ನೆರೆದ ಜನರ ಮೈ ನವಿರೇಳಿಸಿದ ಕಿತ್ತೂರು ರಾಣಿ ಚೆನ್ನಮ್ಮಳ ಯಶೋಗಾಥೆ ರೂಪಕ- ಶಾಲೆಯ 120 ವಿದ್ಯಾರ್ಥಿಗಳಿಂದ ಪಾತ್ರಾಭಿನಯ

ವಿಜಯಪುರ: ಕಿತ್ತೂರು ರಾಣಿ ಎಂದರೆ ಸಾಕು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಧೀರ ಮಹಿಳೆ ವೀರ ರಾಣಿ ಎಂದೇ ಎಲ್ಲರೂ ಸ್ಮರಿಸುತ್ತಾರೆ.  ಅಲ್ಲದೇ, ಕಿತ್ತೂರು ಚೆನ್ನಮ್ಮಳನ್ನು ಎಲ್ಲ ಮಹಿಳೆಯರು ಆರಾಧಿಸುವುದು ಉಂಟು.  ಇಂಥ ವೀರ ರಾಣಿ ಬ್ರಿಟಿಷರ ವಿರುದ್ಧ ನಡೆಸಿದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಯಶೋಗಾಥೆಯನ್ನು ಗೊತ್ತಿಲ್ಲದವರು ಬಹಳ ಕಡಿಮೆ.  ಪುಸ್ತಕಗಳಲ್ಲಿ ಸಿನೇಮಾಗಳಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಆಕೆಯ ಬಲಗೈ ಭಂಟ ಸಂಗೊಳ್ಳಿ ರಾಯಣ್ಣನ ಹೋರಾಟದ ಜೀವನವನ್ನು ನೋಡಿರಬಹುದು. ಆದರೆ, ಅಂದಿನ ಹೋರಾಟದ ರೋಚಕತೆಯನ್ನು ಮಕ್ಕಳು […]

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 3, 4ನೇ ಕಂತಿನ ರೂ. 731 ಕೋ. ಬಿಡುಗಡೆ- ಸಿಎಂ ಗೆ ಶಾಸಕ ದತ್ತಾತ್ರೆಯ ಪಾಟೀಲ ರೇವೂರ ಅಭಿನಂದನೆ

ಬೆಂಗಳೂರು: ಸರಕಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರಸಕ್ತ ಸಾಲಿನ 3 ಮತ್ತು 4ನೇ ಕಂತಿನ ರೂ. 731 ಕೋ. ಅನುದಾನ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಮತ್ತು ಕಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಧನ್ಯವಾದ ಅರ್ಪಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಸಚಿವ ಗೋವಿಂದ ಕಾರಜೋಳ, ಹಾಲಪ್ಪ ಆಚಾರ, ಶಾಸಕರಾದ […]

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಓಬವ್ವ ಆತ್ಮ ರಕ್ಷಣಾ ಕಲೆ  ತರಬೇತಿ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಉದ್ಘಾಟಿಸಿದರು.   ವಿಧಾನಸೌಧದ ಮಹಾ ಮೆಟ್ಟಿಲುಗಳ ಮೇಲೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನೀರೆರೆಯುವ ಮೂಲಕ ಸಿಎಂ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಆತ್ಮ ರಕ್ಷಗೆ ಕಲಿತ ವಿದ್ಯೆಯನ್ನು ಪ್ರದರ್ಶಿಸಿದರು.  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಹಾಲಪ್ಪ ಆಚಾರ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, […]

ಭಾರತೀಯ ಕಿರಿಯರ ತಂಡಕ್ಕೆ U19 ಕ್ರಿಕೆಟ್ ವಿಶ್ವಕಪ್ ಕಿರೀಟ- ಆಟಗಾರರು, ತಂಡದ ಸಿಬ್ಬಂದಿಗೆ ಬಿಸಿಸಿಐ ಬಹುಮಾನ ಘೋಷಣೆ

ವಿಜಯಪುರ: ವೆಸ್ಟ್ ಇಂಡೀಸ್ ನಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಜಯಿಸುವ ಮೂಲಕ ಭಾರತಿಯ ಕ್ರಿಕೆಟ್ ತಂಡ 5ನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಕಿರಿಯರ ತಂಡ ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಗಳ ಜಯಭೇರಿ ಬಾರಿಸುವ ಮೂಲಕ ಮತ್ತೆ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದೆ.  ಇದಕ್ಕೂ ಮುಂಚೆ ಭಾರತೀಯ ಕಿರಿಯರ ತಂಡ 2000, 2008, 2012 ಮತ್ತು 2016ರಲ್ಲಿಯೂ ವಿಶ್ವಕಪ್ ಗೆದ್ದಿತ್ತು.  ಈಗ 5ನೇ ಬಾರಿಗೆ ಗೆಲ್ಲುವ ಮೂಲಕ ಕಿರಿಯರ […]

ಅಂಬೇಡ್ಕರ ಭಾವಚಿತ್ರವನ್ನು ಎಲ್ಲ ಕೋರ್ಟಗಳಲ್ಲಿ ಇರಿಸುವ ನಿರ್ಧಾರ ಸಂತಸದಾಯಕ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಅಗಷ್ಟ-15 ಸ್ವಾತಂತ್ರ್ಯ ದಿನ ಹಾಗೂ ನವೆಂಬರ 26 ರ ಸಂವಿಧಾನ ದಿನ ಹಾಗೂ ಜನೇವರಿ-26 ರ ಗಣರಾಜ್ಯೋತ್ಸವ ದಿನಗಳಂದು ಸಂವಿಧಾನ ಶಿಲ್ಪಿ ಡಾ: ಬಾಬಾಸಾಹೇಬ ಅಂಬೇಡ್ಕರ ಅವರ ಭಾವಚಿತ್ರವನ್ನು ಎಲ್ಲ ಕೋರ್ಟಗಳಲ್ಲಿ ಇರಿಸುವ ಹೈಕೋರ್ಟ ನಿರ್ಧಾರ ಸಂತಸ ತಂದಿದೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ. ಈ ಕುರಿತು ಪ್ರತ್ರಿಕಾ ಪ್ರಕಟಣೆ ನೀಡಿರುವ ಅವರು, ಇದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ನ್ಯಾಯ ಒದಗಿಸಿದಂತಾಗಿದೆ.  ಹೈಕೋರ್ಟ ಮುಖ್ಯ ನ್ಯಾಯಮೂರ್ತಿ ಋತುರಾಜ ಅವಸ್ಥಿ ಅವರ […]