತಾಜಿ ಸುಭಾಷಚಂದ್ರ ಬೋಸ್ ಅವರ ಪ್ರತಿಮೆಯನ್ನು ವಿಧಾನ ಸೌಧದ ಮುಂಭಾಗದ ಸೂಕ್ತ ಜಾಗಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುಭಾಷಚಂದ್ರ ಬೋಸ್ ಅವರ ಜನ್ಮ ದಿನಾಚಾರಣೆಯ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಯೊಂದಿಗೆ ಅವರು ಮಾತನಾಡಿದರು. ಸೂಕ್ತ ಸ್ಥಳದಲ್ಲಿ ನೇತಾಜಿ ಅವರ ಪ್ರತಿಮೆ ಇರುವುದು ಅವರಿಗೆ ನಾವು ಸಲ್ಲಿಸಬೇಕಾದ ಗೌರವವಾಗಿದೆ. ಈ ಬಗ್ಗೆ ಕೂಡಲೇ ತೀರ್ಮಾನವನ್ನು ಕೈಗೊಳ್ಳಲಾಗುವುದು.ನೇತಾಜಿ ಅವರ ಮುಂದಿನ ಜನ್ಮ ದಿನಾಚರಣೆಯನ್ನು […]