ಬಸವ ನಾಡಿನಲ್ಲಿ ಮತ್ತೆ ಶತಕ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ- ಸಕ್ರೀಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಳ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಶತಕ ದಾಟಿದೆ.  ಈಗ ಒಂದೇ ದಿನ 141 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. 

ಶನಿವಾರ- 305, ರವಿವಾರ- 321 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು.  ಈಗ ಒಂದೇ ದಿನ 141 ಜನರಲ್ಲಿ ಸೋಂಕು ಪತ್ತೆಯಾಗಿದೆ.

ವಿಜಯಪುರ ನಗರವೊಂದರಲ್ಲಿಯೇ 46 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವಿಜಯಪುರ ಗ್ರಾಮೀಣ ಭಾಗದಲ್ಲಿ 18, ಬಬಲೇಶ್ವರ ತಾಲೂಕಿನಲ್ಲಿ 0, ತಿಕೋಟಾ ತಾಲೂಕಿನಲ್ಲಿ 4, ಬಸವನ ಬಾಗೇವಾಡಿ ತಾಲೂಕಿನಲ್ಲಿ 5, ಕೊಲ್ಹಾರ ತಾಲೂಕಿನಲ್ಲಿ 18, ನಿಡಗುಂದಿ ತಾಲೂಕಿನಲ್ಲಿ 2, ಇಂಡಿ ತಾಲೂಕಿನಲ್ಲಿ 7, ಚಡಚಣ ತಾಲೂಕಿನಲ್ಲಿ 4, ಮುದ್ದೇಬಿಹಾಳ ತಾಲೂಕಿನಲ್ಲಿ 25, ತಾಳಿಕೋಟೆ ತಾಲೂಕಿನಲ್ಲಿ 0, ಸಿಂದಗಿ ತಾಲೂಕಿನಲ್ಲಿ 12 ಮತ್ತು ದೇವರ ಹಿಪ್ಪರಗಿ ತಾಲೂಕಿನಲ್ಲಿ ಒಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಈಗ ಕೊರೊನಾ ಸೋಂಕಿತ ಸಕ್ರಿಯ ಪ್ರಕರಣಗಳ ಸಂಖ್ಯೆ 1569ಕ್ಕೆ ಹೆಚ್ಚಳವಾಗಿದೆ.

 

Leave a Reply

ಹೊಸ ಪೋಸ್ಟ್‌