ವಿಜಯಪುರ: ರಾಯಚೂರಿನಲ್ಲಿ ಅಂಬೇಡ್ಕರ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ ಎಂದು ಆರೊಪಿಸಿ ನಾನಾ ಪ್ರಗತಿಪರ ಸಂಘಟನೆಗಳ ಕಾರ್ಯಕರ್ಯರು ವಿಜಯಪುರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ವಿಜಯಪುರ ನಗರದ ಆರಾಧ್ಯ ದೈವ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ಯರು, ರಾಯಚೂರು ಜಿಲ್ಲಾ ನ್ಯಾಯದೀಶರ ವಿರುದ್ಧ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಗಾಂಧಿಚೌಕ್, ಬಸವೇಶ್ವರ ಚೌಕ್ ಮೂಲಕ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಅಂಬೇಡ್ಕರ ಚೌಕಿನಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲದೇ, ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು. ಅಷ್ಟೇ ಅಲ್ಲ, ಪ್ರತಿಕೃತಿ ದನಹ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಿಗೆ ನಾನಾ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಭೀಮಶಿ ಕಲಾದಗಿ, ವಿದ್ಯಾವತಿ ಅಂಕಲಗಿ, ಶ್ರೀನಾಥ ಪೂಜಾರಿ, ಸಿದ್ದಲಿಂಗ ಬಾಗೇವಾಡಿ, ಭಗವಾನರೆಡ್ಡಿ, ಸದಾನಂದ ಮೋದಿ, ಘಂಟೆಪ್ಪಗೋಳ, ಪ್ರಭುಗೌಡ, ಅಕ್ಷಯಕುಮಾರ, ಸಲೀಂ ಮುಂಡೇವಾಡಿ, ದ್ರಾಕ್ಷಿ, ಮಾರುತಿ ಬೂದಿಹಾಳ, ಭಾರತಿ ಹೊಸಮನಿ, ನಿರ್ಮಲಾ ಹೊಸಮನಿ, ಗೋಪಿ ಚಲವಾದಿ, ಆರತಿ ಶಾಪೂರ ಸೇರಿದಂತೆ ನಾನಾ ಪ್ರಗತಿಪರ ಸಂಘಟನೆಗಳ ನೂರಾರು ನಾನಾ ಮುಖಂಡರು ಉಪಸ್ಥಿತರಿದ್ದರು.