ವಿಜಯಪುರ ಜಿಲ್ಲೆಯಲ್ಲಿ ಹೊಸದಾಗಿ ಕೊರೊನಾ ದೃಢಪಟ್ಟವರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚು- ಸಂಪೂರ್ಣ ಮಾಹಿತಿ ಇಲ್ಲಿದೆ

ವಿಜಯಜಯಪುರ: ಗುಮ್ಮಟ ನಗರಿ ಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಶತಕ ದಾಟಿದ್ದರೂ, ಬಿಡುಗಡೆಯಾದವರ ಸಂಖ್ಯೆ ಹೊಸದಾಗಿ ಸೋಂಕಿತರ ಸಂಖ್ಯೆಗಿಂತ ಹೆಚ್ಚಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಹೊಸದಾಗಿ 159 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 245 ಜನ ಸೋಂಕಿತರು ಗುಣಮುಖರಾಗಿ ಡಿಶ್ಚಾರ್ಜ್ ಆಗಿದ್ದಾರೆ.

ವಿಜಯಪುರ ನಗರವೊಂದರಲ್ಲಿಯೇ 65 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.  ವಿಜಯಪುರ ಗ್ರಾಮೀಣ ಭಾಗದಲ್ಲಿ 11, ಬಬಲೇಶ್ವರ ತಾಲೂಕಿನಲ್ಲಿ 5, ತಿಕೋಟಾ ತಾಲೂಕಿನಲ್ಲಿ 10, ಬಸವನ ಬಾಗೇವಾಡಿ ತಾಲೂಕಿನಲ್ಲಿ 2, ಕೊಲ್ಹಾರ ತಾಲೂಕಿನಲ್ಲಿ 9, ನಿಡಗುಂದಿ ತಾಲೂಕಿನಲ್ಲಿ 2, ಇಂಡಿ ತಾಲೂಕಿನಲ್ಲಿ 16, ಚಡಚಣ ತಾಲೂಕಿನಲ್ಲಿ 5, ಮುದ್ದೇಬಿಹಾಳ ತಾಲೂಕಿನಲ್ಲಿ 13, ತಾಳಿಕೋಟೆ ತಾಲೂಕಿನಲ್ಲಿ 7, ಸಿಂದಗಿ ತಾಲೂಕಿನಲ್ಲಿ 11 ಮತ್ತು ದೇವರ ಹಿಪ್ಪರಗಿ ತಾಲೂಕಿನಲ್ಲಿ 3 ಕೊರೊನಾ ಸೋಂಕು ದೃಢಪಟ್ಟಿದೆ.

ಈ ಮಧ್ಯೆ ಕೊರೊನಾ ಸೋಂಕಿತರಾಗಿದ್ದ 245 ಜನ ಗುಣಮುಖರಾಗಿದ್ದಾರೆ.

Leave a Reply

ಹೊಸ ಪೋಸ್ಟ್‌