ವಿಜಯಪುರ: ವಿಜಯಪುರ ಜಿಲ್ಲಾ ಅಬಕಾರಿ ವಿಚಕ್ಷಣೆ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಹೊರ ವಲಯದಲ್ಲಿ ಈ ಕಾರ್ಯಾಚರಣೆ ನಡೆದಿದೆ. ವಿಜಯಪುರದ ಆರೋಪಿ ಯಶವಂತ ಸಿದ್ದಪ್ಪ ಎಂಬ ಆರೋಪಿ ದ್ವಿಚಕ್ರ ವಾಹನದಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಮಾಹಿತಿ ಪಡೆದು ಧಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಆರೋಪಿ ಬಳಿಯಿದ್ದ 3 ಕೆಜಿ ಅಕ್ರಮವಾಗಿ ಸಾಗಿಸುತ್ತಿದ್ದ ಒಣಗಿದ ಗಾಂಜಾ, ದ್ವಿಚಕ್ರ ವಾಹನ ವಶಪಡಿಸಿಕೊಂಡು ಆರೋಪಿಯನ್ನು ಅಬಕಾರಿ ಇಲಾಖೆ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಮತ್ತು ದ್ವಿಚಕ್ರ ವಾಹನದ ಒಟ್ಟು ಮೌಲ್ಯ ರೂ. 1.10 ಲಕ್ಷ ಎಂದು ಅಂದಾಜು ಮಾಡಲಾಗಿದೆ. ಆರೋಪಿ ವಿರುದ್ಧ ಎನ್ ಡಿ ಪಿ ಎಸ್. ಕಾಯಿದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಳಗಾವಿ ಅಬಕಾರಿ ಅಪರ ಆಯುಕ್ತ ಡಾ. ವೈ. ಮಂಜುನಾಥ, ವಿಜಯಪುರ ಅಬಕಾರಿ ಉಪ ಆಯುಕ್ತೆ ಸೈಯೀದ ಅಜ್ಮತ್ ಆಪ್ರೀನ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಮಾರ್ಗದರ್ಶನದಲ್ಲಿ ಮತ್ತು ವಿಜಯಪುರ ಅಬಕಾರಿ ಇಲಾಖೆ ಡಿವೈಎಸ್ಪಿ ಎಚ್. ಎಸ್. ವಜ್ಜರಮಟ್ಟಿ, ಜಿಲ್ಲಾ ವಿಚಕ್ಷಣ ದಳದ ಸಿಪಿಐ ಮಹಾದೇವ ಪೂಜಾರಿ, ಪಿ. ಎಸ್. ಐ ಪ್ರಕಾಶ ಜಾಧವ, ಅಬಕಾರಿ ಪೇದೆಗಳಾದ ಈರಗೊಂಡ ಹಟ್ಟಿ, ಭೀಮಣ್ಣ ಕುಂಬಾರ ಹಾಗೂ ವಾಹನ ಚಾಲಕ ಪರಶುರಾಮ ತೆಲಗಿ ಪಾಲ್ಗೊಂಡಿದ್ದರು.