ವಿಜಯಪುರ: ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ತಿಕೋಟಾ ಕೆರೆಗೆ ನೀರು ಬಿಡಿಸುವ ಮೂಲಕ ರೈತರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ.
ತಿಕೋಟಾ ಜಾಕವೆಲ್‍ಗೆ ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ತಿಕೋಟಾ ಕೆರೆಗೆ ನೀರು ಹರಿಸುವುದರಿಂದ ಕೆರೆಯ ಸಾಂಡ್ ಕೆಳಭಾಗದ ಸುಮಾರು 1100 ಮನೆಗಳಿಗೆ ನೀರು ನುಗ್ಗುತ್ತಿರುವುದರ ಕುರಿತು ಅಧಿಕಾರಿಗಳು ಈ ಸಂದರ್ದಭದಲ್ಲಿ ಸುನೀಲಗೌಡ ಪಾಟೀಲ ಅವರಿಗೆ ಮಾಹಿತಿ ನೀಡಿದರು.
ನಂತರ ಈ ಸಮಸ್ಯೆಗೆ ಸುನೀಲಗೌಡ ಪಾಟೀಲ ಅವರು ಬೇಸಿಗೆಯಲ್ಲಿ ತಿಕೋಟಾ ಜನತೆಗೆ ನೀರಿನ ತೊಂದರೆಯಾಗದಂತೆ, ಕೆರೆಯ ಸಾಂಡ್ ಭರ್ತಿಗೆ ಇನ್ನು ಒಂದು ಅಡಿ ಕಡಿಮೆ ಇರುವರೆಗೆ ಮಾತ್ರ ನೀರು ಹರಿಸುವಂತೆ ಮತ್ತು ಸಾಂಡ್ ಕೆಳಭಾಗದ ಮನೆಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ, ಜಾಕವೆಲ್ ಮೂಲಕ ನೀರು ಬಿಡುಗಡೆ ಮಾಡಿಸಿದರು. ಇದರಿಂದಾಗಿ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಈ ಸಂದರ್ಭದಲ್ಲಿ ವಿಜಯಪುರ ಜಿ. ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಜಿ. ಪಂ. ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಮುಖಂಡರಾದ ರಾಮು ದೇಸಾಯಿ, ಜಗದೀಶಗೌಡ ಪಾಟೀಲ, ಬಸಯ್ಯ ವಿಭೂತಿ, ಭೀಮಸೇನ ನಾಟಿಕಾರ, ಮಧುಕರ ಜಾಧವ ಟಕ್ಕಳಕಿ ಮುಂತಾದವರು ಉಪಸ್ಥಿತರಿದ್ದರು.