ಕೇಂದ್ರ ಬಜೆಟ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಜುಗೌಡ ಪಾಟೀಲ, ಜಿಲ್ಲಾ ನಾಯಕರು

ವಿಜಯಪುರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ ಮಂಡಿಸಿದ ಬಜೆಟ್ ನ್ನು ವಿಜಯಪುರ ಜಿಲ್ಲಾ ಬಿಜೆಪಿ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮುಖಂಡರು ಈ ಬಜೆಟ್ ಸರ್ವರ ಪರವಾಗಿದೆ ಎಂದು ಹೇಳಿದ್ದಾರೆ.

ರಮೇಶ ಜಿಗಜಿಮಗಿ, ವಿಜಯಪುರ ಸಂಸದ

ಈ ಬಜೆಟ್ ನಲ್ಲಿ ಕಲಿಕೆಗೆ ಒತ್ತು ನೀಡಲಾಗಿದೆ.  ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಗೆ ತೊಂದೆಯಾಗಬಾರದು ಎಂಬ ಹಿನ್ನೆಲೆಯಲ್ಲಿ ಒಂದು ತರಗತಿ ಒಂದು ಟಿವಿ ಚಾನೆಲ್ ಘೋಷಣೆಯಡಿ 200 ಟಿವಿ ವಾಹಿನಿಗಳಿಗೆ ಅವಕಾಶ ನೀಡಲಾಗಿದೆ.  ಸಮಕಾಲೀನ ಜಾಗತಿಕ ಅಗತ್ಯಗಳಿಗೆ ತಕ್ಕಂತೆ ಕೈಗೊಂಡಿರುವ ಕ್ರಮವಾಗಿದೆ ಇದಾಗಿದೆ.  ಮಕ್ಕಳಿಗೆ ಯಾವುದೇ ಅಡೆತಡೆಯಿಲ್ಲದೆ ವಿಶ್ವ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಇದು ಅನುಕೂಲ ಕಲ್ಪಿಸಲಿದೆ.  ಇದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳಿಗೆ ತಕ್ಕಂತಿದೆ.

ಅಪ್ಪು ಪಟ್ಟಣಶೆಟ್ಟಿ, ಮಾಜಿ ಸಚಿವ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2022-23ನೇ ವರ್ಷದ ಬಜೆಟ್ ಅತ್ಯುತ್ತಮವಾಗಿದ್ದು, ಡಿಜಿಟಲ್ ಕಲಿಕೆ, ಕೌಶಲ್ಯಗಳ ಪೂರೈಕೆ ಮತ್ತು ನವೋದ್ಯಮಗಳನ್ನು ಕೈ ಬಲಪಡಿಸುವುದಕ್ಕೆ ಒತ್ತು ನೀಡಿದೆ.

ವಿಜಯಕುಮಾರ ಪಾಟೀಲ, ಕರ್ನಾಟಕ ಸಾವಯವ ಬೀಜ ಮತ್ತು ಪ್ರಮಾಣನ ಸಂಸ್ಥೆಯ ಅಧ್ಯಕ್ಷ

ಕೇಂದ್ರ ಬಜೆಟ್ ಗ್ರಾಮೀಣ ಮತ್ತು ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿದೆ.  ಡಿಜಟಲೀಕರಣ ಮತ್ತು ಸ್ವಾವಲಂಬನೆಗೆ ಒತ್ತು ನೀಡಲಾಗಿದ್ದು, ವಿಶೇಷವಾಗಿ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗಿದೆ.  ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದೆ.

ಆರ್. ಎಸ್. ಪಾಟೀಲ ಕೂಚಬಾಳ, ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ

ಹೊಸ ದಶಕದಲ್ಲಿ ಹೊಸ ಯುಗ ಸೃಷ್ಟಿಸುವ ಬಜೆಟ್ ಇದಾಗಿದ್ದು, ಕೇಂದ್ರ ಸರಕಾರ ಕೋವಿಡ್ ನಂತರದ ಆರ್ತಿಕತೆಗೆ ಉತ್ತೇಜನ ನೀಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿರುವುದನ್ನು ಕೇಂದ್ರ ಬಜೆಟ್‍ನಲ್ಲಿ ಕಾಣಬಹುದಾಗಿದೆ.  ಅರ್ಥ ವ್ಯವಸ್ಥೆಯ ಪುನರುಜೀವನಕ್ಕೆ ಆಧಾರವಾಗಿದೆ.  ಕೃಷಿಗೆ ಹೆಚ್ಚಿನ ಒತ್ತು ನೀಡಿ ಬಜೆಟ್ ಮಂಡಿಸಿರುವುದು ಶ್ಲಾಘನೀಯ.

 

ಶಿವರುದ್ರ ಬಾಗಲಕೋಟ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಕೂಸು ಪಂಚ ನದಿ ಜೋಡಣೆ ಬಗ್ಗೆ ವಿಶೇಷ ಒತ್ತು ನೀಡಲಾಗಿದೆ.  ನದಿ ಜೋಡಣೆ ಬಗ್ಗೆ ವಿಶೇಷ ಒತ್ತು ಕೊಟ್ಟು ನೀಡಿ ರೂ. 40000 ಕೋ. ಅನುದಾನ ಒದಗಿಸಲಾಗಿದೆ.  ಆರ್ಥಿಕ ಉತ್ತೇಜನಕ್ಕಾಗಿ ಎಲ್ಲ ರಾಜ್ಯಗಳಿಗೆ ಐವತ್ತು ವರ್ಷಗಳವರೆಗೆ ರೂ. 1 ಲಕ್ಷ ಕೋ. ಬಡ್ಡಿ ರಹಿತ ಸಾಲ ಮುಂತಾದ ನಿರ್ಣಯಗಳು ಸಾಮಾನ್ಯ ಜನರ ಒಳಿತನ್ನುಂಟು ಮಾಡಲಿವೆ.  ಇದೊಂದು ಆತ್ಮ ನಿರ್ಭರ್ ಭಾರತದ ಬಜೆಟ್ ಆಗಿದೆ.  ಜನಸಾಮಾನ್ಯರಿಗೆ ಈ ಬಜೆಟ್ ನಿಂದ ಉಪಯೋಗವಾಗಲಿದೆ.  ಇದೊಂದು ಐತಿಹಾಸಿಕ ಬಜೆಟ್ ಆಗಿದೆ.

ವಿಜಯ ಜೋಶಿ, ವಿಜಯಪುರ ಮಾಧ್ಯಮ ಪ್ರಮುಖ

ಕೇಂದ್ರ ಬಜೆಟ್ ನಲ್ಲಿ ಪ್ರತಿ ಹಳ್ಳಿಗಳಗೆ ಅಪ್ಟಿಕಲ್ ಫೈಬರ್ ಒದಗಿಸುವುದು, ನಗರ ಪ್ರದೇಶದಲ್ಲಿ ವಿದ್ಯುತ್ ಚಾಲಿನ ವಾಹನಗಳಿಗೆ ಬ್ಯಾಟರಿ ಸ್ವಾಪಿಂಗ್ ಕೇಂದ್ರ ಸ್ಥಾಪನೆ ಉದ್ದೇಶಿಸಿರುವುದು ಸ್ವಾಗತಾರ್ಹ.  ಉತ್ತಮ ಮತ್ತು ಜನಪರ ಬಜೆಟ್ ಮಂಡಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

Leave a Reply

ಹೊಸ ಪೋಸ್ಟ್‌