ವಿಜಯಪುರ: ವಿಜಯಪುರ ಜಿಲ್ಲೆಯ ಐ ಆರ್ ಬಿ ಕಮಾಂಡೆಂಟ್ ಎಸ್. ಡಿ ಪಾಟೀಲ ಅವರ ಕಾರ್ಯವೈಖರಿ ಮತ್ತು ಸೇವಾ ನಿಷ್ಠೆ ಇತರರಿಗೂ ಮಾದರಿಯಾಗಿದೆ ಎಂದು ಕೆ ಎಸ್ ಆರ್ ಪಿ ಎಡಿಜಿಪಿ ಅಲೋಕಕುಮಾರ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಅರಕೇರಿ ಬಳಿ ಇರುವ ಭಾರತೀಯ ಮೀಸಲು ಪಡೆ ಕಚೇರಿಗೆ ಭೇಟಿ ನೀಡಿದ ಅವರು, ಜ. 31 ರಂದು ನಿವೃತ್ತರಾಗಲಿರುವ ವಿಜಯಪುರ ಐ ಆರ್ ಬಿ ಕಮಾಂಡೆಂಟ್ ಎಸ್. ಡಿ. ಪಾಟೀಲ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಅಲ್ಲದೇ, ಎಸ್. ಡಿ. ಪಾಟೀಲ ಅವರ ಸೇವೆಯನ್ನು ಶ್ಲಾಘಿಸಿದರು.
ಕಮಾಂಡೆಂಟ್ ಅವರು ಸದಾ ಹಸನ್ಮುಖಿ, ಮೃದು ಸ್ವಭಾವ ಮತ್ತು ಸೇವಾ ನಿಷ್ಠೆಯನ್ನು ಹೊಂದಿದ್ದಾರೆ ಎಂದು ಮುಕ್ತ ಕಂಠದಿಂದ ಕೊಂಡಾಡಿದ ಅಲೋಕಕುಮಾರ, ದು ಇತರ ಅಧಿಕಾರಿಗಳಿಗೂ ಮಾದರಿಯಾಗಬೇಕು. ಅಲ್ಲದೇ, ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.
ಬೆಂಗಳೂರಿನ ಕೆ ಎಸ್ ಆರ್ ಪಿ ಐಜಿಪಿ ಎಸ್. ರವಿ ಮಾತನಾಡಿ, ಐ ಆರ್ ಬಿ ಕಮಾಂಡೆಂಟ್ ಎಸ್. ಡಿಯ ಪಾಟೀಲ ಅವರ ಕಾರ್ಯ ಆಸಕ್ತಿ, ನಿಷ್ಠೆ, ಶಿಸ್ತು ಎಲ್ಲರೂ ಮೈಗೂಡಿಸಿಕೊಳ್ಳಬೇಕ ಎಂದು ಕರೆ ನೀಡಿದರು. ಅಲ್ಲದೇ, ಎಸ್. ಡಿ. ಪಾಟೀಲ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ವಿಜಯಪುರ ಎಸ್ಪಿ ಎಚ್. ಡಿ. ಆನಂದಕುಮಾರ, ಕಮಾಂಡೆಂಟ್‍ಗಳಾದ ರಾಮಕೃಷ್ಣ ಪ್ರಸಾದ, ಬಸವರಾಜ ಜಿಳ್ಳೆ, ಆರ್.ಜನಾರ್ಧನ, ಬಿ.ಎಂ ಪ್ರಸಾದ, ಡಾ,ರಾಮಕೃಷ್ಣ ಮುದ್ದೆಪಾಲ, ರಮೇಶ ಬೋರಗಾಂವಿ, ಹಮ್ಜಾಹುಸೇನ, ಕೆ. ಎಂ. ಮಹಾದೇವ ಪ್ರಸಾದ, ಟಿ. ಸುಂದರರಾಜ್, ಬಿ.ಡಿ ಲೋಕೇಶ, ಎಸ್ ಯುವಕುಮಾರ, ಹಾಗೂ ವಿಜಯಪುರ ಅರಕೇರಿಯ ಐ.ಆರ್.ಬಿ ಕಮಾಂಡೆಂಟ್ ಎಸ್.ಡಿ ಪಾಟೀಲ, ಸಹಾಯಕ ಕಮಾಂಡೆಂಟ್ ಗುರುನಾಥ ಶರಣಬಸವ, ನಾಗೇಶ ಯಡಾಲ್, ಲಕ್ಷ್ಮಣ ನಾಯ್ಕ, ಇನ್ಸಪೆಕ್ಟರ್‍ಗಳಾದ ವಿಜಯ ಠಕ್ಕಣ್ಣವರ, ಮಹಾಂತೇಶ ಇಟ್ಟಿ, ಪ್ರಸನ್ ಲಬ್ಬಾ, ಹುಸೇನ ಲಾಲಕೋಟಿ, ಕಲ್ಲನಗೌಡ ಪಾಟೀಲ ಹಾಗೂ ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.