ಸಿಎಂ ಭೇಟಿ ಮಾಡಿ ಬಜೆಟ್ ನಲ್ಲಿ ದ್ರಾಕ್ಷಿ ಮತ್ತು ವೈನ್ ಅಭಿವೃದ್ಧಿ ಮಂಡಳಿಗೆ ಅನುನಾದ ನೀಡುವಂತೆ ಮನವಿ ಮಾಡಿದ ಶಾಸಕ ಯತ್ನಾಳ ನೇತೃತ್ವದ ದ್ರಾಕ್ಷಿ ಬೆಳೆಗಾರ ನಿಯೋಗ

ಬೆಂಗಳೂರು: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ದ್ರಾಕ್ಷಿ ಬೆಳೆಗಾರರ ಸಂಘದ ನಿಯೋಗ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮುಂಬರುವ ರಾಜ್ಯ ಬಜೆಟ್ ನಲ್ಲಿ ದ್ರಾಕ್ಷಿ ಮತ್ತು ವೈನ್ ಅಭಿವೃದ್ಧಿ ಮಂಡಳಿಗೆ ಅನುದಾನ ನೀಡುವಂತೆ ಮನವಿ ಮಾಡಿತು.

ದ್ರಾಕ್ಷಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.  ಅಲ್ಲದೇ, ಸಂಘದ ರಾಜ್ಯಾಧ್ಯಕ್ಷ ಅಭಯಕುಮಾರ ನಾಂದ್ರೆಕರ ದ್ರಾಕ್ಷಿ ಬೆಳೆಗಾರರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಪೂರ್ಣ ಮಾಹಿತಿ ನೀಡಿದರು.  ಅಲ್ಲದೇ, ಯತ್ನಾಳ ನೇತೃತ್ವದಲ್ಲಿ ಮನವಿ ಪತ್ರವನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದರು.

 

ಈ ಮನವಿ ಪತ್ರದಲ್ಲಿ ದೇಶದಲ್ಲಿ ದ್ರಾಕ್ಷಿ ಬೆಳೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ವೈನ್ ಉತ್ಪಾದನೆಯಲ್ಲಿಯೂ ಎರಡನೇ ಸ್ಥಾನದಲ್ಲಿದೆ.  ಈ ಹಿನ್ನೆಲೆಯಲ್ಲಿ ದ್ರಾಕ್ಷಿ ಅಭಿವೃದ್ಧಿ ಮಂಡಳಿ ರಚಿಸಿರುವುದಕ್ಕೆ ಧನ್ಯವಾದಗಳು.  ರಾಜ್ಯದಲ್ಲಿ 34000 ಹೆಕ್ಟೇರ್ ಪ್ರದೇಶದಲ್ಲಿ 12.76 ಲಕ್ಷ ಟನ್ ದ್ರಾಕ್ಷಿ ಉತ್ಪಾದನೆಯಾಗುತ್ತಿದೆ.  ಇದರಲ್ಲಿ ಶೇ. 75 ರಷ್ಟು ದ್ರಾಕ್ಷಿ ಉತ್ತರ ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ.  ಈ ಭಾಗದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ದ್ರಾಕ್ಷಿಯಿಂದ ರೂ. 3000 ಕೋ.ಿ ವಹಿವಾಟು ನಡೆಯುತ್ತಿದ್ದು, ಲಕ್ಷಾಂತರ ಕುಟುಂಬಗಳು ಇದನ್ನು ಅವಲಂಬಿಸಿವೆ.

ವಿಜಯಪುರ ಜಿಲ್ಲೆಯ ತೊರವಿ ಗ್ರಾಮದಲ್ಲಿ 141 ಎಕರೆ ಜಾಗವನ್ನು ಈಗಾಗಲೇ ಮಂಡಳಿಗಳಿಗೆ ನೀಡಿದ್ದು ಈ ಜಾಗದಲ್ಲಿ ಒಣ ದ್ರಾಕ್ಷಿ ಸಂಗ್ರಹಿಸಲು ಕೋಲ್ಡ್ ಸ್ಟೋರೇಜೆ ಸೌಲಭ್ಯವನ್ನನು ಕಲ್ಪಿಸಬೇಕು.  ದ್ರಾಕ್ಷಿ ಹೆಚ್ಚಾಗಿ ಬೆಳೆಯುವ ತಾಲೂಕು ಮಟ್ಟದಲ್ಲಿ ದ್ರಾಕ್ಷಿ ಸಂಗ್ರಹಣ ಮತ್ತು ಸಂಸ್ಕರಣ ಹಾಗೂ ಸವiಗ್ರ ಪ್ಯಾಕ ಹೌಸ್ ನಿರ್ಮಾಣ ಕೇಂದ್ರಗಳನ್ನು ಸ್ಥಾಪಿಸಬೇಕು.  ಕೋಲ್ಡ್ ಚೈನ್ ವ್ಯವಸ್ಥೆಗಳನ್ನು ಒಳಗೊಂಡಿರುವ ಸಾಗಾಣಿಕೆ ವಾಹನಗಳನ್ನು ಒದಗಿಸಬೇಕು.  ಅಂತರರಾಷ್ಟ್ರೀಯ ಗುಣಮಟ್ಟದ ದ್ರಾಕ್ಷಿ ಒಣದ್ರಾಕ್ಷಿ ಹಾಗೂ ವೈನ್ ತಯಾರಿಕೆಗೆ ಅಗತ್ಯವಿರುವ ಉತ್ತಮ ಕೃಷಿ ಪದ್ದತಿಗಳುನ್ನು ಅಳವಡಿಸಲು ಅಗತ್ಯವಿರುವ ಪರಿಕರಗಳಿಗೆ ಸಹಾಯಧನ ಒದಗಿಸಬೇಕು.  ಪ್ರಚಾರ ಮತ್ತು ಉತ್ಪನ್ನ ಮಾರಾಟ ಗಣೀಕಿಕೃತ ಮಾರಾಟ ಮತ್ತು ಇತರ ಮಾಧ್ಯಮಗಳ ವೇಧಿಕೆ ಮಾದರಿ ವಿತರಣೆ ಐಟಿ ಪಾರ್ಕ ಗಳು ಉಧ್ಯಮಗಳ ಪಾರ್ಕ, ಅಪಾಟ್ರ್ಮಂಟ್ಸ, ಕ್ಲಬ್ ಮತ್ತು ಇತರ ಕಂಪನಿಗಳು/ಸಂಸ್ಥಗಳು, ತಾಂತ್ರಿಕ ಬೆಂಬಲ ಮತ್ತು ಬಿ ಯಿಂದ ಸಿ ಪೋರ್ಟಲ್ ಬ್ಯಾಂಡಿಂಗ್ ಲೋಗೊ ನೋಂದಣಿ ಹಾಗೂ ದ್ರಾಕ್ಷಿ ಮೇಳ, ಸಮ್ಮೇಳನ ಹಾಗೂ ಕಾರ್ಯಗಾರ ಏರ್ಪಡಿಸಬೇಕು.

ರಾಜ್ಯವು ವೈನ್ ಉತ್ಪಾದನೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.  ವೈನ್ ಟೂರಿಸಂ ವೈನ್ ಫಸ್ಟಿವಲ್, ವೈನ್ ಟೀಸ್ಟಿಂಗ್, ವೈನ್ ಟೂರ್ಸ ಮತ್ತು ವೈನ್‍ಗೆ ಸಂಬಂಧಿಸಿದ ಇತರ ಚಟುವಟಿಕೆಗಳಂತಹ ವ್ಯಾಪಕ ಶ್ರೇಣಿಯ ಚಟುವಟಿಕೆಗಳನ್ನು ವೈನ್ ಉತ್ಸಾಹಿಗಳಿಗೆ ನೀಡುತ್ತಿದೆ.  ಮುಂಬರುವ ವರ್ಷಗಳಲ್ಲಿ ವೈನ್ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದೆ.  ಇದನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ವೈನ್ ಬೋರ್ಡ ವ್ಯಾಪ್ತಿಗೆ ಬರುವ ವಿಜಯಪುರ ವೈನ್ ಪಾರ್ಕ ನಲ್ಲಿ ವೈನ್ ಟೂರಿಸಂ ಆರಂಭಿಸಲು ಉದ್ದೇಶಿಸಲಾಗಿದೆ. ಈ ಜಾಗದಲ್ಲಿ ವೈನ್ ದ್ರಾಕ್ಷಿ ತೋಟಗಳು, ವೈನ್ ರಿ ವೈನ್ ಬೋಟಿಕ್ ವೈನ್ ಸ್ಥಾಪಿಸಬೇಕು ಸೇರಿದಂತೆ ನಾನಾ ಬೇಡಿಕೆಗಳು ಈ ಮನವಿ ಪತ್ರದಲ್ಲಿದ್ದು, ಈ ಎಲ್ಲ ಬೇಡಿಕೆಗೆಳಿಗೆ ಅಗತ್ಯವಾಗಿರುವ ಒಟ್ಟು ಹಣವನ್ನೂ ಕೂಡ ಪ್ರಸ್ತಾಪಿಸಿ ಎಲ್ಲ ನೆರವನ್ನು ಬಜೆಟ್ ನಲ್ಲಿ ಒದಗಿಸಬೇಕು ಎಂದು ದ್ರಾಕ್ಷಿ ಬೆಳೆಗಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಂ. ಎಸ್. ರುದ್ರಗೌಡ್ರ, ಮುಖಂಡರಾದ ಡಾ. ಬಿ. ಎಸ್.ಪಾಟೀಲ ನಾಗರಾಳಹುಲಿ, ಸಂಜಯ ಪಾಟೀಲ ಕನಮಡಿ, ಸಂಗನಗೌಡ ಪಾಟೀಲ, ಪೀರಗೊಂಡ ಗದ್ಯಾಳ, ಶಿವರುದ್ರ ಬಾಗಲಕೋಟ, ಎಸ್. ಎಚ್. ನಾಡಗೌಡ ಮತ್ತು ಸಚಿವ ಆನಂದ ಸಿಂಗ ಕೂಡ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌