ದ್ರಾಕ್ಷಿ ನಾಡಿನಲ್ಲಿ ಗಮನ ಸೆಳೆದ ಮಂಜು ಮುಸುಕಿದ ವಾತಾವರಣ

ವಿಜಯಪುರ: ದ್ರಾಕ್ಷಿ ನಾಡು ಎಂದೇ ಹೆಸರಾಗಿರುವ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಬೆಳ್ಳಂಬೆಳಿಗ್ಗೆ ಬದಲಾಗಿದ್ದ ವಾತಾವರಣ ಗಮನ ಸೆಳೆದಿದೆ.

ತಿಕೋಟಾ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಬೆಳ್ಳಂಬೆಳಿಗ್ಗೆ ಮಂಜು ಮುಸುಕಿದ ವಾತಾವರಣ ಉಂಟಾಗಿತ್ತು.

ಪ್ರತಿ ದಿನ ಬೆಳಿಗ್ಗೆ 6ಕ್ಕೆ ಸೂರ್ಯೊದಯ ಆಗುತ್ತಿತ್ತು. ಆದರೆ, ಬೆ. 8 ಗಂಟೆಯಾದರೂ ಸೂರ್ಯ ದೇವನ ದರ್ಶನ ಆಗಿರಲಿಲ್ಲ. ತಿಕೋಟಾ ತಾಲೂಕಿನ ಬಾಬಾನಗರ, ಕಳ್ಳಕವಟಗಿ, ಘೋಣಸಗಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಹುಬನೂರ, ಟಕ್ಕಳಕಿ, ಬಿಜ್ಜರಗಿ ಸೇರಿದಂತೆ ನಾನಾ ಗ್ರಾಮಗಳಲ್ಲಿ ಸಂಪೂರ್ಣ ಮಂಜು ಮುಸುಕಿದ ವಾತಾವರಣ ಸೃಷ್ಠಿಯಾಗಿತ್ತು. ಹತ್ತಿರದ ವಸ್ತುಗಳೂ ಕೂಡ ಸ್ಪಷ್ಟವಾಗಿ ಕಾಣಿಸದಷ್ಟು ದಟ್ಟಾದ ಮಂಜು ಕವಿದಿತ್ತುಮ

ರಸ್ತೆ ಮೇಲೆ ಸಂಚರಿಸುವ ವಾಹನಗಳ ಸವಾರರು ಹಗಲು ಹೊತ್ತಿನಲ್ಲಿನಲ್ಲಿಯೇ ಹೆಡಲೈಟ್ ಹಚ್ಚಿಕೊಂಡು ತಿರುಗಾಡಬೇಕಾದ ಪರಿಸ್ಥಿತಿ ಉಂಟಾಗಿತ್ತು.‌‌ ಬೆಳ್ಳಂಬೆಳಗ್ಗೆ ಸಾರ್ವಜನಿಕರಿಗೆ ಮೋಡಗಳ ಮೇಲೆ ಇದ್ದಂತೆ ಭಾಸವಾಯಿತು.

ಬಿಸಿಲನಾಡು ಬಸವನಾಡಿನ ದ್ರಾಕ್ಷಿ ಬೀಡಿನಲ್ಲಿ ಮಲೆನಾಡಿನ ಉಂಟಾಗಿತ್ತು ಎಂದು ಶಿಕ್ಷಕ ಪರಮೇಶ್ವರ ಗದ್ಯಾಳ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಹಣಮಪ್ಪನ ದೇವಾಲಯ ಮಂಜು ಮುಸುಕಿನ ವಾತಾವರಣದಲ್ಲಿ ಕಂಡು ಬಂದ ದೃಷ್ಯ ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತಿತ್ತು.

Leave a Reply

ಹೊಸ ಪೋಸ್ಟ್‌