ಅಂಬೇಡ್ಕರ ಓರ್ವ ಮಹಾನ ಸಾಮಾಜಿಕ ಚಿಂತಕರು, ಸಮಾನತೆಯ ಹರಿಕಾರರು- ರಿಯಾಜ್ ಫಾರೂಕಿ

ವಿಜಯಪುರ: ಸಂವಿಧಾನ ಕತೃ ಡಾ. ಬಾಬಾಸಾಹೇಬ್ ಅಂಬೇಡ್ಕರ ಓರ್ವ ಸಾಮಾಜಿಕ ಚಿಂತಕಕರು.  ಸಮಾನತೆಯ ಹರಿಕಾರಾಗಿದ್ದರು ಎಂದು ಸಿಕ್ಯಾಬ್ ಎ. ಆರ್. ಎಸ್. ಇನಾಮದಾರ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ ಅಧ್ಯಕ್ಷ ಡಾ. ರಿಯಾಜ ಫಾರೂಕಿ ಹೇಳಿದರು.

ವಿಜಯಪುರ ನಗರದ ಜಲನಗರದಲ್ಲಿರುವ ಸಿಕ್ಯಾಬ್ ಎ ಆರ್ ಎಸ್ ಇನಾಮದಾರ ಕಲಾ, ವಿಜ್ಞಾನ, ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿದ್ಯಾರ್ಥಿನಿಯರಿಗೆ ಆಯೋಜಿಸಲಾದ ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಗಳ ಪರಿಚಯ ಕುರಿತು ಡಾ. ಅಂಬೇಡ್ಕರ್ ಓದು ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ಬಹಳ ಪವಿತ್ರವಾದದ್ದು. ದೇಶದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳು ಇದರ ಅಂಗಗಳಾಗಿದ್ದು, ಸಂವಿಧಾನ ದೇಶದ ಆತ್ಮವಿದ್ದಂತೆ.  ಅದಕ್ಕೆ ಎಲ್ಲರೂ ಗೌರವ ನೀಡಬೇಕು ಎಂದು ಹೇಳಿದ ಅವರು, ಅಂಬೇಡ್ಕರ ಒಬ್ಬ ಸಾಮಾಜಿಕ ಚಿಂತಕರಾಗಿದ್ದರು.  ಎಲ್ಲರೂ ಸಮನಾಗಿ ಬದುಕಲು ದಾರಿದೀಪವಾಗಿದ್ದ ಸಮಾನತೆಯ ಹರಿಕಾರರಾಗಿದ್ದರು ಎಂದು ಹೇಳಿದರು.

ಸಿಕ್ಯಾಬ್ ಎ ಆರ್  ಎಸ್ ಇನಾಮದಾರ ಕಲಾ, ವಿಜ್ಞಾನ, ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಮಹ್ಮದ ಅಪ್ಜಲ್ ಮಾತನಾಡಿ, ಶಿಕ್ಷಣ  ಒಂದು ದೊಡ್ಡ ಶಕ್ತಿಯಾಗಿದೆ.  ಎಷ್ಟೇ ಕಷ್ಟ ಬಂದರೂ ಎದುರಿಸುವ ಸಾಮರ್ಥ್ಯ ಇರಬೇಕು ಎನ್ನುವುದನ್ನು ನಾವು ಅಂಬೇಡ್ಕರ್ ಅವರಿಂದ ಕಲಿತುಕೊಳ್ಳಬೇಕಿದೆ ಎಂದು ಹೇಳಿದರು.

ಹಿರಿಯ ಸಾಹಿತಿ ದೊಡ್ಡಣ್ಣ ಬ ಬಜಂತ್ರಿ ವಿಶೇಷ ಉಪನ್ಯಾಸ ನೀಡಿ, ಅಂಬೇಡ್ಕರ್ ಅವರ ಸಾಧನೆ ಕೊಡುಗೆಗಳು ಅಪಾರವಾದದ್ದು,  ಅವರ ಜೀವನವು ಕಲ್ಲುಮುಳ್ಳುಗಳಿಂದ ಕೂಡಿತ್ತು.  ಆದರೂ ಶಿಕ್ಷಣವನ್ನು ಅಸ್ತ್ರವನ್ನಾಗಿಸಿಕೊಂಡು, ದಲಿತ ಸೂರ್ಯನಾಗಿ ಬೆಳೆದು, ಭಾರತದ ದಲಿತರ ಬಾಳಿಗೆ ಸೂರ್ಯ ರೂಪದಲ್ಲಿ ಸಮಾನತೆಯ ಬೆಳಕು ಚೆಲ್ಲಿದವರು ಎಂದು ಬಣ್ಣಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿನಿಯರಾದ ಕೀರ್ತಿ ಗುಡ್ಡೋಡಗಿ ಅವರಿಗೆ ರೂ. 3000 ಪ್ರಥಮ ಬಹುಮಾನ, ಐಶ್ವರ್ಯಾ ತೇಲಿ ಅವರಿಗೆ ರೂ. 2000 ದ್ವಿತೀಯ ಬಹುಮಾನ ಮತ್ತು ಜೈನಬ ನಾಗರಬಾವಡಿ ಅವರಿಗೆ ರೂ. 1500 ತೃತಿಯ ಮೌಲ್ಯದ ಮೌಲ್ಯದ ಪುಸ್ತಕಗಳನ್ನು ವಿತರಿಸಲಾಯಿತು.  ಸಮಾಧಾನಕರ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ಇತರ ವಿದ್ಯಾರ್ಥಿಗಳಿಗೆ ನೀಡಲಾಯಿತು.  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಡಾ. ಮಲ್ಲಿಕಾರ್ಜುನ ಮೇತ್ರಿ, ಪ್ರೊ. ಗಂಗಾಧರ ಭಟ, ಪ್ರೋ. ಎಂ. ಟಿ. ಕೋಟ್ನಿಸ್, ಪ್ರೊ. ಎಚ್. ಕೆ. ಯಡಹಳ್ಳಿ, ಡಾ. ಎಸ್. ಎಚ್. ಮಲಘಾಣ, ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌