ಭಾರತೀಯ ಮೀಸಲು ಪೊಲೀಸ್ ಪಡೆಯ ಅಧಿಕಾರಿಗಳು, ಸಿಬ್ಬಂದಿ ದೈಹಿಕ ತೂಕ ಇಳಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು- ಎಡಿಜಿಪಿ ಅಲೋಕ ಕುಮಾರ

ವಿಜಯಪುರ: ಭಾರತೀಯ ಮೀಸಲು ಪೊಲೀಸ್ ಪಡೆ(ಐ ಆರ್ ಬಿ)ಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ದೈಹಿಕ ತೂಕ ಇಳಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಳ್ಳಬೇಕು ಎಂದು ಕೆ ಎಸ್ ಆರ್ ಪಿ ಯ ಎಡಿಜಿಪಿ ಅಲೋಕ ಕುಮಾರ ಕಿವಿಮಾತು ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಅರಕೇರಿ ಬಳಿ ಇರುವ ಭಾರತೀಯ ಮೀಸಲು ಪಡೆ ಕಚೇರಿಗೆ ಭೇಟಿ ನೀಡಿದ ಅವರು ಸೇವಾ ಕವಾಯತು ವಿಕ್ಷಿಸಿ ಅವರು ಮಾತನಾಡಿದ ಅವರು ಮುಂಬರುವ ಗೋವಾ ಮತ್ತು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸೇವೆಗೆ ಸರ್ವ ರೀತಿಯಲ್ಲೂ ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಹೆಚ್ಚು ತೂಕ ಹೊಂದಿರುವ ಮತ್ತು ಆಲ್ಕೋಹಾಲ ತೊರೆದ ಸಿಬ್ಬಂದಿಗಳ ಕುರಿತು ಮಾಹಿತಿ ಪಡೆದ ಅವರು, ಅಧಿಕಾರಿಗಳು ಮತ್ತು ಸಿಬ್ಬಂದಿಯ ಕುಂದು ಕೊರತೆ ಆಲಿಸಿದರು.  ಬಳಿಕ ಎಲ್ಲಾ ಕಮಾಂಡೆಂಟ್‍ ಗಳ ಜೊತೆ ಸೇರಿ ಐ ಆರ್ ಬಿಯ  ಬಸ್ಸಿನಲ್ಲಿ ಸಂಚರಿಸಿದರು.  ಅಲ್ಲದೇ, ಕಚೇರಿ ಆವರಣದಲ್ಲಿ ಸಸಿ ನೆಟ್ಟರು.  ಕಮಾಂಡೆಂಟ್ ಎಸ್. ಡಿ  ಪಾಟೀಲ ಅವರ ನೇತೃತ್ವದಲ್ಲಿ ಪಡೆಯ ಅಧಿಕಾರಿ ಸಿಬ್ಬಂದಿಗಳ ಶ್ರಮದಾನದಿಂದ ನಿರ್ಮಿಸಿದ ಪಡೆಯ ಕಚೇರಿ ಆವರಣದ ಗಾರ್ಡನ್, ಕ್ರೀಡಾ ಮೈದಾನ, ಮಕ್ಕಳ ಉದ್ಯಾನವನ, ಬೇಕರಿ, ಮಿಲ್ಕ ಪಾರ್ಲರ್‍ಗಳನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಕೆ ಎಸ್ ಆರ್ ಪಿ ಐಜಿಪಿ ಎಸ್. ರವಿ, ಕಮಾಂಡೆಂಟ್‍ ಗಳಾದ ರಾಮಕೃಷ್ಣ ಪ್ರಸಾದ, ಬಸವರಾಜ ಜಿಳ್ಳೆ, ಆರ್. ಜನಾರ್ಧನ, ಬಿ. ಎಂ. ಪ್ರಸಾದ, ಡಾ, ರಾಮಕೃಷ್ಣ ಮುದ್ದೆಪಾಲ, ರಮೇಶ ಬೋರಗಾಂವಿ, ಹಮ್ಜಾಹುಸೇನ, ಕೆ. ಎಂ. ಮಹಾದೇವ ಪ್ರಸಾದ, ಟಿ. ಸುಂದರರಾಜ, ಬಿ. ಡಿ. ಲೋಕೇಶ, ಎಸ್. ಯುವಕುಮಾರ ಹಾಗೂ ವಿಜಯಪುರ ಅರಕೇರಿಯ ಐ ಆರ್ ಬಿ ಕಮಾಂಡೆಂಟ್ ಎಸ್. ಡಿ. ಪಾಟೀಲ, ಸಹಾಯಕ ಕಮಾಂಡೆಂಟ್ ಗುರುನಾಥ ಶರಣಬಸವ, ನಾಗೇಶ ಯಡಾಲ, ಲಕ್ಷ್ಮಣ ನಾಯ್ಕ, ಇನ್ಸಪೆಕ್ಟರ್‍ಗಳಾದ ವಿಜಯ ಠಕ್ಕಣ್ಣವರ, ಮಹಾಂತೇಶ ಇಟ್ಟಿ, ಪ್ರಸನ್ ಲಬ್ಬಾ, ಹುಸೇನ ಲಾಲಕೋಟಿ, ಕಲ್ಲನಗೌಡ ಪಾಟೀಲ ಹಾಗೂ ಪಡೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌