ಜಿಲ್ಲಾ ಉಸ್ತುವಾರಿ ಸಚಿವರ ನೇಮಕ- ವಿಜಯಪುರ ಜಿಲ್ಲಾ ಉಸ್ತುವಾರಿ ಯಾರು ಗೊತ್ತಾ?

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತೂ ಇಂತೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದಾರೆ.

ಈವರೆಗೆ ಕೊರೊನಾ ಮತ್ತು ಪ್ರವಾಹ ನಿರ್ವಹಣೆಗಾಗಿ ಮಾತ್ರ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡಲಾಗಿತ್ತು.  ಈಗ ಗಣರಾಜ್ಯೋತ್ಸವ ಸಮೀಪಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಗಳ ಉಸ್ತುವಾರಿಯನ್ನು ಹಂಚಿಕೆ ಮಾಡಲಾಗಿದೆ.  ಅಲ್ಲದೇ, ಅವರಿಗೆ ಕೊರೊನಾ ನಿರ್ವಹಣೆ ಜವಾಬ್ದಾರಿಯನ್ನೂ ನೀಡಲಾಗಿದೆ.   ಯಾರಿಗೆ ಯಾವ ಜಿಲ್ಲೆ ಉಸ್ತುವಾರಿ ನೀಡಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

 

ಬಸವರಾಜ ಬೊಮ್ಮಾಯಿ- ಬೆಂಗಳೂರು ನಗರ

ಗೋವಿಂದ ಕಾರಜೋಳ- ಬೆಳಗಾವಿ

ಕೆ. ಎಸ್. ಈಶ್ವರಪ್ಪ- ಚಿಕ್ಕಮಗಳೂರು

ಬಿ. ಶ್ರೀರಾಮುಲು- ಬಳ್ಳಾರಿ,

ವಿ. ಸೋಮಣ್ಣ- ಚಾಮರಾಜನಗರ

ಉಮೇಶ ವಿ. ಕತ್ತಿ- ವಿಜಯಪುರ

ಎಸ್. ಅಂಗಾರ- ಉಡುಪಿ

ಅರಗ ಜ್ಞಾನೇಂದ್ರ ತುಮಕೂರು

ಡಾ. ಸಿ. ಎನ್. ಅಶ್ವತ್ಥನಾರಾಯಣ- ರಾಮನಗರ

ಸಿ. ಸಿ. ಪಾಟೀಲ- ಬಾಗಲಕೋಟೆ

ಆನಂದಸಿಂಗ್- ಕೊಪ್ಪಳ

ಕೋಟಾ ಶ್ರೀನಿವಾಸ ಪೂಜಾರಿ- ಉತ್ತರ ಕನ್ನಡ

ಪ್ರಭು ಚವ್ಹಾಣ- ಯಾದಗಿರಿ

ಮುರುಗೇಶ ರುದ್ರಪ್ಪ ನಿರಾಣಿ- ಕಲಬುರಗಿ

ಅರೇಬೈಲ್ ಶಿವರಾಮ ಹೆಬ್ಬಾರ- ಹಾವೇರಿ

ಎಸ್. ಟಿ. ಸೋಮಶೇಖರ- ಮೈಸೂರು

ಬಿ. ಸಿ. ಪಾಟೀಲ- ಚಿತ್ರದುರ್ಗ ಮತ್ತು ಗದಗ

ಭೈರತಿ ಬಸವರಾಜ- ದಾವಣಗೆರೆ

ಡಾ. ಕೆ. ಸುಧಾಕರ- ಬೆಂಗಳೂರು ಗ್ರಾಮಾಂತರ

ಕೆ. ಗೋಪಾಲಯ್ಯ- ಹಾಸನ ಮತ್ತು ಮಂಡ್ಯ

ಶಶಿಕಲಾ ಜೊಲ್ಲೆ- ವಿಜಯನಗರ

ಎಂ. ಟಿ. ಬಿ. ನಾಗರಾಜ- ಚಿಕ್ಕಬಳ್ಳಾಪುರ

ಕೆ. ಸಿ. ನಾರಾಯಣಗೌಡ- ಶಿವಮೊಗ್ಗ

ಬಿ. ಸಿ. ನಾಗೇಶ- ಕೊಡಗು

ವಿ. ಸುನೀಲ ಕುಮಾರ- ದಕ್ಷಿಣ ಕನ್ನಡ

ಆಚಾರ ಹಾಲಪ್ಪ ಬಸಪ್ಪ- ಧಾರವಾಡ

ಶಂಕರ ಬಿ. ಮುನೇನಕೊಪ್ಪ- ರಾಯಚೂರು ಮತ್ತು ಬೀದರ

ಮುನಿರತ್ನ- ಕೋಲಾರ.

 

ಸಚಿವರಾದ ಆರ್. ಅಶೋಕ ಮತ್ತು ಜೆ. ಸಿ. ಮಾಧುಸ್ವಾಮಿ ಅವರಿಗೆ ಯಾವ ಜಿಲ್ಲೆಯ ಉಸ್ತುವಾರಿಯನ್ನೂ ವಹಿಸಲಾಗಿಲ್ಲ.  ಆದರೆ, ಸಚಿವರಾದ ಬಿ. ಸಿ. ಪಾಟೀಲ, ಕೆ. ಗೋಪಾಲಯ್ಯ ಮತ್ತು ಶಂಕರ ಬಿ. ಮುನೇನಕೊಪ್ಪ ಅವರಿಗೆ ಎರಡು ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದೆ.  ಯಾವ ಸಚಿವರಿಗೂ ಅವರ ತವರು ಜಿಲ್ಲೆಯ ಉಸ್ತುವಾರಿಯನ್ನು ನೀಡದಿರುವುದು ಇಲ್ಲಿ ಗಮನಾರ್ಹವಾಗಿದೆ.  ಆದರೆ, ಸಚಿವ ಬಿ. ಶ್ರೀರಾಮುಲು ಚಿತ್ರದುರ್ಗ ಜಿಲ್ಲೆಯಿಂದ ಶಾಸಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತಾಂತ್ರಿಕ ಅಂಶವನ್ನು ಪರಿಗಣಿಸಿ ಅವರಿಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ.

Leave a Reply

ಹೊಸ ಪೋಸ್ಟ್‌