ಸತತವಾಗಿ 61 ಗಂಟೆ ಹಗಲು ರಾತ್ರಿ ಟ್ರ್ಯಾಕ್ಟರ್ ಚಲಾಯಿಸಿ ಭೂತಾಯಿ ಮಡಿಲಲ್ಲಿ ವಿನೂತನ ಸಾಧನೆ ಮಾಡಿದ ಮಣ್ಣಿನ ಮಗ

ವಿಜಯಪುರ: ರೈತರೆಂದರೆ ಅವರೇ ಬೇರೆ ಅವರ ಶ್ರಮವೇ ಬೇರೆ.  ಭೂತಾಯಿಯ ಸೇವೆ ಎಂದರೆ ಅವರಿಗೆ ಎಂದೂ ದಣಿವಾಗುವುದಿಲ್ಲ.  ಆಯಾಸ ಎನಿಸುವುದಿಲ್ಲ.  ತಾಯಿಯ ಮಡಿನಲ್ಲಿರುವಷ್ಟೇ ಸಂತಸ ಅವರಿಗೆ ಸಿಗುತ್ತದೆ. 

ಅದರಲ್ಲೂ ತಮ್ಮ ದಿನ ನಿದ್ಯದ ಕೆಲಸಗಳಿಂದಲೇ ಉತ್ತರ ಕರ್ನಾಟಕ ಅನ್ನದಾತರು ಸದಾ ಒಂದಿಲ್ಲೋಂದು ಸಾಧನೆ ಮಾಡುತ್ತಿರುತ್ತಾರೆ.  ತಾವು ಮಾಡುವ ಕೆಲಸ ಸಾಧನೆ ಅಥವಾ ಹೊಸ ಮೈಲುಗಲ್ಲು ಎಂದು ಪರಿಗಣಿಸಲಾಗುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಅವರಾರೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ.  ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡು ಕಾಯಕದಲ್ಲಿ ನಿರತರಾಗಿರುತ್ತಾರೆ.

ಇಂಧದ್ದೆ ಒಂದು ಅಪರೂಪದ ಮತ್ತು ದಣಿವರಿಯದ ಸಾಧನೆಯನ್ನು ಬಸವ ನಾಡು ವಿಜಯಪುರ ಜಿಲ್ಲೆಯ ಯುವ ರೈತನೊಬ್ಬ ಮಾಡಿ ಈಗ ಗಮನ ಸೆಳೆದಿದ್ದಾನೆ.  ಸತತವಾಗಿ 61 ಗಂಟೆಗಳ ಕಾಲ ಟ್ರ್ಯಾಕ್ಟರ್ ಚಲಾಯಿಸಿ ಹೊಲದಲ್ಲಿ ರೆಂಟೆ ಹೊಡೆಯುವ ಮೂಲಕ ಈ ರೈತ ಭೇಷ್ ಎನಿಸಿಕೊಂಡಿದ್ದಾನೆ.  ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದ ರೈತ ಹೊಳೆಬಸಪ್ಪ ಮುನಹಳ್ಳಿ ಎಂಬಾತ ಈ ಸಾಧನೆ ಮಾಡಿದ ಯುವಕ.

ಜನೇವರಿ 24 ರ ಬೆಳಿಗ್ಗೆ 6 ಗಂಟೆಯಿಂದ ಬುಧವಾರ ಸಂಜೆ 7.30 ರ ವರೆಗೂ ಟ್ರ್ಯಾಕ್ಟರ್ ನಿಂದ ಕೆಳಗಿಳಿಯದೇ ಸತತವಾಗಿ ಚಾಲನೆ ಮಾಡಿದ್ದಾನೆ.  ನಿರಂತರ 61 ಗಂಟೆಗಳ ಟ್ರ್ಯಾಕ್ಟರ್ ನಿಲ್ಲಿಸದೇ ಚಾಲನೆ ಮಾಡಿ ಭಲೆ ಹೊಳೆಬಸಪ್ಪ ಮುನಹಳ್ಳಿ ಎನಿಸಿಕೊಂಡಿದ್ದಾನೆ.  ಯುವಕನ ಈ ಸಾಧನೆ ಗ್ರಾಮಸ್ಥರ ಗಮನ ಸೆಳೆದಿದೆ.  ಅಷ್ಟೇ ಅಲ್ಲ, ಮೆಚ್ಚುಗೆ ಪಡೆದಿದೆ.  ಹೀಗಾಗಿ ಹಲಗೆ ಬಾರಿಸುತ್ತ ಯುವಕನನ್ನು ಹೊಲದಿಂದ ಗ್ರಾಮದ ವರೆಗೆ ಮತ್ತು ಹಳ್ಳಿಯಲ್ಲಿ ಮೆರವಣಿಗೆಯಲ್ಲಿ ಕರೆದುಕೊಂಡು ಬಂದಿದ್ದಾರೆ.  ಸಾದನೆಗೈದ ಯುವನ ಹೊಳೆಬಸಪ್ಪನನ್ನು ಮುನಹಳ್ಳಿ ಗ್ರಾಮದಲ್ಲಿ ಮೆರವಣಿಗೆ ಮಾಡಿ ಖುಷಿ ಪಟ್ಟಿದ್ದಾರೆ.

ಈ ಸಾಧನೆ ಮಾಡುವ ಯುವ ರೈತ ಹೊಳೆಬಸಪ್ಪ ಮುನಹಳ್ಳಿ ಹಸಿವಾದಾಗ ತಿಂಡಿ ಮತ್ತು ಊಟವನ್ನು ಟ್ರ್ಯಾಕ್ಟರ್ ನಲ್ಲಿಯೇ ಕುಳಿತುಕೊಂಡು ಮಾಡಿದ್ದಾನೆ.  ಒಂದು ಕ್ಷಣವೂ ಟ್ರ್ಯಾಕ್ಟರ್ ನಿಂದ ಕೆಳಗೆ ಇಳಿದಿಲ್ಲ.  ತನದೆ ಇನ್ನೂ ಟ್ರ್ಯಾಕ್ಟರ್ ಓಡಿಸಬೇಕೆಂಬ ಆಸೆಯಿತ್ತು.  ಆದರೆ, ತನ್ನ ಚಿಕ್ಕಪ್ಪ ಮತ್ತು ಗ್ರಾಮಸ್ಥರು ಸಾಕು ಬಿಡು ಎಂದು ತಿಳಿ ಹೇಳಿದಾಗ 61 ಗಂಟೆಗಳ ನಂತರ ಟ್ರ್ಯಾಕ್ಟರ್ ನಿಂದ ಕೆಳಗಿಳಿದು ಸಾಧನೆಯನ್ನು ಮುಗಿಸಿದ್ದಾನೆ.

 

ಈತ ಈ ಸಾಧನೆ ಮಾಡಿದ ನಂತರ ಗ್ರಾಮಸ್ಥರು ಹಲಗೆ ಬಾರಿಸುತ್ತ ಗ್ರಾಮದ ವರೆಗೆ ಕರೆ ತಂದಿದ್ದಾನೆ.  ನಂತರ ಆತನಿಗೆ ಗುಲಾಲು ಹಚ್ಚಿ ಸಂಭ್ರಮಾಚರಣೆ ಮಾಡಿದ್ದಾರೆ.  ಹೊಸ ಬಟ್ಟೆ ತೊಡಿಸಿ ಅಂದರೆ ಆಯೇರಿ ಮಾಡಿ ಸಂಭ್ರಮಿಸಿದ್ದಾರೆ.  ಈ ವಿಷಯ ತಿಳಿದ ರೈತರು ಹೊಳೆಬಸಪ್ಪ ಮುನಹಳ್ಳಿ ಸಾಧನೆಯನ್ನು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಯುವ ರೈತ ಹೊಳೆಬಸಪ್ಪ ಮುನಹಳ್ಳಿ ಸ್ನೇಹಿತರು, ಇಂಥ ರೈತರ ಸಾಧನೆಗಳನ್ನು ಸರಕಾರಗಳು ಗುರುತಿಸಿ ಪ್ರೋತ್ಸಾಹಿಸಬೇಕು.  ಅಲ್ಲದೇ, ಸೂಕ್ತ ಬಹುಮಾನ ನೀಡಿ ಗೌರವಿಸುವುದರಿಂದ ಯುವಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಯತ್ತ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

Leave a Reply

ಹೊಸ ಪೋಸ್ಟ್‌