ಗಾಂಧೀಜಿ ಕನಸು ನನಸು ಮಾಡುವಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ- ಜಾವೀದ ಜಮಾದಾರ

ವಿಜಯಪುರ: ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಮತ್ತು ಜವಾಬ್ದಾರಿ ಮಹತ್ವದ್ದಾಗಿದೆ. ಯುವಕರು ದೇಶದ ಪ್ರಗತಿಯಲ್ಲಿ ಸಕ್ರೀಯರಾಗಬೇಕು. ರಾಷ್ಟ್ರೀಯ ಏಕತೆ ಸಮಗ್ರತೆ ಕಾಪಾಡಲು ಪಣತೊಡಬೇಕ ಉ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ಫೆಡರೇಶನ್‌ದ ರಾಷ್ಟ್ರೀಯ ಅಧ್ಯಕ್ಷ ಡಾ. ಜಾವೀದ ಜಮಾದಾರ ಹೇಳಿದ್ದಾರೆ.

ವಿಜಯಪುರದಲ್ಲಿ ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೇಂದ್ರ ನೆಹರು ಯುವಕ ಕೇಂದ್ರ, ವಿಜಯಪುರ ಜಿಲ್ಲಾಡಳಿತ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ಎನ್.ಎಸ್.ಎಸ್., ಕ್ಷೇತ್ರ ಜನಸಂಪರ್ಕ ಇಲಾಖೆ, ಬಿ ಎಲ್ ಡಿ ಇ ಡಾ. ಫ. ಗು. ಹಳಕಟ್ಟಿ ಕಾಲೇಜು ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯ, ಹಾಗೂ ಅಲಿಯಾಬಾದಿನ ಜೈ ಹನುಮಾನ ಯುವಕ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಯುವ ಸಮಾವೇಶ 2021-22 ಕಾಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮಾ ಗಾಂಧೀಜಿಯವರ ಸ್ವಚ್ಛ ಮತ್ತು ಆರೋಗ್ಯಕರ ಭಾರತದ ಕನಸನ್ನು ಈಡೇರಿಸಬೇಕಿದೆ. ಸ್ವಚ್ಛ ಭಾರತ ಚಳವಳಿ ಮೂಲಕ ಜನರಲ್ಲಿ ಜವಾಬ್ದಾರಿಯ ಅರಿವನ್ನು ಮೂಡಿಸಬೇಕಾಗಿದೆ. ಯುವಜನಾಂಗ ಆಧುನಿಕ ಜಗತ್ತಿನಲ್ಲಿ ದಿನನಿತ್ಯ ಕ್ರೀಯಾಶೀಲತೆ ಕಡೆಗೆ ಗಮನ ಹರಿಸಿ ನವೀನ ಬದುಕು ರೂಪಿಸಿಕೊಳ್ಳುವತ್ತ ಯೋಚಿಸಬೇಕು. ಈ ದೇಶದ ಭವಿಷ್ಯ ಯುವಜನಾಂಗದ ಮೇಲೆ ನಿಂತಿದೆ. ದೇಶಕ್ಕಾಗಿ ನಮ್ಮ ಅಳಿಲು ಸೇವೆ, ಸ್ವಾಭಿಮಾನ ಸ್ವದೇಶಿ ಅಭಿಮಾನ ಸದಾ ನಮ್ಮಲ್ಲಿ ಚಿಮ್ಮುತ್ತಿರಬೇಕು ಎಂದು ಅವರು ಹೇಳಿದರು.

ಮುಖ್ಯ ಉಪನ್ಯಾಸಕರಾಗಿ ಮಾತನಾಡಿದ ಸಂತೋಷ ಬಂಡೆ, ದೇಶದ ಪ್ರತಿಯೊಂದು ಸಾರ್ವಜನಿಕ ಆಸ್ತಿಪಾಸ್ತಿಗಳು ಸ್ವಚ್ಛವಾಗಿದ್ದು, ಅಲ್ಲಿನ ಪರಿಸರ ನಿರ್ಮಲವಾಗಬೇಕು. ಪ್ರತಿಯೊಂದು ಮನೆ ಮತ್ತು ವ್ಯಕ್ತಿಯ ಒಳಗಿನ ಮನುಷ್ಯ ಜಾಗೃತನಾಗಬೇಕು. ಯುವಕರಲ್ಲಿ ಸ್ವಚ್ಛತೆಯ ಅರಿವು ಮೂಡಬೇಕು. ಆಗ ಮಾತ್ರ ಸುಸ್ಥಿರ ರಾಷ್ಟ್ರನಿರ್ಮಾಣ ಸಾಧ್ಯ ಎಂದು ಹೇಳಿದರು.

ದರಬಾರ ಡಿಗ್ರಿ ಕಾಲೇಜಿನ ಉಪನ್ಯಾಸಕ ಸುನೀಲ ಯಾದವ ಮಾತನಾಡಿ, ಗಾಂಧೀಜಿ ಕಂಡ ಕನಸು ನನಸು ಮಾಡುವುದು. ಸ್ವಚ್ಛ ದೇಶವನ್ನು ನಿರ್ಮಾಣ ಮಾಡುವುದು, ಯುವಜನತೆಯ ಮುಖ್ಯ ಗುರಿಯಾಗಬೇಕಾಗಿದೆ ಎಂದು ಹೇಳಿದರು.

ಕ್ಷೇತ್ರ ಪ್ರಚಾರ ಸಹಾಯಕರು ಸಿ. ಕೆ. ಸುರೇಶ ಮಾತನಾಡಿ, ಕ್ಷೇತ್ರ ಜನಸಂಪರ್ಕ ಇಲಾಖೆಯಿಂದ ಯುವಕರಿಗಾಗಿ ಇರುವ ಯೋಜನೆ ಹಾಗೂ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ನೆಹರು ಯುವಕ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಾಹುಲ ಡೊಂಗ್ರೆ ಅವರು ವಿಜಯಪುರ ಭಾರತ ಸರಕಾರದ ವಿವಿದ ಯೋಜನೆಗಳ ಮಾಹಿತಿಯನ್ನು ನೀಡಿದರು.

ಅಧ್ಯಕ್ಷತೆ ವಹಿಸಿದ ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನ ಸಾಯಿನ್ಸ್ ಮತ್ತು ಹ್ಯಮನಿಟೀಜ್ ವಿಭಾಗದ ಮುಖ್ಯಸ್ಥ ಡಾ. ಎಸ್. ಸಿ. ದೇಸಾಯಿ ಮಾತನಾಡಿ, ಭಾರತ ಸರಕಾರವು ಯುವಕರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಯುವಕರು ಈ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಯೋಜನೆಯ ಜೊತೆಗೆ ಯುವಕರ ಕನಸುಗಳು ನನಸಾಗಲು ಸಾಧ್ಯ ಎಂದು ಹೇಳಿದರು.

ನಾನಾ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ರಾಜ್ಯಮಟ್ಟದ ಯುವ ಸಂಸತ್ತಿನಲ್ಲಿ ಭಾಗವಹಿಸಿದ ಯುವಕರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಯುವಸಂಘದ ಅಧ್ಯಕ್ಷ ಸುರೇಶ ಜಾಧವ ಸ್ವಾಗತಿಸಿದರು. ‌ಡಾ. ಕೈಲಾಸ ಚಡಚಣ ನಿರೂಪಿಸಿದರು. ಡಾ. ಮಲ್ಲಿನಾಥ ಡಾಂಗೆ ವಂದಿಸಿದರು.

ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ಹಾಗೂ ಸಿಬ್ಬಂದಿಯವರು ಮತ್ತು ರಾಷ್ಟ್ರೀಯ ಯುವ ಸ್ವಯಂ ಸೇವಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌