ವಿಜಯಪುರ: ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಮತ್ತೆ 300ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಶನಿವಾರ(305) ಹೋಲಿಸಿದರೆ ಈಗ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.
ಈಗ ಒಂದೇ ದಿನ 321 ಜನರಲ್ಲಿ ಸೋಂಕು ಪತ್ತೆಯಾಗಿದೆ.
ವಿಜಯಪುರ ನಗರವೊಂದರಲ್ಲಿಯೇ 129 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವಿಜಯಪುರ ಗ್ರಾಮೀಣ ಭಾಗದಲ್ಲಿ 27, ಬಬಲೇಶ್ವರ ತಾಲೂಕಿನಲ್ಲಿ 8, ತಿಕೋಟಾ ತಾಲೂಕಿನಲ್ಲಿ 13, ಬಸವನ ಬಾಗೇವಾಡಿ ತಾಲೂಕಿನಲ್ಲಿ 17, ಕೊಲ್ಹಾರ ತಾಲೂಕಿನಲ್ಲಿ 16, ನಿಡಗುಂದಿ ತಾಲೂಕಿನಲ್ಲಿ 4, ಇಂಡಿ ತಾಲೂಕಿನಲ್ಲಿ 13, ಚಡಚಣ ತಾಲೂಕಿನಲ್ಲಿ 4, ಮುದ್ದೇಬಿಹಾಳ ತಾಲೂಕಿನಲ್ಲಿ 66, ತಾಳಿಕೋಟೆ ತಾಲೂಕಿನಲ್ಲಿ 2, ಸಿಂದಗಿ ತಾಲೂಕಿನಲ್ಲಿ 18, ದೇವರ ಹಿಪ್ಪರಗಿ ತಾಲೂಕಿನಲ್ಲಿ 2 ಮತ್ತು ಇಬ್ಬರು ಬೇರೆ ಜಿಲ್ಲೆಯ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಸತತ ಮೂರನೇ ದಿನ 300ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿರುವುದು ಬಸವ ನಾಡಿನ ಜನರಲ್ಲಿ ಆತಂಕ ಮೂಡಿಸಿದೆ.