ಗುಮ್ಮಟ ನಗರಿಯಲ್ಲಿ ಲಘು ಭೂಕಂಪ- ಇಂಗನಾಳ ಬಳಿ ಕೇಂದ್ರ ಬಿಂದು- 2.9 ತೀವ್ರತೆ ದಾಖಲು

ವಿಜಯಪುರ: ರವಿವಾರ ರಜೆ ಮೂಡನಲ್ಲಿದ್ದ ಗುಮ್ಮಟ ನಗರಿಯ ಜನತೆಗೆ ಭೂಮಿ ಕಂಪಿಸಿದ ಅನುಭವ ಆತಂಕ ಮೂಡಿಸಿದೆ.

ಬೆ. 9.15ರ ಸುಮಾರಿಗೆ ಭೂಮಿ ಕಂಪಿಸಿದ್ದು, ಶಬ್ದವೂ ಕೇಳಿ ಬಂದಿದೆ. ಇದು ವಿಜಯಪುರ ನಗರದ ಜನರಲ್ಲಿ ಆತಂಕ ಮೂಡಿಸಿದೆ.

ವಿಜಯಪುರ ನಗರದ ಆದರ್ಶ ನಗರ, ನೀಲಾ ನಗರ, ಐಶ್ವರ್ಯ ನಗರ, ಜಲನಗರ ಸೇರಿದಂತೆ ಬಹುತೇಕ ಕಡೆ ಭೂಮಿ ಕಂಪಿಸಿದ ಅನುಭವಾಗಿದೆ.

ರವಿವಾರ ವಾರದ ರಜೆಯ ಮೂಡ್ ನಲ್ಲಿದ್ದ ಜನರಿಗೆ ಇದು ಆತಂಕ ತಂದಿದೆ. ಈ ಸಂದರ್ಭದಲ್ಲಿ ಕೆಲವರಿಗೆ ಭೂಮಿ ಕಂಪಿಸಿದ ಅನುಭವ, ಇನ್ನೂ ಕೆಲವರಿಗೆ ಕೇವಲ ಶಬ್ದ ಕೇಳಿಸಿದ ಮತ್ತು ಹಲವರಿಗೆ ಭೂಮಿ ಕಂಪಿಸಿ ನೆಲದಿಂದ ಶಬ್ದವೂ ಕೇಳಿ ಬಂದಿದೆ. ಹೀಗಾಗಿ ಭೂಕಂಪದ ಅನುಭವವಾದ ಜನರು ತಂತಮ್ಮ ಮನೆಯ ಕುಟುಂಬಸ್ಥರಲ್ಲಿ, ಅಕ್ಲಪಕ್ಕದ ಮನೆಯವರಲ್ಲಿ ಈ ಬಗ್ಗೆ ಪರಸ್ಪರ ಅನುಭವ ಹಂಚಿಕೊಂಡಿದ್ದಾರೆ. ಮತ್ತೆ ಹಲವರು ಮೊಬೈಲ್ ಕರೆ ಮಾಡಿ ತಮಗೂ ಅನುಭವ ಆಗಿದೆಯಾ ಎಂಬುದನ್ನು ಖಚಿತ ಪಡಿಸಿಕೊಂಡಿದ್ದಾರೆ.

ಇಂಗನಾಳ ಬಳಿ ಕೇಂದ್ರ ಬಿಂದು

ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣೆ ಕೇಂದ್ರ ಈ ಭೂಕಂಪದ ಕೇಂದ್ರ ಬಿಂದು ಮತ್ತು ತೀವ್ರತೆಯನ್ನು ಖಚಿತ ಪಡಿಸಿದೆ.

ವಿಜಯಪುರ ಜಿಲ್ಲೆಯ ಬರಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇಂಗನಾಳ ಬಳಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಮಿಯ 5 ಕಿ. ಮೀ. ಆಳದಲ್ಲಿ ಈ ಭೂಕಂಪ ದೃಢಪಟ್ಟಿದ್ದು, 2.9 ತೀವ್ರತೆ ಹೊಂದಿದೆ ಎಂದು ಮಾಹಿತಿ ನೀಡಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌